ಗುಲ್ಬರ್ಗಾ

ಸಂಗೀತದಿಂದ ಸಕಲವೂ ಸಿದ್ಧಿ'

Published On :

ಹುಣಸಗಿ: ಸಂಗೀತದಿಂದ ಸಕಲ ಸಿದ್ಧಿಯನ್ನು ನಾವು ಪಡೆಯಬಹುದಾಗಿದೆ. ದೇವಿಯು ಸಂಗೀತ ಪ್ರಿಯಳಾಗಿದ್ದಾಳೆ ಎಂದು ವಿಶ್ವಕರ್ಮ ಸಮಾಜದ ಹಿರಿಯರಾದ ಮಾನಯ್ಯ ಗುಳಬಾಳ ಹೇಳಿದರು. ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ನಡೆದ ಭಜನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 ಶ್ರಾವಣ ಮಾಸ ಪವಿತ್ರವಾಗಿದ್ದು, ಇಂತಹ ದಿನಗಳಲ್ಲಿ ಸಂಗೀತ, ಪೂಜೆ, ಆರಾಧನೆಗಳಿಂದ ನಾವು ದೇವಿಯ ಕೃಪೆಗೆ ಪಾತ್ರರಾಗಬಹುದು. ಪ್ರತಿಯೊಬ್ಬರೂ ಭಜನಾ, ಸಂಗೀತ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಗೀತ ಸೇವೆಯನ್ನು ನೀಡಿ ಕಾಳಿಕಾದೇವಿಯ ಕೃಪೆ ಪಡೆದುಕೊಳ್ಳೋಣ ಎಂದರು.
ನಂತರ ಮಾತನಾಡಿದ ವಿಜಯಾಚಾರ್ಯ ಜೋಷಿ ಪುರೋಹಿತ್, ಸಂಗೀತವು ಅಜ್ಞಾನವನ್ನು ಓಡಿಸಿ, ಸುಜ್ಞಾನದ ಬೆಳಕಿನ ದಾರಿ ತೋರಿಸುವ ಸಾಧನವಾಗಿದೆ. ಸೇವೆ ಎಂಬುದು ತೋರಿಕೆಗೆ ಮಾತ್ರ ಸೀಮಿತವಾಗಬಾರದು. ಸ್ವಾರ್ಥತೆ ಇಲ್ಲದೇ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಸಂಗೀತವನ್ನು ಆಲಿಸುವುದು, ಹಾಡುವುದನ್ನು ಮಾಡಬೇಕು ಎಂದರು. ವಿಶ್ವಕರ್ಮ ಸಮಾಜ ಬಾಂಧವರಿಂದ ಅಮೋಘ ಸಂಗೀತ ಸೇವೆ ನಡೆಯಿತು. ಈಶ್ವರ ಬಡಿಗೇರ, ಈರಣ್ಣ ಕಕ್ಕಳಮೇಲಿ, ಸುರೇಶ ನಾವದಗಿ, ಶಾಂತಗೌಡ ಪಾಟೀಲ್, ಶ್ರೀಧರ ಪತ್ತಾರ, ರುದ್ರೇಶ ಪತ್ತಾರ, ಶ್ರೀಶೈಲ ಬಡಿಗೇರ ಮತ್ತಿತರರು ಭಾಗವಹಿಸಿದ್ದರು. ಈಶ್ವರ ಬಡಿಗೇರ ತಬಲಾ ವಾದನ ಮಾಡಿದರು. ಈರಣ್ಣ ಕಕ್ಕಳಮೇಲಿ ಹಾರ್ಮೋನಿಯಂ ನುಡಿಸಿದರು.

ಜೀವೇಶ್ವರ ಜಯಂತಿ ಆಚರಣೆ
ಶಹಾಪುರ: ಸ್ವಕುಳಸಾಳಿ ಸಮಾಜದಿಂದ, ಜೀವೇಶ್ವರ ಜಯಂತಿ ಅಂಗವಾಗಿ ಏರ್ಪಡಿಸಿದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿದ ಸ್ವಕುಳಸಾಳಿ ಸಮಾಜದ ಅಧ್ಯಕ್ಷರಾದ ಸಿದ್ದಣ ಶಿರವಾಳ ಮಾತನಾಡಿ, ಕಂಪ್ಯೂಟರ್ ಮತ್ತು ಮೊಬೈ ಲ್ ಮುಂತಾದ ಆಧುನಿಕ ಪರಿಕರಗಳ ಬಳಕೆಯಿಂದ ಯವಕರ ಮನಸ್ಸು ಸಂಕುಚಿತಗೂಳ್ಳತ್ತದೆ. ಕ್ರೀಡಾ ಕ್ಷೇತ್ರಗಳಲ್ಲಿ ವಿಶೇಷವಾಗಿ ತೋಡಗಿಸಿಕೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಸ್ವಕುಳಸಾಳಿ ಸಮಾಜದ ಉಪಾಧ್ಯಾಕ್ಷ ಪರುಶುರಾಮ ಮಿರ್ಜ, ಸಹ ಕಾರ್ಯದರ್ಶಿಗಳಾದ ಸುನೀಲ ಮಾನು, ಯುವ ಸ್ವಕುಳ ಸಾಳಿ ಸಮಾಜದ ಅಧ್ಯಕ್ಷ ಸಿದ್ದಪ್ಪ ಕೆಂದುಳೆ, ರಾಮಕೃಷ್ಣ ಚಿಲ್ಲಾಳ, ದೀಪಕ ದೀವಟೆ, ಪ್ರವೀಣ ಫಿರಂಗಿ ಮತ್ತು ಗೋಪಾಲ ಶಿರವಾಳ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.