10.400 ಕ್ಯುಸೆಕ್ ನೀರು ಭೀಮಾ ನದಿಗೆ
ಅಫಜಲ್ಪುರ: ಭೀಮಾನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಬಿಡುತ್ತಿರುವುದರಿಂದ ಅಫಜಲ್ಪುರ ತಾಲೂಕಿನ ಸೊನ್ನ ಗ್ರಾಮದ ಹತ್ತಿರ ಭೀಮಾ ಬ್ಯಾರೇಜ್ ಭರ್ತಿಯಾಗುತ್ತಿದ್ದು, ಭೀಮಾ ಬ್ಯಾರೇಜ್ನ ವಿದ್ಯುತ್ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗಿ ಭೀಮಾ ಬ್ಯಾರೇಜ್ನಲ್ಲಿ ನೀರಿನ ಒಳ ಹರಿವು ಹೆಚ್ಚಾಗಿದ್ದು, ಪಂಢರಾಪುರದಿಂದ ಹೆಚ್ಚುವರಿಯಾಗಿ 10.400 ಕ್ಯುಸೆಕ್ ನೀರು ಭೀಮಾನದಿಗೆ ಬಿಡಲಾಗಿದೆ ಎಂದು ಭೀಮಾ ಬ್ಯಾರೇಜ್ ಕಾರ್ಯಪಾಲಕ ಎಂಜಿನಿಯರಿಂಗ್ ಎನ್.ಸಿ. ಬಿರಾದಾರ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಅದಕ್ಕಾಗಿ ನಾವು ಬ್ಯಾರೇಜ್ನ ಮೂರು ಗೇಟ್ಗಳಿಂದ ಭೀಮಾನದಿಗೆ ನೀರು ಬಿಡಲಾಗಿದೆ. ಸುಮಾರು 14 ಸಾವಿರ ಕ್ಯುಸ್ಯಕ್ ನೀರು ಹೊರ ಬಿಡಲಾಗುತ್ತದೆ ಎಂದು ತಿಳಿಸಿದ್ದಾರೆ. ಬ್ಯಾಸ್ಟರ್ ಎನರ್ಜಿ ಲಿಮಿಟೆಡ್ ಅಧಿಕಾರಿ ಅರ್ಜುನ ಬಿ. ಮಾತನಾಡಿ, ಭಾನುವಾರದಿಂದ ವಿದ್ಯುತ್ ಘಟಕದ ಮೂಲಕ ನದಿಗೆ ನೀರು ಬೀಡಲಾಗುತ್ತಿದೆ. ಸೊನ್ನ ಬ್ಯಾರೆಜ್ನಲ್ಲಿ 2 ವಿದ್ಯುತ್ ಘಟಕಗಳಿಂದ ದಿನಕ್ಕೆ 8-9 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ದಿನಕ್ಕೆ 10.5 ಮೆಗಾ ವ್ಯಾಟ್ವರೆಗೂ ವಿದ್ಯುತ್ ಉತ್ಪಾದನೆ ಮಾಡಬಹುದು ಎಂದು ತಿಳಿಸಿದ್ದಾರೆ.
15ರಂದು ಪದಾಧಿಕಾರಿ ಸಭೆ
ಗುಲ್ಬರ್ಗ: ಆ.15ರಂದು ಮಧ್ಯಾಹ್ನ 2 ಗಂಟೆಗೆ ನಗರದ ಜಗತ್ ದರ್ಗಾ ರಸ್ತೆಯಲ್ಲಿರುವ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಘಟಕಗಳ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಜಿಲ್ಲೆಯ ಆಳಂದ, ಅಫಜಲ್ಪುರ, ಚಿಂಚೋಳಿ, ಚಿತ್ತಾಪುರ, ಸೇಡಂ, ಜೇವರ್ಗಿ ಮತ್ತು ಗುಲ್ಬರ್ಗ ತಾಲೂಕುಗಳ ಪ್ರಾಥಮಿಕ, ಪ್ರೌಢ ಶಾಲೆಗಳ ಸರ್ಕಾರಿ ಅನುದಾನ ಮತ್ತು ಅನುದಾನ ರಹಿತ ದೈಹಿಕ ಶಿಕ್ಷಕರು ಭಾಗವಹಿಸಲು ಕೋರಲಾಗಿದೆ. ಸಂಘದ ಎಲ್ಲ ತಾಲೂಕು ಅಧ್ಯಕ್ಷರು, ಕಾರ್ಯದರ್ಶಿಗಳು, ಕೋಶಾಧ್ಯಕ್ಷರು ಪಾಸ್ಪೋರ್ಟ್ ಸೈಜಿನ ಭಾವಚಿತ್ರದೊಂದಿಗೆ ತಮ್ಮ ಸಂಘದ ಲೇಟರ್ ಹೆಡ್ ಮೇಲೆ ಸ್ಪಷ್ಟ ಮಾಹಿತಿಯೊಂದಿಗೆ ಬರಬೇಕು ಹಾಗೂ ರಾಜ್ಯ ಸಂಘದ ನಿಗದಿತ ನಮೂನೆಯಲ್ಲಿ ತಮ್ಮ ಮಾಹಿತಿಯನ್ನು ಒದಗಿಸಬೇಕು. ಜಿಲ್ಲಾ ಸಂಘಗಳ ಹಾಗೂ ತಾಲೂಕು ಸಂಘಗಳ ಮಾಹಿತಿಯೊಂದಿಗೆ ಇದೇ ತಿಂಗಳ ಕೊನೆಯ ವಾರದಲ್ಲಿ ರಾಜ್ಯ ಸಂಘದ ಸಭೆಯಲ್ಲಿ ಮಾಹಿತಿ ನೀಡಬೇಕಾಗಿದೆ ಹಾಗೂ ಸಂಘಗಳ ನವೀಕರಣ ಮಾಡಿಕೊಳ್ಳಬೇಕಾಗಿದೆ. ಕಡ್ಡಾಯವಾಗಿ ಸಂಘಗಳ ಮಾಹಿತಿ ನೀಡಬೇಕು ಎಂದು ತಿಳಿಸಲಾಗಿದೆ.
15ರಂದು ಕವಿಗೋಷ್ಠಿ
ಗುಲ್ಬರ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ದಲಿತ ಬಂಡಾಯ ಸಮುದಾಯ ಲೇಖಕರ ಮತ್ತು ಕಲಾವಿದರ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಆ.15 ರಂದು ಬೆಳಿಗ್ಗೆ 11ಕ್ಕೆ ನಗರದ ಕನ್ನಡ ಭವನದಲ್ಲಿ ಸ್ವಾತಂತ್ರುತ್ಸವ ನಿಮಿತ್ತ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಯುವ ಸಾಹಿತಿ ರಾಜಶೇಖರ ಎಸ್. ಮಾಂಗ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಗುಲ್ಬರ್ಗದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಗಣೇಶ ಪವಾರ ಅಧ್ಯಕ್ಷತೆ ವಹಿಸಲಿದ್ದಾರೆ. ಹಲವಾರು ಕವಿಗೋಷ್ಠಿ ಕವನ ವಾಚನ ಮಾಡಲಿದ್ದಾರೆಂದು ಡಾ. ಚನ್ನಣ್ಣ, ಸುರೇಶ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

