ಕಾಂಗ್ರೆಸ್ ತಾಲೀಮು ಶುರು
ಆಳಂದ: ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಗಳು ಹೇಳಿಕೊಂಡು ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿಗಳ ಮತ್ತು ಹಾಲಿ ಸಂಸದ ಎನ್. ಧರ್ಮಸಿಂಗ್ ಅವರ ಗೆಲವಿಗೆ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಮತಪಡೆಯಲು ಮುಂದಾಗಬೇಕೆಂದು ರಾಜ್ಯ ಕೆಪಿಸಿಸಿ ಸದಸ್ಯ ಜಗನಾಥ್ ಶೇಗಜಿ ಕರೆ ನೀಡಿದರು. ಪಟ್ಟಣದ ಆರ್ಯ ಸಮಾಜ ಮಂದಿರದಲ್ಲಿ ಭಾನುವಾರ ಮಾದನ ಹಿಪ್ಪರಗಾ ಮತ್ತು ಆಳಂದ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮೋದಿ ಮೋಡಿ ನಡೆಯದು: ಪಂ ಮಾಜಿ ಸದಸ್ಯ ವೀರಣ್ಣಾ ಮಂಗಾಣೆ ಮಾತನಾಡಿ, ಮೋದಿ ಮೋಡಿ ನಡೆಯದು, ಕಾಂಗ್ರೆಸ್ ಅಭಿವೃದ್ಧಿ ಕೆಲಸ ನೋಡಿ ಜನ ಮತಹಾಕಲು ಮುಂದಾಗಿದ್ದಾರೆ. ಹಿಂದೆ ನಿರ್ಲಕ್ಷ್ಯದ ಫಲವಾಗಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಹೆಚ್ಚಿನ ಹುಮ್ಮಸ್ಸಿನಿಂದ ಒಗ್ಗಟ್ಟಿನಿಂದ ಮತಪಡೆಯಲು ಕಾರ್ಯಕರ್ತರು, ಮುಖಂಡರು ಶ್ರಮಿಸಲು ಮುಂದಾಗಬೇಕು ಎಂದರು. ಗೆಲವಿಗೆ ಶ್ರಮಿಸಿ: ಮಾದನ ಹಿಪ್ಪರಗಾ ಬ್ಲಾಕ್ ಅಧ್ಯಕ್ಷ ಬಸವಂತರಾವ್ ಎಸ್.ಪಾಟೀಲ, ಆಳಂದ ಬ್ಲಾಕ್ ಅಧ್ಯಕ್ಷ ಮೊಮ್ಮದ್ ಮಕ್ದುಮ ಅನ್ಸಾರಿ ಕಾಲೇಮಿರ್, ಜಿಪಂ ಮಾಜಿ ಸದಸ್ಯ ಭಾಲಚಂದ್ರ ಸೂರ್ಯವಂಶಿ, ಕೆಎಂಎಫ್ ನಿರ್ದೇಶಕ ಈರಣ್ಣಾ ಝಳಕಿ, ಬಸವರಾಜ ಬಿರಾದಾರ ನೆಲ್ಲೂರ ಮತ್ತಿತರರು ಮಾತನಾಡಿ, ಬರುವ ಚುನಾವಣೆಯಲ್ಲಿ ಬೀದರ್ ಲೋಕಸಭಾ ಚುನಾವಣೆಯಲ್ಲಿ ಧರ್ಮಸಿಂಗ್ ಅವರ ಗೆಲವಿಗೆ ಶ್ರಮಿಸಲು ಕಾರ್ಯಕರ್ತರು ಕಂಕಣಬದ್ಧರಾಗಿ ದುಡಿಯಬೇಕು ಎಂದರು. ಫೀರದೊಸ್ ಅನ್ಸಾರಿ, ಲತೀಪ್ ಮುರುಮಕರ್, ಕರಬಸಪ್ಪ ಬಂಗರಗಿ, ಶಿವುಕುಮಾರ ನಿಪ್ಪಾಣಿ, ಬಸೀರ್ ಗುತ್ತೇದಾರ, ಶಕೀನಾ ಬೇಗಂ, ದತ್ತು ಹೊನ್ನಳ್ಳಿ, ಮೊಮ್ಮದ್ ಅನ್ಸಾರಿ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು. ಇದೇ ವೇಳೆ ಪಕ್ಷಕ್ಕೆ ಸೇರ್ಪಡೆಗೊಂಡ ಮುಖಂಡರಿಗೆ ಸ್ವಾಗತಿಸಿ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.
ಅಕಾಲಿಕ ಮಳೆ; ಕಬ್ಬಿನ ಬೆಳೆ ಸಂಪೂರ್ಣ ನಾಶ
ಶಹಾಬಾದ್: ಶಹಾಬಾದ್ ಬಳಿಯ ಗುಲ್ಬರ್ಗ ತಾಲೂಕಿನ ನಡುವಿನಹಳ್ಳಿ ಗ್ರಾಮದ ರೈತ ಶಿವಶಂಕರ ಮೆಡಗುದ್ಲಿ ಸಾಲ ಮಾಡಿ ಹೊಲದಲ್ಲಿ ಹಾಕಿದ ಕಬ್ಬನ ಬೆಳೆ ಕಳೆದ ಸೋಮವಾರ ಸುರಿದ ಆಲಿಕಲ್ಲುಯುಕ್ತ ಭಾರಿ ಮಳೆಯಿಂದ ಬೆಳೆ ಸಂಪೂರ್ಣ ನಾಶವಾಗಿದ್ದು, ಈಗ ರೈತ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಾಗಿದೆ. 5 ಲಕ್ಷ ಸಾಲ ಮಾಡಿ ನದಿಯಲ್ಲಿ ಪಂಪ್ ಅಳವಡಿಸಿ, ಪೈಪ್ಲೈನ್ ಹಾಕಿದ್ದ. ಹೊನ್ನಕಿರಣಗಿ ಗ್ರಾಮದ ವಿಜಯ ಬ್ಯಾಂಕ್ನಿಂದ 5 ಲಕ್ಷ ಸಾಲ ಪಡೆದು ಕಬ್ಬನ್ನು ಹಚ್ಚಿದ ರೈತನ ಶ್ರಮಕ್ಕೆ ಒಳ್ಳೆಯ ಬೆಳೆ ಬಂದಿದ್ದರೂ, ಸೋಮವಾರ ಬಿದ್ದ ಆಲಿಕಲ್ಲುಯುಕ್ತ ಮಳೆಯಿಂದ ಬೆಳೆ ಸಂಪೂರ್ಣ ನಾಶವಾಗಿದೆ. ಈಗ ರೈತ ಪ್ರಕೃತಿಯ ವಿಕೋಪಕ್ಕೆ ಕಂಗಾಲಾಗಿದ್ದು, ಪೈಪ್ಲೈನ್ಗಾಗಿ, ಬೆಳೆಗಾಗಿ ಮಾಡಿದ 10 ಲಕ್ಷ ಸಾಲ ತೀರಿಸದ ಸ್ಥಿತಿಯಲ್ಲಿದ್ದಾನೆ. ಈ ಅಕಾಲಿಕ ಆಲಿಕಲ್ಲು ಮಳೆಯಿಂದ ಇಡಿ ಕುಟುಂಬ ತತ್ತರಿಸಿ ಹೋಗಿದೆ. ಸರ್ಕಾರ ಕೂಡಲೇ ರೈತನಿಗೆ ಪರಿಹಾರ ನೀಡಿ ಮಾನಸಿಕ ಸ್ಥೈರ್ಯ ನೀಡಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

