ಸಿಇಒ ಆದೇಶಕ್ಕೆ ಬೆಂಬಲ
ಗುಲ್ಬರ್ಗ/ಶಹಾಬಾದ್: ಚಿತ್ತಾಪುರ ತಾಲೂಕಿನ ರಾವುರ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಿಸಲು ಜಿಲ್ಲಾ ಪಂಚಾಯತಿ ಸಿಇಒ ಅವರು ಆದೇಶ ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ಗ್ರಾಮ ಪಂಚಾಯತಿಯ ಸರ್ವ ಸದಸ್ಯರ ತುರ್ತುಸಭೆ ಕರೆದು ಚರ್ಚೆ ನಡೆಸಿ, ಸರ್ಕಾರದ ಆದೇಶಕ್ಕೆ ಬೆಂಬಲ ಸೂಚಿಸಿದರು.
ಈ ಬಗ್ಗೆ ನಡೆದ ಚರ್ಚೆಯಲ್ಲಿ ಸದಸ್ಯ ಶರಣು ಜ್ಯೋತಿ ಮಾತನಾಡಿ, ರಾವುರ ಪಟ್ಟಣ ಪಂಚಾಯಿತಿಗೆ ಬಲದಾದರೆ, ಜಿಪಂ, ತಾಪಂ ಕ್ಷೇತ್ರ ಸ್ಥಾನದಿಂದ ಹೊರೆಗೆ ಉಳಿಯಲಿದ್ದು, ರಾವುರ ಶಾಲೆಯ ಮಕ್ಕಳು ಗ್ರಾಮೀಣ ಕೃಪಾಂಕದಿಂದ ವಂಚಿತರಾಗುವರು, ಸಾರ್ವಜನಿಕರ ಕರ ಹೆಚ್ಚಳವಾಗುವುದು. ಆದರೆ, ಅಭಿವೃದ್ಧಿಗೆ ಸರ್ಕಾರದ ಅನುದಾನ ಹೆಚ್ಚಾಗಲಿದೆ ಎಂದು ಹೇಳಿದರು.
ಪ್ರಯಾಣಿಕರ ಮೂಲಸೌಕರ್ಯ ಸಲಹಾ ಸಮಿತಿ ಸದಸ್ಯ ಶ್ರೀನಿವಾಸ ಸಗರ ಮಾತನಾಡಿ, ಚಿತ್ತಾಪುರ ತಾಲೂಕಿನಲ್ಲಿ ನಾಲವಾರ ಹಾಗೂ ರಾವುರ ಗ್ರಾಪಂಗಳನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರುತ್ತಿವೆ. ಬರುವ ದಿನಗಳಲ್ಲಿ ಈ ಎರಡೂ ಗ್ರಾಮಗಳು ಪ್ರಗತಿಯ ಹಾದಿಯಲ್ಲಿ ಸಾಗಲಿವೆ ಎಂದರು.
ಸದಸ್ಯರ ಪರ ವಿರೋಧದ ನಂತರ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾರ್ವತಿ ಗುದಗಲ್ ಮಾತನಾಡಿ, ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರುವುದರಿಂದ ಅಭಿವೃದ್ಧಿಯಲ್ಲಿ ಸಾಕಷ್ಟು ಬದಲಾವಣೆ ಉಂಟಾಗುತ್ತದೆ. ನಮ್ಮ ಗ್ರಾಮವನ್ನು ಸುಂದನ ಗ್ರಾಮವನ್ನಾಗಿ ಮಾರ್ಪಡಿಸಬಹುದು ಎಂದರು.
ಸಾರ್ವಜನಿಕರು ಪ್ರತಿವರ್ಷ ಸಮಯಕ್ಕೆ ಸರಿಯಾಗಿ ಕರ ಕಟ್ಟಬೇಕಾಗುತ್ತದೆ. ಇದರಿಂದ ಅಭಿವೃದ್ಧಿಗೆ ಸಹಾಯವಾಗುತ್ತದೆ. ಸರ್ಕಾರದಿಂದ ಬಿಡುಗಡೆಯಾಗುವ ಅಧಿಕ ಅನುದಾನದಿಂದ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಬಹುದು ಎಂದು ಪಟ್ಟಣ ಪಂಚಾಯತಿಗೆ ಬೆಂಬಲ ಸೂಚಿಸಿದರು.
ಪಿಡಿಒ ನಾಗೇಂದಪ್ಪ ಜಮಾದಾರ ಸರ್ಕಾರದ ಸುತ್ತೋಲೆ ಓದಿದರು. ತಾಪಂ ಸದಸ್ಯ ಸೂರ್ಯಕಾಂತ ಕಟ್ಟಿಮನಿ ಮಾತನಾಡಿದರು.
ಉಪಾಧ್ಯಕ್ಷೆ ಮಹಾದೇವಿ ಪುಂಡಲೀಕ, ಸದಸ್ಯರಾದ ಕಲಾವತಿ ಪರೀಟ್, ಶ್ರೀದೇವಿ ನಡುವಿನಕೇರಿ, ರಾಮಣ್ಣ ಅಳ್ಳೊಳ್ಳಿ, ಕೃಷ್ಣ ಬಮ್ಮಣ್ಣ, ಸುರೇಶ ದೊಡ್ಮನಿ, ಹಾಜಿ ಹಣಕೇರಿ, ಸಿದ್ದಯ್ಯ ಗುತ್ತೇದಾರ, ರಾಜು ರಾಠೋಡ, ಸಾಯಬಣ್ಣ ಗೋಳಾ, ತಾಯಪ್ಪ ಮೇಳಕುಂದಿ, ಜಾವೇದಸೇಠ ಕರನೂಲ್, ಶಶಿಕಾಂತ ಪಠಪತಿ, ಗ್ರಾಮದ ಮುಖಂಡರಾದ ಗುರುನಾಥ ಗುದಗಲ್, ರಾಮಚಂದ್ರ ರಾಠೋಡ, ಶಿವಾ ಜೋಶಿ, ಬಸವರಾಜ ಮಡ್ಡಿ, ರಾಮಚಂದ್ರ ಪಂಚಾಳ, ಮೋಹನ ಸೂರೆ, ಗುರು ಹೊನ್ನಾನಗರ ಇತರರು ಸಭೆಯಲ್ಲಿ ಪಾಲ್ಗೊಂಡು ಗ್ರಾಪಂ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗೆ ಅನುಮೋಧನೆ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

