ಗುಲ್ಬರ್ಗಾ

ಡಿ.ಇಡಿ ವಿದ್ಯಾರ್ಥಿನಿ ಅಪಹರಣ

Published On :

ಕನ್ನಡಪ್ರಭ ವಾರ್ತೆ ಗುಲ್ಬರ್ಗ ಆ.12
ಮದುವೆಯಾಗುವುದಾಗಿ ನಂಬಿಸಿ ಡಿಇಡಿ ವಿದ್ಯಾರ್ಥಿಯೊಬ್ಬಳನ್ನು ಪ್ರಿಯಕರನೊಬ್ಬ ಅಪಹರಿಸಿಕೊಂಡು ಹೋದ ಘಟನೆ ಗುಲ್ಬರ್ಗದಲ್ಲಿ ನಡೆದಿದೆ.
ಐನೋಳ್ಳಿ ಗ್ರಾಮದ 19 ವರ್ಷ ವಯಸ್ಸಿನ ಯುವತಿ ಇಲ್ಲಿನ ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಮೊದಲನೇ ವರ್ಷದ ಡಿಇಡಿಯಲ್ಲಿ ಅಭ್ಯಾಸ ಮಾಡುತ್ತಿದ್ದಳು. ಈ ವೇಳೆ ಯುವತಿಗೆ ಮಂಜುನಾಥ ತಂದೆ ಭೀಮಯ್ಯ ಈಳಗೇರ ಎಂಬಾತನಿಂದ ಮೊಬೈಲ್ ಕರೆಯೊಂದು ಬಂದು ಪರಿಚಯ ಬೆಳೆದು ಇಬ್ಬರ ನಡುವೆ ಪ್ರೀತಿ ಒಡಮೂಡಿತ್ತು.
ಮೊದಲ ವರ್ಷದ ಡಿಇಡಿ ಪರೀಕ್ಷೆ ಮುಗಿದ ನಂತರ 15 ದಿನಗಳ ಕಾಲ ರಜೆ ಇರುವ ಸಂದರ್ಭದಲ್ಲಿ ಯುವತಿ ಸ್ವಗ್ರಾಮ ಐನೋಳ್ಳಿಗೆ ಹೋಗಿದ್ದಳು. ಐನೋಳ್ಳಿ ಗ್ರಾಮದಿಂದ ಮರಳಿ ಕಾಲೇಜಿಗೆ ಹೋಗಲು ಗುಲ್ಬರ್ಗಕ್ಕೆ ಬಂದಾಗ ಕೇಂದ್ರ ಬಸ್ ನಿಲ್ದಾಣದಲ್ಲಿ ಮಂಜುನಾಥ ಯುವತಿಯನ್ನು ಭೇಟಿಯಾಗಿ ಮದುವೆಯಾಗುವುದಾಗಿ ನಂಬಿಸಿ ಮುಂಬೈಗೆ ಅಪಹರಿಸಿಕೊಂಡು ಹೋಗಿದ್ದ ಎನ್ನಲಾಗಿದೆ.
ಮುಂಬೈಯಿಂದ ತನ್ನ ಸಹೋದರರಿಗೆ ಮೊಬೈಲ್ ಮೂಲಕ ಕರೆ ಮಾಡಿ ವಿಷಯ ತಿಳಿಸಿದ ಯುವತಿ ಮರಳಿ ಐನೋಳ್ಳಿಗೆ ಬಂದು ಶನಿವಾರ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಳೆ. ತಾನು ಕಾಣೆಯಾಗಿಲ್ಲ ತನ್ನನ್ನು ಅಪಹರಿಸಿಕೊಂಡು ಹೋಗಲಾಗಿತ್ತು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಬಸ್ ಡಿಕ್ಕಿ: ಬೈಕ್ ಸವಾರನಿಗೆ ಗಾಯ
ಗುಲ್ಬರ್ಗ: ಬಸ್ಸು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಗಾಯಗೊಂಡ ಘಟನೆ ಕೆರಿಭೋಸಗಾ ಬಳಿ ನಡೆದಿದೆ.
ಗುಲ್ಬರ್ಗದ ರಾಮನಗರದ ನಿವಾಸಿ ಮಲ್ಲಿನಾಥ ತಂದೆ ಬಸವಣ್ಣಪ್ಪ ಸಂಗೋಳಗಿ ಗಾಯಗೊಂಡವನು. ಈತ ದ್ವಿಚಕ್ರ ವಾಹನದ ಮೇಲೆ ಆಳಂದ ಕಡೆಯಿಂದ ಬರುತ್ತಿದ್ದಾಗ ಅತಿ ವೇಗವಾಗಿ ಹಿಂದಿನಿಂದ ಬಂದಿರುವ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಆತ ಗಾಯಗೊಂಡು ಗುಲ್ಬರ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಗುಲ್ಬರ್ಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.