ಗುಲ್ಬರ್ಗಾ

ನೀರೆಯರಿಂದ ಪಂಜಿನ ಮೆರವಣಿಗೆ

Published On :

ಹುಣಸಗಿ: ಪಟ್ಟಣದಲ್ಲಿ ಸೋಮವಾರ ರಾತ್ರಿ ಭಗತ್‌ಸಿಂಗ್ ಗೆಳೆಯರ ಬಳಗದ ನೇತೃತ್ವದಲ್ಲಿ ವಿವಿಧ ಮಹಿಳಾ ಸಂಘಟನೆಗಳಿಂದ ಹಲವಾರು ಬೇಡಿಕೆಗಳಿಗೆ ಆಗ್ರಹಿಸಿ ಪಂಜಿನ ಮೆರವಣಿಗೆ ನಡೆಯಿತು.
ಪಟ್ಟಣದ ಮಹಾಂತಸ್ವಾಮಿ ವೃತ್ತದ ಮುಖಾಂತರ ಕೊಡೇಕಲ್ಲ ಕ್ರಾಸ್‌ನ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ನಡೆಯಿತು. ಪಟ್ಟಣವು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ದೇವಾಪುರದಿಂದ ಮನಗೂಳಿಯವರೆಗಿನ ರಾಜ್ಯ ಹೆದ್ದಾರಿ 61ರ ದುರಸ್ತಿ, ಕೃಷಿ ಉತ್ಪನ್ನ ಮಾರುಕಟ್ಟೆ ಪುನಾ ಆರಂಭಿಸುವಂತೆ, ಸರ್ಕಾರಿ ಆಸ್ಪತ್ರೆಗೆ ಕಾಯಂ ವೈದ್ಯರ ನೇಮಕ, ಶುದ್ಧ ಕುಡಿವ ನೀರು, ವಿದ್ಯುತ್ ತಂತಿಗಳ ಪುನರ್ ಜೋಡಣೆ, ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕೊಠಡಿ ಹಾಗೂ ಪ್ರಯೋಗಾಲಯ ಇನ್ನಿತರ ಪ್ರಮುಖ ಬೇಡಿಕೆಗಾಗಿ ಆಗ್ರಹಿಸಿ ಮೆರವಣಿಗೆ ನಡೆಸಲಾಯಿತು.
ರಸ್ತೆ ನಿರ್ಮಾಣಕ್ಕೆ ಆಗ್ರಹ: ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜ ವೈಲಿ ಮಾತನಾಡಿ, ದೇವಾಪುರದಿಂದ ಮನಗೂಳಿ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ 261 ಕೋಟಿ ಬಿಡುಗಡೆ ಮಾಡಿದೆ. ರಸ್ತೆ ಕಾಮಗಾರಿ ಆರಂಭವಾಗಲು ಇನ್ನೂ ಒಂದು ವರ್ಷವರೆಗೆ ಸಮಯ ತಗುಲುವುದು ಎಂದು ತಿಳಿದು ಬಂದಿದೆ. ಅಲ್ಲಿವರೆಗೆ ತಾತ್ಕಾಲಿಕ ಸುಗಮ ಸಂಚಾರಕ್ಕೆ ಅನುವಾಗುವಂತೆ ರಸ್ತೆ ನಿರ್ಮಾಣ ಆರಂಭಿಸುವಂತೆ ಆಗ್ರಹಿಸಿದರು.
ಮಧುಮತಿ ಬ್ಯಾಕೋಡ್, ಮಹಾದೇವಿ ಬೇವಿನಾಳ ಮಠ, ಬೋರಮ್ಮ ಎಡಿಯೂರಮಠ, ಭಾರತಿ ಪುರಾಣಿಕಮಠ ಮಾತನಾಡಿದರು. ಮನವಿ ಸ್ವೀಕರಿಸಿದ ತಹಸೀಲ್ದಾರ್ ಅಂಬರಶೆಟ್ಟಿ, ಸಂಬಂಧಿಸಿದ ಅಧಿಕಾರಿಗಳಿಗೆ ತಲುಪಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸಾಹೇಬಿ ರಾಯಚೂರ, ಬಸಮ್ಮ ಬನ್ನಾಳ, ಶೈಲಾ ಕಲಹಾಳ, ಕಸ್ತೂರೆಮ್ಮ ದೇಸಾಯಿ, ದ್ಯಾವಮ್ಮ ಕಟ್ಟಿಮನಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಬಳಗದ ಅಧ್ಯಕ್ಷ ಬಸವರಾಜ ವೈಲಿ, ಆನಂದ ಬಾರಿಗಿಡದ, ವೆಂಕಟೇಶ ಅರಳಿಗಿಡದ, ಶಿವು ಮೇಟಿ, ಪುರುಷೋತ್ತಮ ಠವಾಣಿ, ಶಿವು ಸಂಗಟಿ ಸೇರಿದಂತೆ ಇತರರು ಇದ್ದರು. ಪಿಎಸ್‌ಐಗಳಾದ ಮಂಜುನಾಥ ಶೇರಿಗಾರ, ಸುನಿಲ್‌ಕುಮಾರ ನಾಯಕ್ ಸೂಕ್ತ ಬಂದೋಬಸ್ತ್ ಒದಗಿಸಿದ್ದರು. ಮೆರವಣಿಗೆಯಲ್ಲಿ 250ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.