ಗುಲ್ಬರ್ಗಾ

ಎಲ್ಲರ ಅಂತಃಕರಣದೊಳಗೆ ಬಸವಣ್ಣ

Published On :

ಶಹಾಪುರ: ಬಸವಣ್ಣ ರಾಜ್ಯದ ಸಿರಿ. ಬಸವಣ್ಣ ಬಡವರ ನಿಧಿ. ಆದ್ದರಿಂದಲೇ ಬಸವಣ್ಣನವರು ಸರ್ವರ ಮನಸ್ಸಿನಲ್ಲೂ, ಹೃದಯದೊಳಗೂ ಬೆರೆತುಹೋಗಿದ್ದಾರೆ ಎಂದು ಲೋಹಿಯಾ ಪ್ರಕಾಶನದ, ಕನಕಶ್ರೀ ಪ್ರಶಸ್ತಿ ಪುರಸ್ಕೃತ ಸಿ. ಚೆನ್ನಬಸವಣ್ಣ ಬಣ್ಣಿಸಿದರು.
ಪಟ್ಟಣದ ಬಸವ ಮಾರ್ಗ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಲಿಂಗಣ್ಣ ಸತ್ಯಂಪೇಟೆ ವೇದಿಕೆಯಲ್ಲಿ ನಡೆದ ಬಸವ ಬೆಳಕು -25ರ ಸಭೆಯಲ್ಲಿ ಬಸವಾದಿ ಶರಣರ ಪ್ರಸ್ತುತತೆ ಎಂಬ ವಿಷಯ ಕುರಿತು ಮಾತನಾಡಿದರು.
ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿ, ಜಾತಿ ಸಂಕರಗೊಂಡ ಕುಲ ಲಿಂಗಾಯತ. ಇಲ್ಲಿ ಜಾತಿಗಳು ಇಲ್ಲ. ವೃತ್ತಿಗಳೆ ಜಾತಿಗಳಾದವು. 770 ಅಮರ ಗಣಂಗಳೆಂದು ಕರೆಯುವ ಶರಣರ್ಯಾರೂ ಮೂಲತಃ ಲಿಂಗಾಯತರಾಗಿರಲಿಲ್ಲ. ತಳವರ್ಗದ ದುಡಿವ ಸಂಸ್ಕೃತಿಯಿಂದ ಬಂದ ಜನಗಳಿಗೆಲ್ಲ ಆತ್ಮಸ್ಥೈರ್ಯ ತುಂಬಿ, ವೈಚಾರಿಕವಾಗಿ ಆಲೋಚನೆ ಮಾಡಲು ಹಚ್ಚಿ ವಿಶ್ವವೇ ಬೆರಗಾಗುವಂಥ ಸಾಹಿತ್ಯ ರಚಿಸಲು ಪ್ರೇರೇಪಿಸಿದರು  ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜೆಡಿಎಸ್ ಧುರೀಣ ಶರಣಪ್ಪ ಸಲಾದಪುರ ನುಡಿದರು. ಹನುಮಂತಿ ಗುತ್ತೇದಾರ ಸ್ವಾಗತಿಸಿದರು. ಡಾ.ಶರಣಪ್ಪ ಯಾಳಗಿ ವಂದನೆಗಳನ್ನು ಸಲ್ಲಿಸಿದರು. ಶಿವಣ್ಣ ಇಜೇರಿ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಡಾ. ಎಸ್. ಆರ್.ಸಿನ್ನೂರ, ಶಿವಯೋಗಪ್ಪ ಮುಡಬೂಳ, ಎ.ವೈ.ಪದ್ಮಾಕರ್, ಅಶೋಕ ಚೌದರಿ, ಮರಿರಾಜ ಶಿಕ್ಷಕರು. ಡಾ.ಚಂದ್ರಶೇಖರ ಸುಬೇದಾರ, ಜ್ಯೋತಿ ಮಣ್ಣೂರ, ಬೂದೆಪ್ಪ ಕೋನಳ್ಳಿ, ಸಂಗಣ್ಣ ದೊರಿ. ಸಿದ್ಧಲಿಂಗಪ್ಪ ಆನೇಗುಂದಿ, ನರಸಣ್ಣ ಜಹಾಗೀರದಾರ, ಸಿದ್ಧರಾಮ ಹೊನ್ಕಲ್, ಹೊನ್ನಾರೆಡ್ಡಿ ವಕೀಲರು, ಮಾನಪ್ಪ ಹೂಗಾರ, ಅಡಿವೆಪ್ಪ ಜಾಕಾ, ಮಲ್ಲಿಕಾರ್ಜುನ ಟೋಕಾಪುರ, ಚೆನ್ನಪ್ಪ ಗುಂಡಾನೋರ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.