ಧಾರವಾಡ

ವೀರಶೈವ ಮಹಾಸಭೆಗೆ ದ್ರೋಹ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 17
ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯದಲ್ಲಿ ಎರಡು ಹೋಳಾಗಲು ಭೀಮಣ್ಣ ಖಂಡ್ರೆ ಹಾಗೂ ಗುರುರಾಜ ಹುಣಸಿಮರದ ಕಾರಣ ಎಂದು ವೀರಶೈವ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಶಿವಣ್ಣ ಬೆಲ್ಲದ ನೇರವಾಗಿಯೇ ಆರೋಪಿಸಿದ್ದಾರೆ.
ಮೇ 18ರಂದು ಮಹಾಸಭಾ ಜಿಲ್ಲಾ ಸಮಿತಿಗೆ ಚುನಾವಣೆ ನಡೆಯಲಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಗುರುರಾಜ ಹುಣಸೀಮರದ ಅವರು ಶಿವಣ್ಣ ಬೆಲ್ಲದ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಈ ಕುರಿತಂತೆ ಶಿವಣ್ಣ ಬೆಲ್ಲದ ಶನಿವಾರ ಸುದ್ದಿಗೋಷ್ಠಿ ನಡೆಸಿ, ಹುಣಸಿಮರದ ಲಿಂಗಾಯತ ಸಮಾಜದ ವಿರುದ್ಧ ಸದಾ ಸುಳ್ಳು ಆಪಾದನೆ ಮಾಡುತ್ತ ಸಮಾಜಕ್ಕೆ ದ್ರೋಹ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ವತಃ ತಾವು ಸಮಾಜದ ಮುಖಂಡರಿಂದ ದಾನ ಸಂಗ್ರಹಿಸಿದ್ದಲ್ಲದೇ, 2007ರಲ್ಲಿ ಅಧ್ಯಕ್ಷನಾಗಿದ್ದಾಗ ರು. 10 ಲಕ್ಷ ದೇಣಿಗೆ ನೀಡಿ ಮಹಾಸಭಾ ಕಟ್ಟಡ ಕಾಮಗಾರಿ ಆರಂಭಿಸಿದ್ದಾಗಿ ತಿಳಿಸಿದರು.
ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ರು. 2 ಕೋಟಿ ಅನುದಾನ ಬಿಡುಗಡೆ ಮಾಡಿಸಿಕೊಳ್ಳಲಾಗಿದೆ. ಆದರೆ ಸ್ವಾರ್ಥಿಗಳಾದ ಹುಣಸೀಮರದ, ಜಿ.ಜಿ. ದೊಡವಾಡ, ಎಸ್.ಆರ್. ರಾಮನಗೌಡರ ವಿರೋಧಿ ಗುಂಪು ಕಟ್ಟಿಕೊಂಡು ಕಟ್ಟಡದ ಕಾರ್ಯ ಸ್ಥಗಿತಗೊಳಿಸಲು ಪ್ರಯತ್ನಿಸಿದರು ಎಂದು ಆರೋಪಿಸಿದರು.
ಮಹಾಸಭೆಗೆ ಸದಸ್ಯರನ್ನು ನೇಮಕ ಮಾಡಿಲ್ಲವೆಂದು ತಮ್ಮ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಜಿ.ಜಿ. ದೊಡವಾಡರು ಅಧ್ಯಕ್ಷರಾಗಿದ್ದಾಗ ಕೇವಲ 98 ಸದಸ್ಯರಿದ್ದರು. ಅದರಲ್ಲೂ 56 ಸದಸ್ಯರನ್ನು ತಾವೇ ನೇಮಿಸಿದ್ದು. ತಮ್ಮ ಅವಧಿಯಲ್ಲಿ 376 ಸದಸ್ಯರನ್ನು ನೇಮಕ ಮಾಡಲಾಗಿದೆ. ಸಮಾಜದ ಸಂಘಟನೆ ಶ್ರಮಿಸಿದ ತಮ್ಮ  ಮೇಲೆ ಅನೇಕ ಆರೋಪಗಳನ್ನು ಮಾಡಿದ್ದು, ಚುನಾವಣೆಯಲ್ಲಿ ಸಮಾಜದ ಜನರು ವಿರೋಧಿ ಗುಂಪಿಗೆ ತಕ್ಕ ಪಾಠ ಕಲಿಸುತ್ತಾರೆಂದು ಬೆಲ್ಲದ ಎಚ್ಚರಿಕೆ ನೀಡಿದರು.
ಸದಾನಂದ ಶಿವಳ್ಳಿ, ಎಸ್.ಜಿ. ಬೆಟಗೇರಿ, ಪ್ರೊ. ವಿ.ಸಿ. ಸವಡಿ, ಬಸವಂತಪ್ಪ ತೋಟದ, ಎಸ್.ಕೆ. ಕಲಬಶೆಟ್ಟರ, ವಿ.ಎಸ್. ಪಾಟೀಲ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.