ಗುಲ್ಬರ್ಗಾ

ಉಚಿತ ಆರೋಗ್ಯ ತಪಾಸಣಾ ಶಿಬಿರ

Published On :

ಗುಲ್ಬರ್ಗ: ಇತ್ತೀಚೆಗೆ ಡಾನ್‌ಬಾಸ್ಕೋ ಪ್ಯಾರ್ ಸಂಸ್ಥೆವತಿಯಡಿ ರೋಟರಿ ಕ್ಲಬ್ ಆಫ್ ಸನ್‌ಸಿಟಿ ನೇತೃತ್ವದಲ್ಲಿ ರಾಜಾಪುರ ಬಡಾವಣೆಯಲ್ಲಿ ನುರಿತ ವೈದ್ಯರ ಉಪಸ್ಥಿತಿಯಲ್ಲಿ ಒಂದು ದಿನದ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು. ರಾಜಾಪುರ ಬಡಾವಣೆ ತೀರಾ ಕೊಳಚೆ ಪ್ರದೇಶವಾಗಿರುವುದರಿಂದ ಅಲ್ಲಿನ ಜನರ ಆರೋಗ್ಯ ಸ್ಥಿತಿಯು ಹದಗೆಟ್ಟಿರುವುದು. ಅದನ್ನು ಗಮನಿಸಿದ ಸಂಸ್ಥೆಯು 90 ಮನೆಗಳಲ್ಲಿರುವ 300 ಮಕ್ಕಳು ಹಾಗೂ 300 ನಾಗರಿಕರನ್ನು ತಪಾಸಣೆಗೆ ಒಳಪಡಿಸಿ ಉಚಿತವಾಗಿ ಚಿಕಿತ್ಸೆ ನೀಡಿದರು. ಅಧ್ಯಕ್ಷತೆಯನ್ನು ಸಂಸ್ಥೆ ನಿರ್ದೇಶಕ ಫಾದರ್ ಪ್ರಸಾದ ವಹಿಸಿದ್ದರು. ವೈದ್ಯರಾದ ಡಾ. ಸಂದೀಪ ಡಾ. ರಾಘವೇಂದ್ರ, ಡಾ. ನಿಶಾಂತ, ಡಾ. ಅನುತೇಜ ಡಾ. ಕಿರಣ, ಡಾ. ಪ್ರಿಯಾತಲ್, ಡಾ. ಯುವರಾಜ ಪಾಟೀಲ ಮತ್ತಿತರರಿದ್ದರು.

ಚರಂಡಿ ನೀರು ರಸ್ತೆಗೆ ಬಿಟ್ಟರೆ ಓಡಾಡುವುದೆಲ್ಲಿ?
ಶಹಾಪುರ: ತಾಲೂಕಿನ ಮುನಮುಟಿಗಿ ಗ್ರಾಮದಲ್ಲಿನ ದಲಿತರ ಕೇರಿಯಲ್ಲಿ ಚರಂಡಿ ನೀರು ಸಂಪೂರ್ಣ ರಸ್ತೆಗೆ ಬರುತ್ತಿರುವದರಿಂದ ಇಡೀ ಓಣಿಯ ವಾತಾವರಣ ಕಲುಷಿತಗೊಂಡಿದೆ ಎಂದು ಕರ್ನಾಟಕ ಪ್ರಾಂತ ರೈತ ಗ್ರಾಮದ ಅವ್ಯವಸ್ಥೆ ಬಗ್ಗೆ ತಹಸೀಲ್ದಾರರಿಗೆ ಮನವಿ ಸಲ್ಲಿಸಿದೆ.
ಜಿಲ್ಲಾ ಸಂಚಾಲಕ ಎಸ್.ಎಂ. ಸಾಗರ ಮಾತನಾಡಿ, ಮೊದಲು ಗ್ರಾಮದ ಪಕ್ಕದಲ್ಲಿದ್ದ ಜಮೀನಿನ ಭಾಗದಲ್ಲಿ  ಕೊಳಚೆ ನೀರು ಹರಿದು ಹೋಗುತ್ತಿದ್ದು, ಸದ್ಯ ಖಾಸಗಿ ಜಮೀನುದವರು ನೀರು ಬಂದ್ ಮಾಡಿದ್ದರ ಪರಿಣಾಮ ಕಲುಷಿತವಾದ ನೀರೆಲ್ಲ ರಸ್ತೆಯನ್ನು ಆಕ್ರಮಿಸಿದೆ. ದಲಿತರು ವಾಸಿಸುವ ಬಡಾವಣೆಗೆ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುವಂತಾಗಿದೆ. ದಿನನಿತ್ಯ ಜನ ಪರದಾಡುತ್ತಿದ್ದಾರೆ ಎಂದು ದೂರಿದರು. ಈ ಕುರಿತು ಸಂಬಂಧಿಸಿದ ಪಂಚಾಯಿತಿಗೆ, ಅಧಿಕಾರಿಗಳ ಗಮನಕ್ಕೆ ತಂದರೂ ಸಂಪೂರ್ಣ ನಿಷ್ಕಾಳಜಿ ವಹಿಸಿದ್ದಾರೆ. ತಾವು ಈ ಕುರಿತು ಪರಿಶೀಲಿಸಿ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಿ, ಚರಂಡಿ ನೀರಿನ ಅವ್ಯವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

