ಜಿಲ್ಲಾದ್ಯಂತ ನಾಗರಪಂಚಮಿ ಸಂಭ್ರಮ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಆ.11
ಶ್ರಾವಣ ಮಾಸದ ಪ್ರಮುಖ ಹಬ್ಬವೆನಿಸಿದ ನಾಗರಪಂಚಮಿಯನ್ನು ಭಾನುವಾರ ನಗರ ಸೇರಿದಂತೆ ಜಿಲ್ಲಾದ್ಯಂತ ಜನತೆ ಸಡಗರ- ಸಂಭ್ರಮದಿಂದ ಆಚರಿಸಿದರು.
ನಗರದಲ್ಲಿ ಮಹಿಳೆಯರು ನಾಗರ ಕಲ್ಲು ಮತ್ತು ಹುತ್ತುಗಳಿಗೆ ಹಾಲೆರೆಯುವ ದೃಶ್ಯ ಸಾಮಾನ್ಯವಾಗಿತ್ತು. ನಗರದ ಜಿಲ್ಲಾ ಕೋರ್ಟ್ ಹತ್ತಿರದ ಆದಿಶೇಷ ದೇವಾಲಯ, ಬ್ರಹ್ಮಪುರ, ಶಹಾಬಜಾರ, ಜಗತ್, ರಾಜಾಪುರ, ಜೇವರ್ಗಿ ಕಾಲೋನಿ, ಗಾಜಿಪುರ ಮುಂತಾದ ಕಡೆ ಮಹಿಳೆಯರು ದೇವಸ್ಥಾನಗಳಿಗೆ ತೆರಳಿ ನಾಗದೇವರಿಗೆ ಸಾಂಪ್ರದಾಯಕ ಪೂಜೆ ಸಲ್ಲಿಸಿದರು. ವಿವಿಧ ಹೂವು, ಗರಿಕೆ, ಉತ್ತರಾಣಿ, ಎಲೆ, ಅರಳು, ತಂಬಿಟ್ಟು ಸಿದ್ದ ಪಡಿಸಿಕೊಂಡು ನಾಗದೇವನನ್ನು ಪೂಜಿಸಿದರು. ಪಂಚಮಿಗೆಂದು ವಿಶೇಷವಾಗಿ ತಯಾರಿಸಿದ ಸಿಹಿ ಖಾರದ ಪದಾರ್ಥಗಳನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡರು.
ಈ ಶ್ರಾವಣ ಮಾಸದಲ್ಲಿಯೇ ಬರುವ ನಾಗಪಂಚಮಿ ಗ್ರಾಮೀಣ ನಗರ ಪ್ರದೇಶಗಳಲ್ಲಿ ಸಂಭ್ರಮದಿಂದ ಆಚರಿಸಿದರು. ಹಬ್ಬಕ್ಕೂ ಮುಂಚೆ ಯುವಕರು ವಿವಿಧ ಜಿದ್ದಿನ ಆಟಗಳಲ್ಲಿ ತೊಡಗಿರುವುದು ಹಳ್ಳಿ, ಪಟ್ಟಣಗಳಲ್ಲಿ ಸಾಮಾನ್ಯವಾಗಿ ಕಂಡು ಬಂದಿತ್ತು.
ಪ್ರಸಾದವಾಗಿ ಹಾಲುಣಿಸಿದ ಹಬ್ಬ
ಗುಲ್ಬರ್ಗ: ನಗರದ ಬಸವೇಶ್ವರ ಆಸ್ಪತ್ರೆ ಎದುರುಗಡೆ ಇರುವ ವಿದ್ಯಾನಗರ ಕಾಲೋನಿಯ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ನಾಗರಪಂಚಮಿ ನಿಮಿತ್ತ ನಾಗದೇವತೆಗೆ ಹಾಲು ಎರೆಯಲು ಬಂದ ಮಹಿಳೆಯರಿಗೆ, ಮಕ್ಕಳಿಗೆ ಹಾಲೆ ಪ್ರಸಾದ ರೂಪದಲ್ಲಿ ನೀಡುವ ಮೂಲಕ ವಿಶೇಷವಾಗಿ ಹಬ್ಬ ಆಚರಣೆ ಮಾಡಲಾಯಿತು.
ನಾಗದೇವತೆಗೆ ಎರೆಯಲು ತಂದ ಶೇ.25ರಷ್ಟು ಹಾಲು ಮಾತ್ರ ಪೂಜೆಗೆ ಬಳಸಿ ಉಳಿದ ಶೇ.75ರಷ್ಟು ಹಾಲನ್ನು ಒಂಡೆದೆ ಶೇಖರಿಸಿ ಸುಮಾರು 25 ರಿಂದ 30 ಲೀಟರಿನಷ್ಟು ಹಾಲನ್ನು ಭಕ್ತಾದಿಗಳಿಗೆ ಪ್ರಸಾದವಾಗಿ ವಿತರಿಸಲಾಯಿತು.
ಕಲ್ಲು ನಾಗರಿಗೆ ಹಾಲನ್ನೆರೆಯುವುದು ಬೇಡ ಎಂದು ಹೇಳಿ, ನಂಬಿಕೆಗೆ ಚ್ಯುತಿ ಬರಬಾರದೆಂದು ಭಾವಿಸಿ ಅವರನ್ನು ಪ್ರೀತಿಯಿಂದ ಪೌಷ್ಟಿಕಾಂಶವಿರುವ ಹಾಲು ಎರೆದು ಹಾಳು ಮಾಡುವುದು ಬೇಡ. ಅಲ್ಪ ಹಾಲೆರೆದು ಉಳಿದದನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸೋಣ ಎಂದು ಭಕ್ತರಿಗೆ ಶಿವರಾಜ ಅಂಡಗಿ ತಿಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

