ಧಾರವಾಡ

ಧಾರವಾಡ: ನಾಳೆ ಪಾಪುಗೆ ಸನ್ಮಾನ

Published On :

ಧಾರವಾಡ:  ಇಲ್ಲಿಯ ದಿ.ತೇಜಪ್ಪ ಮಹಾಬಲ ಶೆಟ್ಟಿ ವಿಚಾರ ವೇದಿಕೆಯ ವತಿಯಿಂದ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ಬಿ.ಆರ್. ಶೆಟ್ಟಿ ಹೇಳಿದರು. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖ್ಯಾತ ಹೊಟೇಲ್ ಉದ್ಯಮಿಯಾಗಿದ್ದ ದಿ.ತೇಜಪ್ಪ ಶೆಟ್ಟಿಯವರ 90 ನೇ ಹುಟ್ಟುಹಬ್ಬವನ್ನು ಮಾ. 30ರ ಸಂಜೆ 6ಕ್ಕೆ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ  ಸಮಾಜ ಸೇವೆಗಾಗಿ ತಮ್ಮನ್ನು ತಾವು ಮುಡಿಪಾಗಿಟ್ಟ ಒಬ್ಬರನ್ನು ಪ್ರತಿ ವರ್ಷ ಸನ್ಮಾನಿಸಲು ವೇದಿಕೆ ತೀರ್ಮಾನಿಸಿದ್ದು, ಈ ಬಾರಿ ಹಿರಿಯ ಪತ್ರಕರ್ತ ಹಾಗೂ ಹೋರಾಟಗಾರ ಡಾ. ಪಾಟೀಲ ಪುಟ್ಟಪ್ಪನವರನ್ನು ಸನ್ಮಾನಿಸಲಾಗುವುದು ಎಂದರು.ಸಾನ್ನಿಧ್ಯವನ್ನು ಎ.ಪಿ. ಪಾಟೀಲ ಗುರೂಜಿ ಅಲಂಕರಿಸಲಿದ್ದಾರೆ. ಅತಿಥಿಗಳಾಗಿ ಬಳ್ಳಾರಿ ಬಂಟರ ಸಂಘದ ಅಧ್ಯಕ್ಷ ಸುರೇಶ ಶೆಟ್ಟಿ, ಉಡುಪಿ ಬಂಟರ ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಹುಬ್ಬಳ್ಳಿ ವಿಜಯಾ ಬ್ಯಾಂಕ್ ಮ್ಯಾನೇಜರ್ ಶ್ರೀಧರ ಶೆಟ್ಟಿ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಹುಬ್ಬಳ್ಳಿ- ಧಾರವಾಡ ಬಂಟರ ಸಂಘದ ಕಾರ್ಯಾಧ್ಯಕ್ಷ ಮಹೇಶ ಶೆಟ್ಟಿ  ವಹಿಸಿಕೊಳ್ಳಲಿದ್ದಾರೆ. ನಂತರ ಇಲ್ಲಿಯ ಯಕ್ಷಗಾನ ಮತ್ತು ಸಂಸ್ಕೃತಿ ಸಂಘದಿಂದ ಯಕ್ಷಗಾನವಾದ ಸುಧಾನ್ವಾರ್ಜುನ ಮೂಡಿಬರಲಿದೆ. ಯಕ್ಷಗಾನದ ಹಿಮ್ಮೇಳನದಲ್ಲಿ ಭಾಗವತರಾಗಿ ಮಂಜುನಾಥ ಹೆಗಡೆ ನೆಟ್ಗಾರ ಹಾಗೂ ಮದ್ದಳೆಯನ್ನು ಪರಮೇಶ್ವರ ಹೆಗಡೆ ತಾರೇಸರ, ಚಂಡೆಯನ್ನು ಮಹಾಬಲೇಶ್ವರ ನಾಯ್ಕನಕೆರೆ ನುಡಿಸುವರು. ಸಮ್ಮೇಳನದಲ್ಲಿ ಸುರೇಶ ಹೆಗಡೆ, ಸುಬ್ರಹ್ಮಣ್ಯ ಹೆಗಡೆ, ವಿನಾಯಕ ಭಟ್ಟ, ಎಸ್.ಆರ್.ಹೆಗಡೆ, ಹರ್ಷ ಭಟ್ಟ, ಎಲ್.ಜಿ.ಹೆಬ್ಬಾರ, ಪ್ರಭಾಕರ ಶೆಟ್ಟಿ, ಅನಿಮೇಶ ಹೆಗಡೆ ಭಾಗವಹಿಸುವರೆಂದು ಶೆಟ್ಟಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ದಿನೇಶ ಶೆಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.