ಗುಲ್ಬರ್ಗಾ

ಯೋಗದಿಂದ ಅದ್ಭುತಶಕ್ತಿ

Published On :

ರಾಜ್ಯಮಟ್ಟದ ಯೋಗಸ್ಪರ್ಧೆ ಉದ್ಘಾಟಿಸಿ ಶಿವಾನಂದ ದೇವರು
ಕನ್ನಡಪ್ರಭ ವಾರ್ತೆ  ಬೀದರ್  ನ.26
ಯೋಗವು ಶರೀರದ ಒಳಗಿನ ಕಲ್ಮಶ ಹೊರಗೆ ಹಾಕಿ ಶರೀರದಲ್ಲಿ ಅದ್ಭುತಶಕ್ತಿ ನೀಡುತ್ತದೆ ಮತ್ತು ವ್ಯಕ್ತಿಯನ್ನು ಚಲನಶೀಲವನ್ನಾಗಿ ಮಾಡುತ್ತದೆ ಎಂದು ಗದಗಿನ ಶಿವಾನಂದ ದೇವರು ನುಡಿದರು.
ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಮಂಗಳವಾರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಯೋಗ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಭಾರತೀಯ ಋಷಿಮುನಿಗಳಲ್ಲಿ ಪತಂಜಲಿ ಯೋಗವು ಶ್ರೇಷ್ಠತೆ ಹೊಂದಿದೆ. ಈ ಯೋಗದಿಂದ ವಿಶ್ವದ ಜನರನ್ನು ಆರೋಗ್ಯವಂತರನ್ನಾಗಿ ಮಾಡುತ್ತದೆ. ವ್ಯಕ್ತಿ ಓಂಕಾರಶಕ್ತಿ ಪಠಿಸುವುದರಿಂದ ವ್ಯಕ್ತಿಯಲ್ಲಿ ಆಧ್ಯಾತ್ಮಿಕ ಮತ್ತು ಊರ್ಧ್ವಮುಖವಾಗಿ ಶಕ್ತಿ ಸಂಚರಿಸುತ್ತದೆ. ಶರೀರದಲ್ಲಿ ರಕ್ತಪರಿಚಲನೆ ಸರಿಯಾಗಿ ಆಗುತ್ತದೆ ಎಂದರು.
ಮುಖ್ಯ ಅತಿಥಿ ಮಾಜಿ ಶಾಸಕ ಹಾಗೂ ಹೈದ್ರಾಬಾದ್-ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಶೀಲ ಜಿ. ನಮೋಶಿ ಮಾತನಾಡಿ, ಮಕ್ಕಳು ಪ್ರತಿನಿತ್ಯ ಯೋಗದಲ್ಲಿ ತೊಡಗಿಸಿಕೊಂಡು ರೋಗ ಮುಕ್ತ ಸಮಾಜ ನಿರ್ಮಾಣ ಶಕ್ತಿ ಬೆಳೆಸಿಕೊಂಡು ರೋಗ ರೋಜಿನಗಳಿಂದ ಮುಕ್ತರಾಗಬೇಕಾದರೆ ಋಷಿಮುನಿಗಳು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಇಂದಿನ ಯುವಕರು ನಡೆಯಬೇಕಾದುದು ಪ್ರಮುಖವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಕೆ.ಗಾದಗೆ ಮಾತನಾಡಿ, ಯೋಗವು ಮಾನವ ಜೀವನದ ಅವಶ್ಯಕತೆಯ ಒಂದು ಭಾಗ. ನಮ್ಮ ರಾಜ್ಯದ ಮಕ್ಕಳು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಯೋಗ ಪ್ರತಿಭೆ ಪ್ರದರ್ಶಿಸಬೇಕೆಂದರು.
ಪ್ರಾಂಶುಪಾಲರ ಸಂಘದ ಅಧ್ಯಕ್ಷ ಆರ್.ಕೆ. ವಾಘಮಾರೆ ಮತ್ತು ಉಪನ್ಯಾಸಕರ ಸಂಘದ ಅಧ್ಯಕ್ಷ ಉಮೇಶ ಅಷ್ಟಗಿ ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕ ಕುಮಾರ ಮಾತನಾಡಿದರು. ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಶಿವರಾಜ ಪಾಟೀಲ ಸ್ವಾಗತಿಸಿದರು. ಎರಡು ದಿನಗಳ ವರೆಗೆ ನಡೆಯಲಿರುವ ಯೋಗ ಪಂದ್ಯಾವಳಿಯ ಸ್ಪರ್ಧೆಯಲ್ಲಿ ರಾಜ್ಯದ 25 ಜಿಲ್ಲೆಗಳಿಂದ ಬಾಲಕ- ಬಾಲಕಿಯರು ಭಾಗವಹಿಸಿದ್ದಾರೆ.
ಸಂಚಾಲಕರಾದ ಪ್ರೊ. ಓಂಪ್ರಕಾಶ ದಡ್ಡೆ ಮತ್ತು ಪ್ರೊ. ಉಮಾಕಾಂತ ಮೀಸೆ ನಿರೂಪಿಸಿ, ಪ್ರಾಚಾರ್ಯ ಡಿ. ನಿಜಾಮುದ್ದಿನ್ ವಂದಿಸಿದರು.
ಈ ಸಂದರ್ಭ ಪ್ರಾಚಾರ್ಯರಾದ ರೇಖಾ ಮಹಾಜನ್, ಉಪನ್ಯಾಸಕರಾದ ಶಿವರಾಜ ಅತಿವಾಳ, ಇಲಾಖೆಯ ಮುಖ್ಯಸ್ಥರಾದ ಸಂಗನಬಸವ, ವೈಜನಾಥ ಭಾಲ್ಕೆ, ಸಿದ್ರಾಮ ಜ್ಯಾಂತಿಕರ, ವೆಂಕಟರೆಡ್ಡಿ ಮತ್ತು ಶಂಕರರಾನ್ ಅಲ್ಲದೇ ಜಿಲ್ಲೆಯ ಪ್ರಾಂಶುಪಾಲರು, ಉಪನ್ಯಾಸಕರು, ದೈಹಿಕ ಉಪನ್ಯಾಸಕರು ಉಪಸ್ಥಿತರಿದ್ದರು.
ಇದೇ ಸಂದರ್ಭ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ದೈಹಿಕ ಉಪನ್ಯಾಸಕ ಾಮ ಮಾನಕಾರಿ ಅವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.