ಗುಲ್ಬರ್ಗಾ

ಇಂದು ಬೆಳೆ ಹಾನಿ ಸಮೀಕ್ಷೆ

Published On :

ಆಳಂದ: ತಾಲೂಕಿನಲ್ಲಿ ಇತ್ತೀಚೆಗೆ ಬಿದ್ದ ಆಲಿಕಲ್ಲು ಮಳೆ, ಬಿರುಗಾಳಿಗೆ ತುತ್ತಾಗಿ ಕೃಷಿ ಕ್ಷೇತ್ರದಲ್ಲಿ 26,063 ಎಕರೆ ಮತ್ತು ತೋಟಗಾರಿಕೆ 2,414 ಎಕರೆ ಫಸಲು ಹಾನಿಯಾದ ಕುರಿತು ತಾಲೂಕು ಆಡಳಿತವು ವರದಿ ಸಿದ್ಧಪಡಿಸಿದ್ದು, ಒಂದೆರಡು ದಿನಗಳಲ್ಲಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲು ಪೂರ್ವ ತಯಾರಿ ಮಾಡಿಕೊಳ್ಳುತ್ತಿದೆ.
ಬೆಳೆ ಹಾನಿ ಕುರಿತು ಅಂದಾಜಿನ ಸರ್ವೆ ಮುಂದುವರಿದಂತೆ ಅಂಕಿ- ಸಂಖ್ಯೆ ಹೆಚ್ಚುತ್ತಲೇ ಇದೆ. ಕೃಷಿ ಕ್ಷೇತ್ರದಲ್ಲಿ 8,751 ಮಂದಿ ರೈತರ ವಿವಿಧ ಬೆಳೆ ಸೇರಿ 26,063 ಎಕರೆ ಹಾನಿಯಾಗಿದೆ. ಜೋಳ- 15,042 ಎಕರೆ, ಗೋದಿ- 6,314 ಎಕರೆ, ಕಡಲೆ- 2,085 ಎಕರೆ, ಕುಸಬೆ 785 ಎಕರೆ, ಹತ್ತಿ 29 ಎಕರೆ, ಕಬ್ಬು 1,788 ಎಕರೆ ಬತ್ತ 20 ಎಕರೆ ಹೀಗೆ ಒಟ್ಟು 26,063 ಎಕರೆ ಕೈಗೆ ಬಂದ ಬೆಳೆ ಹಾನಿಯಾದ ಕುರಿತು ಕೃಷಿ ಇಲಾಖೆಯ ಅಂದಾಜಿಸಿದೆ.
22.76 ಕೋಟಿ ಹಾನಿ: ಆಳಂದ, ನರೋಣಾ, ಖಜೂರಿ, ಮಾದನಹಿಪ್ಪರಗಾ ಮತ್ತು ನಿಂಬರಗಾ ವಲಯದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿ ಸುಮಾರು 22.76 ಕೋಟಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಬರೀ ತೋಟಗಾರಿಕೆ ಹಾನಿಯನ್ನು ಆಳಂದ ವಲಯದಲ್ಲಿ 178 ರೈತರಿಗೆ ಸಂಬಂಧಿತ 288 ಎಕರೆ ತರಕಾರಿ, 109 ಎಕರೆ ಹಣ್ಣು ಬೆಳೆ ಹಾನಿ ಸೇರಿ 2.33 ಕೋಟಿ ರುಪಾಯಿಗಳಷ್ಟು ಹಾನಿಯಾಗಿದೆ.
ಖಜೂರಿ: ಇಲ್ಲಿನ 288 ರೈತರ 311 ಎಕರೆ ತರಕಾರಿ, 165 ಎಕರೆ ಹಣ್ಣು ಸೇರಿ 3.86 ಕೋಟಿ, ಮಾದನಹಿಪ್ಪರಗಾ 61 ರೈತರ 94 ಎಕರೆ ತರಕಾರಿ, 49 ಎಕರೆ ಹಣ್ಣಿನ ಫಸಲು ಸೇರಿ 1.50 ಕೋಟಿಯ ಬಾಳೆ ಹಾನಿಯಾಗಿದೆ.
ನಿಂಬರ್ಗಾ: 183 ರೈತ ಪೈಕಿ 201 ಎಕರೆ ತರಕಾರಿ, 121 ಎಕರೆ ಹಣ್ಣು ಸೇರಿ 4.33 ಕೋಟಿ ಹಾನಿ ಅಂದಾಜಿಸಿದೆ. ನರೋಣಾ 500 ರೈತರಲ್ಲಿ 922 ಎಕರೆ ತರಕಾರಿ, 200 ಎಕರೆ ಹಣ್ಣು ಸೇರಿ 10.84 ಕೋಟಿ ಮೌಲ್ಯದ ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಂದಾಜಿಸಿದೆ.
ಕೇಂದ್ರದಿಂದ ಸಮೀಕ್ಷೆ: ದ್ರಾಕ್ಷಿ, ಜೋಳ, ಪಪ್ಪಾಯಿ ಸೇರಿದಂತೆ ಹತ್ತಾರು ಬೆಳೆಗಳ ಕೈಗೆ ಬಾರದೆ ಕೋಟ್ಯಂತರ ರುಪಾಯಿ ಹಾನಿಯಾದ ಕುರಿತು ಸಮೀಕ್ಷೆ ನಡೆಸಲು ಕೇಂದ್ರದ ತಂಡವೊಂದು ಶನಿವಾರ ಆಳಂದ ತಾಲೂಕಿನ ಹಲವು ಗ್ರಾಮದ ಹೊಲ- ಗದ್ದೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಲಿದೆ.
ತಂಡವು ಗುಲ್ಬರ್ಗದ ಮಹಾಗಾಂವ್ ಮಾರ್ಗದಿಂದ ತಾಲೂಕಿನ ಬೆಳಮಗಿ, ಕರಹರಿ, ತಡಕಲ್, ನರೋಣಾ ಆಳಂದ ಭಾಗದ ಮತ್ತಿತರ ಬೆಳೆಹಾನಿ ಸಮೀಕ್ಷೆ ನಡೆಸಲಿದೆ ಎಂದು ತಹಸೀಲ್ದಾರ ಪರಮೇಶ್ವರ ಕೆ. ಸ್ವಾಮಿ ಅವರು ಇಂದಿಲ್ಲಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.