ಗುಲ್ಬರ್ಗಾ

ಕ್ಷಯರೋಗ ಜಾಗೃತಿ ಅವಶ್ಯ

Published On :

ಯಾದಗಿರಿ: ದೇಶದ ಆರ್ಥಿಕ ಪ್ರಗತಿಗೆ ಮಾರಕವಾಗಿರುವ ಕ್ಷಯರೋಗವನ್ನು ನಿಯಂತ್ರಿಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರದ್ದಾಗಿದ್ದು, ಈ ದಿಶೆಯಲ್ಲಿ ಸಮಾಜದಲ್ಲಿ ಜಾಗೃತಿಯನ್ನುಂಟು ಮಾಡಬೇಕಾಗಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಭಗವಂತ ಅನ್ವರ ಹೇಳಿದರು.
ನಗರದ ಪದವಿ ಕಾಲೇಜಿನಲ್ಲಿ ಸೋಮವಾರ ಜಿಲ್ಲಾ ಕ್ಷಯರೋಗ ಕಾರ್ಯಲಯದ ವತಿಯಿಂದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಅವರು, ಎರಡು ವಾರಕ್ಕಿಂತ ಜಾಸ್ತಿ ಕಾಲ ಕೆಮ್ಮು, ಸಂಜೆಯ ವೇಳೆ ಜ್ವರ, ಕಡಿಮೆ ತೂಕ, ಕಫ, ಹಸಿವಾಗದಿರುವುದು, ಇವು ಕ್ಷಯರೋಗದ ಲಕ್ಷಣಗಳು. ಈ ಲಕ್ಷಣಗಳು ಕಂಡು ಬಂದ ರೋಗಿಯು ತಕ್ಷಣ ಹತ್ತಿರದ ಆಸ್ಪತ್ರೆಗೆ ತೆರಳಿ ಕಫ ಪರೀಕ್ಷೆ ಮಾಡಿಕೊಳ್ಳಬೇಕು. ಸರ್ಕಾರದಿಂದ ರೋಗಿಗಳಿಗೆ ಉಚಿತ ಔಷಧಿಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಸತತ ಚಿಕಿತ್ಸೆಯಿಂದ ಈ ಕಾಯಿಲೆ ಕಡಿಮೆಯಾಗುತ್ತದೆ ಎಂದರು.
ಮಾರಣಾಂತಿಕ ಕಾಯಿಲೆ ಅಲ್ಲ:ಜಿಲ್ಲಾ ಆರೋಗ್ಯಧಿಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ ಮಾತನಾಡಿ, ಕ್ಷಯರೋಗ ಇಂದು ಮಾರಣಾಂತಿಕ ಕಾಯಿಲೆ ಅಲ್ಲ. ಈ ರೋಗ ಕಂಡ ಕೂಡಲೇ ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸಬಹುದಾಗಿದ್ದು, ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವುದು ಅಗತ್ಯ ಎಂದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸೂರ್ಯಪ್ರಕಾಶ ಕಂದಕೂರ ಮಾತನಾಡಿ, ರಾಬರ್ಟ್ ಕಾರ್ಕ್ ಎಂಬ ವಿಜ್ಞಾನಿ ಈ ರೋಗವು ಮೈಕೊ ಬ್ಯಾಕ್ಟಿರೀ ಟ್ಯುಬರ್‌ಕೊಲಸ್ ಎಂಬ ರೋಗಾಣುವಿನಿಂದ ಬರುತ್ತದೆ ಎಂಬುದನ್ನು 1882 ಮಾ. 24ರಂದು ಸಂಶೋಧಿಸಿದ ಕಾರಣ ಪ್ರತಿ ಮಾ. 24ರಂದು ವಿಶ್ವ ಕ್ಷಯರೋಗ ದಿನವಾಗಿ ಆಚರಿಸಲಾಗುತ್ತದೆ.
90 ಲಕ್ಷ ಕ್ಷಯಪೀಡಿತರು:ವಿಶ್ವದಲ್ಲಿ 90 ಲಕ್ಷ ಮಂದಿ ಕ್ಷಯರೋಗಕ್ಕೆ ತುತ್ತಾಗಿದ್ದಾರೆ. ಈ ಪೈಕಿ 30 ಲಕ್ಷ ಜನರು ಕ್ಷಯರೋಗ ಸೇವೆಗಳಿಂದ ವಂಚಿತವಾಗಿದ್ದಾರೆ. ವಂಚಿತರಾದವರನ್ನು ಹುಡುಕಿ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡುವುದೆ ನಮ್ಮ ಧ್ಯೇಯ ಎಂದರು.   ಪದವಿ ಕಾಲೇಜು ಪ್ರಾಂಶುಪಾಲ ಡಾ. ಸುಭಾಶ್ಚಂದ್ರ ಕೌಲಗಿ, ಮೊನಯ್ಯ ಕಲಾಲ, ಪ್ರಹ್ಲಾದ ಜೋಶಿ, ತಾಲೂಕ ಆರೋಗ್ಯಧಿಕಾರಿ ಡಾ. ಚಂದ್ರಕಾಂತ ನರಿಗೋಳಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.