ವಚನಗಳ ಮೇಲೆ ಕ್ಷಕಿರಣ
ವಚನ ಸಾಹಿತ್ಯ ಸಮ್ಮೇಳನದಲ್ಲಿ ಬದುಕಿನ ಮೌಲ್ಯಗಳ ಮನವರಿಕೆ
ಕ.ಪ್ರ. ವಾರ್ತೆ ಗುಲ್ಬರ್ಗ ಫೆ.2
ಸ್ವಾರ್ಥದ ಬಲೆಗೆ ಸಿಕ್ಕು ಮಾನವೀಯ ಮೌಲ್ಯಗಳಿಂದ ದೂರಾಗುತ್ತಿರುವ ಇಂದಿನ ಯುವಜನತೆಗೆ ಶರಣರ ಬದುಕಿನ ಮೌಲ್ಯಗಳ ಅಮೂಲ್ಯತೆಯನು ಪರಿಚಯಿಸುವ ಉದ್ದೇಶದ ವಚನ ಸಾಹಿತ್ಯ ಸಮ್ಮೇಳನ ಭಾನುವಾರ ಯಶಸ್ವಿಯಾಗಿ ನಡೆಯಿತು.
ನಗರದ ಕೋರ್ಟ್ ಮುಂದಿರುವ ವಿಶ್ವೇಶ್ವರಯ್ಯ ಭವನದಲ್ಲಿ ಶುರುವಾದ ಸಮ್ಮೇಳನದಲ್ಲಿ ಗಣ್ಯರು, ಸ್ವಾಮೀಜಿಗಳು, ರಾಜಕೀಯ ನಾಯಕರು ಅನೇಕರು ಭಾಗವಹಿಸಿ ಶರಣರ ಚಿಂತನೆಗಳ ಮೇಲೆ ಬೆಳಕು ಚೆಲ್ಲುವ ಯತ ಮಾಡಿದರು.
ಕಿರು ಪ್ರಯತ: ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಉಸ್ತುವಾರಿಯಲ್ಲಿನ ಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ ಒಂದು ದಿನದ ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡು ಕಲುಷಿತ ವಾತಾವರಣದಲ್ಲಿ ಜೀವಿಸುತ್ತಿರುವ ಎಳೆಯ ಮನಸ್ಸಿನ ಯುವಕರಲ್ಲಿ ಉತ್ತಮ ಕನಸುಗಳನು ಬಿತ್ತುವ ಕಿರು ಪ್ರಯತ ಮಾಡಿದ್ದನು ಸರ್ವರು ಸ್ವಾಗತಿಸಿದರು.
ಬೆಂಗಳೂರಿನ ಬೇಲಿಮಠದ ಶಿವರುದ್ರ ಸ್ವಾಮಿ ಸಮ್ಮೇಳನಕ್ಕೆ ಚಾಲನೆ ನೀಡಿದರು. ಹಿರಿಯ ವೈದ್ಯ ಶರಣ ಸಾಹಿತಿ ಡಾ. ಶಾಂತವೀರ ಬಿ.ಸುಂಕದ ಸರ್ವಾಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದಲ್ಲಿ ಶಾಸಕರು, ಮಾಜಿ ಶಾಸಕರು, ಸಾಹಿತಿಗಳು, ಶ್ರೇಷ್ಠ ಚಿಂತಕರು ಪಾಲ್ಗೊಂಡಿದ್ದರು.
ಗೋಷ್ಠಿಯಲ್ಲಿ: ಪೊರೆ ಕಳಚುವ ಪರಿ ಎಂಬ ವಿಶೇಷ ಶೀರ್ಷಿಕೆ ಹೊಂದಿದ ಗೋಷ್ಠಿಯಲ್ಲಿ ತಲೆಮಾರಿನ ತಲ್ಲಣ -ಶರಣರ ಚಿಂತನ ಮತ್ತು ಮೂಢತೆಯ ಜಾಡು ಬಿಡಿಸಿದ ವಚನ ಸಾಹಿತ್ಯ ಎಂಬ ಎರಡು ಪ್ರಮುಖ ವಿಷಯಗಳ ಕುರಿತು ಡಾ. ಕಾಶಿನಾಥ ಅಂಬಲಗೆ, ಡಾ. ಈಶ್ವರಯ್ಯ ಮಠ ಮಾತನಾಡಿದರು.
ಎನಗೊಲಿದ ವಚನ ಎಂಬ ಗೋಷ್ಠಿಯಲ್ಲಿ ಒಟ್ಟು ಹನೊಂದು ಜನ ತಮ್ಮ ಸ್ವರಚಿತ ವಚನ ವಾಚಿಸಿಸಿದರೆ, ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಡಾ. ಬಸವಲಿಂಗ ಪಟ್ಟದ್ದೇವರು, ಶರಣ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಕೃತಿ ಬಿಡುಗಡೆ: ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ರು ಸುಜ್ಞಾನ ಪ್ರದೀಪ ಕೃತಿ ಬಿಡುಗಡೆ ಮಾಡಿದರು. ಸುಲಫಲ ಮಠ ಮಹಾಂತ ಶ್ರೀ ಸಾನಿಧ್ಯದಲ್ಲಿ ಸಮ್ಮೇಳನ ನಡೆಯಿತು. ಮಧ್ಯಾಹದ ಹೊತ್ತಿನಲ್ಲಿ ಗಾಯಕ ಸಿ.ಎಸ್. ಮಾಲಿಪಾಟೀಲ ರವರಿಂದ ವಚನ ಸುಧೆ ಜರುಗಿತು. ಸಮ್ಮೇಳನದ ಯಶಸ್ವಿಗೆ ಪೂರಕವಾಗಿ ರಚಿತಗೊಂಡ ಸ್ವಾಗತ ಸಮಿತಿಯ ಹರ್ಷಾನಂದ ಎಸ್. ಗುತ್ತೇದಾರ, ಸುಭಾಷ ರಾಠೋಡ, ಶಿವಶಾಂತರೆಡ್ಡಿ, ವಿನೋದಕುಮಾರ ಅಣವರಕರ್ ರವರನೊಳಗೊಂಡ ತಂಡ ಸಕ್ರಿಯವಾಗಿ ಕೆಲಸದಲ್ಲಿ ತೊಡಗಿತ್ತು.
ಅಕಾಡೆಮಿ ಪದಾಧಿಕಾರಿಯಾದ ಶಿವರಾಜ ಅಂಡಗಿ, ಕೆ. ಗಿರಿಮಲ್ಲ, ಬಿ.ಎಂ. ಪಾಟೀಲ ಕಲ್ಲೂರ, ರಾಜಶೇಖರ ಯಾಳಗಿ, ಸುಬ್ರಾವ ಕುಲ್ಕರ್ಣಿ, ಮನೋಹರ ಪೊದ್ದಾರ, ಯಶವಂತರಾಯ್ ಅಷ್ಟಗಿ, ನಾಗೇಂದ್ರ ಮಾಡ್ಯಾಳೆ, ಎಂ.ಬಿ. ನಿಂಗಪ್ಪ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

