ಗುಲ್ಬರ್ಗಾ

ಪರಿಹಾರ ಉದ್ದಂಡಪ್ಪಗೆ ಏಕಿಲ್ಲ?

Published On :

ಕ.ಪ್ರ. ವಾರ್ತೆ ಗುಲ್ಬರ್ಗ ಫೆ.2
ಹುತಾತ್ಮ ಬಂಡೆ ಕುಟುಂಬದ ನೆರವಿಗೆ ನಿಂತಂತೆ ಸರ್ಕಾರ ಗುಂಡಿಗೆ ಎದೆ ಒಡ್ಡಿ ಬದುಕುಳಿದಿರುವ ಎಎಸ್‌ಐ ಉದ್ದಂಡಪ್ಪ ಕುಟುಂಬಕ್ಕೂ ನೆರವು ನೀಡಬೇಕು. ನೆರವು ನೀಡುವಲ್ಲಿ ಪಕ್ಷಪಾತ ನೀತಿ ಯಾಕೆ ಎಂಬ ಪ್ರಶೆಗಳು ಇದೀಗ ಕೇಳಿಬರಲಾರಂಭಿಸಿವೆ.
ಅನೇಕ ಜಾತಿ ಸಂಘಟನೆಗಳು ಬಂಡೆ ಕುಟುಂಬದ ಪರಿಹಾರ ವಿಚಾರದಲ್ಲಿ ಹೋರಾಟ ಮಾಡಿದವು. ಆದರೆ ಬದುಕುಳಿದ ಉದ್ದಂಡಪ್ಪ ವಿಚಾರವನು ಮರೆತೇ ಬಿಟ್ಟಿದ್ದವು. ಆದರೀಗ ಉದ್ದಂಡಪ್ಪ ಅವರ ಪರವಾಗಿ ಮೇದಾರ ಪರಿಶಿಷ್ಟ ಪಂಗಡ ಗಿರಿಜನಾಂಗ ಸಂಘಟನೆಯವರು ಸಿಡಿದೆದ್ದಿದ್ದಾರೆ. ಬಂಡೆ ಕುಟುಂಬದ ಮಾದರಿಯಲ್ಲೇ ಉದ್ದಂಡಪ್ಪ ಕುಟುಂಬಕ್ಕೂ ಪರಿಹಾರ ದೊರಕಬೇಕು, ಇಲ್ಲದೆ ಹೋದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಜಿಲ್ಲಾಡಳಿತಕ್ಕೆ, ಪೊಲೀಸ್ ಇಲಾಖೆಗೆ ಉಗ್ರ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ನಗರದಲ್ಲಿ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದ ಮೇದಾರ ಸಂಘಟನೆಯ ನಾಯಕರು ಉದ್ದಂಡಪ್ಪ ಕುಟುಂಬಕ್ಕೆ ಈ ಕೆಳಗಿನ ಪರಿಹಾರಗಳು ತಿಂಗಳೊಳಗೆ ದಕ್ಕಬೇಕು.
1) ಜಿಡಿಎ ಅಥವಾ ಹೌಸಿಂಗ್ ಬೋರ್ಡ್‌ನಲ್ಲಿ ಉದ್ದಂಡಪ್ಪರಿಗೆ ನಿವೇಶನ ನೀಡಬೇಕು
2) ಬಂಡೆ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಲಾಗಿದೆ. ಇವರ ಕುಟುಂಬಕ್ಕೆ 25 ಲಕ್ಷ ನಗದು ಪರಿಹಾರ ನೀಡಬೇಕು
3) ಜ.8 ರ ಎನ್‌ಕೌಂಟರ್, ನಂತರ ಕುಟುಂಬ ಸದಸ್ಯರು ಹೈದ್ರಾಬಾದ್ ಹೋಗಿ ಬಂದು ಮಾಡಿದ್ದಾರ. ಇದರ ಖರ್ಚು- ವೆಚ್ಚ ಸರ್ಕಾರ ಭರಿಸಬೇಕು. ಶೂಟೌಟ್‌ನಲ್ಲಿ ಉದ್ದಂಡಪ್ಪ ಅಂಗವಿಕಲರಾಗಿದ್ದಾರೆ. 3 ಗಂಡು, 2 ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಉದ್ಯೋಗದ ಜವಾಬ್ದಾರಿ ಸರ್ಕಾರ ವಹಿಸಿಕೊಳ್ಳಬೇಕು.
4) ಉದ್ದಂಡಪ್ಪನವರು ಗುಲ್ಬರ್ಗ ನಗರದ ಯಾವಸ್ಥಳ ಕೇಳುವರೋ ಅಲ್ಲಿ ತಕ್ಷಣಕ್ಕೆ ವರ್ಗಾಯಿಸಬೇಕು.
5) ಬಂಡೆ ಕುಟುಂಬದ ಮಾದರಿಯಲ್ಲೇ ಎಲ್ಲಾ ರೀತಿಯ ಪರಿಹಾರಗಳನು ಉದ್ದಂಡಪ್ಪ ಕುಟುಂಬಕ್ಕೂ ನೀಡಲು ಯಾಕೆ ತೊಂದರೆ
ಸರ್ಕಾರ ತಕ್ಷಣ ಈ ಬೇಡಿಕೆಗಳಿಗೆ ಸ್ಪಂದಿಸಬೇಕು, ಇಲ್ಲದೆ ಹೋದಲ್ಲಿ ಸಂಘಟನೆ 1 ತಿಂಗಳ ನಂತರ ಮತ್ತೆ ಬೀದಿಗೆ ಬರುತ್ತದೆ ಎಂದು ಸಂಘದ ಪರವಾಗಿ ಮನವಿ ಪತ್ರದಲ್ಲಿ ಹಿರಿಯರು ಸಹಿ ಮಾಡಿ ಜಿಲ್ಲಾಡಳಿತಕ್ಕೆ, ಪೊಲೀಸ್ ಇಲಾಖೆಗೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.