ಧಾರವಾಡ

ಮತದಾರ ಸೇರ್ಪಡೆ ಕಾರ್ಯ ಪೂರ್ಣ

Published On :

ಧಾರವಾಡ:  ಧಾರವಾಡ ಲೋಕಸಭಾ ಕ್ಷೇತ್ರದ 1703 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಅಂತಿಮ ಹಂತದ ಮತದಾರ ಸೇರ್ಪಡೆ ಕಾರ್ಯಕ್ರಮ ಭಾನುವಾರ ಅಂತ್ಯಗೊಂಡಿದೆ ಎಂದು ಜಿಲ್ಲಾಧಿಕಾರಿ ಸಮೀರ ಶುಕ್ಲ ಮಾಹಿತಿ ನೀಡಿದ್ದಾರೆ.
ಭಾನುವಾರ ನಡೆದ ಮತದಾರ ಹೆಸರು ಸೇರ್ಪಡೆ ಕಾರ್ಯ ಪರಿಶೀಲಿಸಿ ಮಾತನಾಡಿದರು. ಜನವರಿ 31ರ ವರೆಗೆ ಈಗಾಗಲೇ ಮತದಾರ ಪಟ್ಟಿ ಸಿದ್ಧಗೊಂಡಿದೆ. ಫೆಬ್ರವರಿ 1ರಿಂದ ಮಾರ್ಚ್ 16ರ ವರೆಗೆ ಮತದಾರ ಪಟ್ಟಿಗೆ ಹೆಸರು ಸೇರ್ಪಡೆಯ ಪಟ್ಟಿಯನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದರು.
ಜನವರಿ ವರೆಗೆ ಸಿದ್ಧಪಡಿಸಿದ ಮತದಾರ ಪಟ್ಟಿ ಪ್ರಕಾರ ಪುರುಷ ಮತದಾರರ ಸಂಖ್ಯೆ 7,85,594, ಮಹಿಳಾ ಮತದಾರರ ಸಂಖ್ಯೆ 7,45,884 ಇದ್ದು, ಒಟ್ಟು 1,53,1478 ಮತದಾರರಿದ್ದಾರೆ.  ಫೆ. 1ರಿಂದ ನಡೆದ ಮತದಾರ ಪಟ್ಟಿ ಪರಿಷ್ಕರಣೆಯಿಂದ ಮತದಾರರ ಸಂಖ್ಯೆ ಇನ್ನೂ ಹೆಚ್ಚಾಗಬಹುದಾಗಿದೆ. ನವಲಗುಂದ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 219 ಮತಗಟ್ಟೆಗಳಲ್ಲಿ 95,003 ಪುರುಷ ಮತದಾರರು, 90021 ಮಹಿಳಾ ಮತದಾರರು ಇದ್ದು, ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿನ 88,534 ಪುರುಷರು ಹಾಗೂ 81,307 ಮಹಿಳಾ ಮತದಾರರಿದ್ದಾರೆ. ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ 95,642 ಪುರುಷರು, 92342 ಮಹಿಳಾ ಮತದಾರರಿದ್ದಾರೆ.     ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದಲ್ಲಿ 91,889 ಪುರುಷ ಹಾಗೂ 89604 ಮಹಿಳಾ ಮತದಾರರಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ 1,09,601 ಪುರುಷರು, 1,07,611 ಮಹಿಳಾ ಮತದಾರರಿದ್ದಾರೆ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ 226 ಮತಗಟ್ಟೆಗಳಲ್ಲಿ 1,14,845 ಪುರುಷ ಹಾಗೂ 1,13,651 ಮಹಿಳಾ ಮತದಾರರಿದ್ದಾರೆ. ಕಲಘಟಗಿ ವಿಧಾನ ಸಭಾ ಕ್ಷೇತ್ರದ 220 ಮತಗಟ್ಟೆಗಳ ವ್ಯಾಪ್ತಿಯಲ್ಲಿ 89,058 ಪುರುಷ ಹಾಗೂ 82,350 ಮಹಿಳಾ ಮತದಾರರಿದ್ದಾರೆ. ಶಿಗ್ಗಾಂವ ವಿಧಾನ ಸಭಾ ಕ್ಷೇತ್ರದದಲ್ಲಿ 1,01,022 ಪುರುಷ ಹಾಗೂ 88,998 ಮಹಿಳಾ ಮತದಾರರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.