'ಧರ್ಮದ ಅನುಷ್ಠಾನದಿಂದಲೇ ಲೋಕ ಸುಖ'
ಅಫಜಲ್ಪುರ: ಧರ್ಮದ ಅನುಷ್ಠಾನದಿಂದಲೇ ಲೋಕ ಸುಖವಾಗಿರುತ್ತದೆ. ಧರ್ಮದ ಅನುಷ್ಠಾನ ಇಲ್ಲದಿದ್ದರೆ ಜಗತ್ತು ಉಳಿಯುವುದಿಲ್ಲ ಎಂದು ಶೃಂಗೇರಿ ಶಾರದಾ ಪೀಠದ ಭಾರತಿ ತೀರ್ಥ ಸ್ವಾಮೀಜಿ ನುಡಿದರು.
ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶಾರದಾ ಪೀಠದ ಶಾಖಾ ಮಠವನ್ನು ಉದ್ಘಾಟಿಸಿ ಆಶೀರ್ವಚನ ನೀಡುತ್ತಾ, ಭಗವಂತ ಕರುಣಾಸಾಗರ. ನಾವು ಭಕ್ತಿಯಿಂದ ಭಗವಂತನನ್ನು ಸ್ಮರಿಸಬೇಕು ಎಂದರು.
ಮನುಷ್ಯ ಬೇಡದ ವಿಚಾರ, ಮಾತು, ನೋಟಗಳನ್ನು ಬಿಟ್ಟು ದೇವರ ಸ್ಮರಣೆಯನ್ನು ಮಾಡುತ್ತಾ ಇದ್ದರೆ ನಿಮ್ಮ ಭಕ್ತಿಗೆ ದೇವರು ಮೆಚ್ಚುತ್ತಾನೆ. ನಾನು 2007ರಲ್ಲಿ ಈ ಭಾಗದಲ್ಲಿ ಸಂಚಾರ ಮಾಡಿದ್ದೆ. ಉತ್ತರ ಕರ್ನಾಟಕ ಭಾಗದ ಜನರು ಮನವಿಗೆ ಸ್ಪಂದಿಸಿ ಈ ಭಾಗದ ಬಿಜಾಪುರ, ಅಫಜಲ್ಪುರ, ಗುಲ್ಬರ್ಗಗಳಲ್ಲಿ ಮಠಗಳನ್ನು ಸ್ಥಾಪಿಸಲಾಗಿದೆ. ಎಲ್ಲರೂ ಶಂಕರರ ಶ್ರದ್ಧೆ ಪಠಣ ನಡೆಸಿ ಜೀವನ ಪಾವನರಾಗಿರಿ ಎಂದು ಹೇಳಿದರು.
ಶೃಂಗೇರಿ ಮಠದ ಆಡಳಿತಾಧಿಕಾರಿ ಗೌರಿಶಂಕರ, ಸೋಮನಾಥ ಸ್ವಾಮೀಜಿ, ಸಿದ್ದರಾಜ ಸ್ವಾಮೀಜಿ, ನರಸಿಂಹ ಮಹಾರಾಜರು, ಸಿಂದಗಿಯ ಸಿದ್ದಯೋಗೇಶಿ ಸ್ವಾಮೀಜಿ, ಮಠದ ಅಧ್ಯಕ್ಷ ಆಂಜಿನೇಯ ಕುಲಕರ್ಣಿ, ಅನಂತರಾವ್ ಕುಲಕರ್ಣಿ, ಸಮಾಜದ ಅಧ್ಯಕ್ಷ ರಮೇಶ ಆಲಮೇಲಕರ, ಚಂದ್ರಕಾಂತ ಕುಲಕರ್ಣಿ, ಅಶೋಕರಾವ್ ಕುಲಕರ್ಣಿ, ದತ್ತಾತ್ರೇಯ ಕುಲಕರ್ಣಿ, ಸುಧೀರ ಆಲಮೇಲಕರ, ಬಾಲಚಂದ್ರ ಪುರೋಹಿತ, ಮಾಣಿಕ ಕುಲಕರ್ಣಿ, ಪಾಂಡುರಂಗ ಕುಲಕರ್ಣಿ, ರಾಮರಾವ್ ಜೋಷಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.