ಮತ ಕೊಡಿ ಮತ ಕೊಡಿ ಮತಾ ಕೊಡಿ...
ಹುಬ್ಬಳ್ಳಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ವೀಪ್ ಯೋಜನೆಯಡಿ ಮತದಾನ ಜಾಗೃತಿಗಾಗಿ ಜಾಥಾ ಹಾಗೂ ಮಾನವ ಸರಪಳಿಯನ್ನು ಮಹಾನಗರ ಪಾಲಿಕೆ ವತಿಯಿಂದ ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಅವರು ಸ್ಟೇಶನ್ ರಸ್ತೆಯ ಡಾ. ಬಿ.ಆರ್. ಅಂಬೇಡ್ಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಪ್ರತಿಮೆಯ ಸ್ಥಳದಿಂದ ಇಂದಿರಾ ಗಾಜಿನ ಮನೆಯ ಆವರಣದವರೆಗೆ ಮತದಾನ ಜಾಗೃತ ಕುರಿತು ಜಾಥಾ ನಡೆಯಿತು.
ದೇಶಪಾಂಡೆ ಫೌಂಡೇಶನ್ ಹಾಗೂ ನಗರ ಸ್ತ್ರೀಶಕ್ತಿ ಸಂಘದ ಸದಸ್ಯರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ಮಾಡಿ ಮೇಣಬತ್ತಿ ದೀಪ ಬೆಳಗುವ ಮೂಲಕ ಗಮನ ಸಳೆಯಲಾಯಿತು. ನಂತರ ಜಾಗೃತಿ ಜಾಥಾ ಇಂದಿರಾ ಗಾಜಿನ ಮನೆಯ ಆವರಣದ ಒಳಗೆ ವಿಶೇಷ ಸಂದೇಶ ಹಾಗೂ ಮತದಾನದ ಘೋಷಣೆಗಳೊಂದಿಗೆ ಮುಕ್ತಾಯಗೊಂಡಿತು. ದೇಶಪಾಂಡೆ ಫೌಂಡೇಶನ ಸ್ಥಳಿಯ ನಿರ್ದೇಶಕ ನವೀನ ಝಾ, ಪಾಲಿಕೆಯ ವಿಶೇಷ ಅಧಿಕಾರಿ ಎಸ್.ಎಚ್. ನರೇಗಲ್, ವಲಯ ಕಚೇರಿಯ ಸಹಾಯಕ ಆಯುಕ್ತರು, ದೇಶಪಾಂಡೆ ಫೌಂಡೇಶನ್ನ ವಿದ್ಯಾರ್ಥಿಗಳು, ನಗರ ಸ್ತ್ರೀಶಕ್ತಿ ಸಂಘದ ಸದಸ್ಯರು ಜಾಥಾದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳ ಸೆಕ್ಟರ್ ಅಧಿಕಾರಿಗಳಿಗೆ ವಿದ್ಯುನ್ಮಾನ ಮತಯಂತ್ರ ನಿರ್ವಹಣೆ ಕುರಿತು ವಿವರವಾಗಿ ತರಬೇತ್ನಿ ನೀಡಲಾಯಿತು.
ತರಬೇತಿ ಅವಧಿಯಲ್ಲಿ ಮತದಾನದ ಪೂರ್ವಭಾವಿಯಾಗಿ ಹಾಗೂ ಮತದಾನ ಸಮಯದಲ್ಲಿ ಮತ್ತು ಮತದಾನದ ಮುಕ್ತಾಯದ ನಂತರ ಮತ ಯಂತ್ರಗಳ ನಿರ್ವಹಣೆ ಕುರಿತು ತರಬೇತಿ ನೀಡಿ ಸೆಕ್ಟರ್ ಅಧಿಕಾರಿಗಳಿಂದ ಪ್ರಾತ್ಯಕ್ಷಿಕೆ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

