ಗುಲ್ಬರ್ಗಾ

'ದೇಶ ಸೇವೆಯೇ ಸಾರ್ಥಕ ಜೀವನ'

Published On :

ಕನ್ನಡಪ್ರಭ ವಾರ್ತೆ ಅಫಜಲ್ಪುರ ನ.26
ನಿಸರ್ಗದಲ್ಲಿಯೇ ಮನುಷ್ಯ ಶ್ರೇಷ್ಠ ಜೀವಿ.  ಹೀಗಾಗಿ ಜೀವಿತದ ಕೊನೆಯವರೆಗೂ ಸಮಾಜ, ದೇಶಕ್ಕಾಗಿ ದುಡಿಯಬೇಕು. ಅಂದಾಗಲೇ ಜೀವನ ಸಾರ್ಥಕ ಎಂದು ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ವಿಠ್ಠಲ್ ಹೇರೂರ ಕರೆ ನೀಡಿದರು.
ತಾಲೂಕಿನ ಬಿಲ್ವಾಡ(ಕೆ) ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅವರ ಮೂರ್ತಿ ಅನಾವರಣ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೋಳಿ, ಕಬ್ಬಲಿಗ ಸಮಾಜ ಜನಾಂಗದವರು ಅಮಾಯಕ ಮುಗ್ದರು, ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಬಲಿಪಶು ಮಾಡುತ್ತಿದ್ದಾರೆ. ಇದನ್ನು ಅರಿತುಕೊಂಡು ಸ್ವಾಭಿಮಾನದಿಂದ ಹೋರಾಡಿ ಸ್ವಾವಲಂಬನೆ ಬಾಳ್ವೆ ನಡೆಸಿ, ಇನ್ನೊಬ್ಬರ ಗುಲಾಮರಾಗದಿರಿ. ನಮ್ಮ ಸಮಾಜ ಗುಲಾಮಗಿರಿಯ ಕರಿನೆರಳಿನಲ್ಲಿ ನರಳುತ್ತಿದೆ. ನಾವು ಸ್ವಾಭಿಮಾನವನ್ನು ಬೆಳೆಸಿಕೊಂಡು ಗುಲಾಮಗಿರಿ ಕಿತ್ತೊಗೆಯಬೇಕು ಎಂದರು.
ಜಿಪಂ ಸದಸ್ಯೆ ಶೋಭಾ ಬಾಣಿ, ಕರವೇ ಅಧ್ಯಕ್ಷ ಶಿವುಕುಮಾರ್ ನಾಟಿಕಾರ್, ಜಿಪಂ ಸದಸ್ಯರಾದ ಸಿದ್ಧಾರ್ಥ ಬಸರಿಗಿಡ, ಪ್ರಕಾಶ ಜಮಾದಾರ, ಮೋನಪ್ಪ ಹಾಗೂ ಇತರರು ಮಾತನಾಡಿದರು.
ಶಿವಾನಂದ ಸ್ವಾಮಿಗಳು ಕುಮಸಿ ಅವರು ಮೂರ್ತಿ ಅನಾವರಣಗೊಳಿಸಿದರು. ಕೋಲಿ ಸಮಾಜದ ತಾಲೂಕು ಉಪಾಧ್ಯಕ್ಷ ಶಂಕು ಮ್ಯಾಕೇರಿ, ಗುರಣ್ಣ ತೆಗ್ಗೆಳ್ಳಿ, ತಾಪಂ ಸದಸ್ಯ ದತ್ತು ಸಿಂಧೆ, ಮಹಾಂತೇಶ ಪಾಟೀಲ್, ಮಹಾರಾಯ ಅಗಸಿ, ಮಲ್ಲಿಕಾರ್ಜುನ ಯಂಕಂಚಿ, ಗ್ರಾಪಂ ಸದಸ್ಯ ದೌಲಪ್ಪ, ರಾಜು ಉಕ್ಕಲಿ, ಶ್ರೀಕಾಂತ ದಿವಜಗಿ ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಚಂದ್ರ ಪ್ಯಾಟಿ ಸ್ವಾಗತಿಸಿದರು. ಸಿದ್ದು ಶಿವುಣಗಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.