ಗುಲ್ಬರ್ಗಾ

ಆಧಾರ್ ಹಿಂಪಡೆಯಲು ಆಗ್ರಹ

Published On :

ಕನ್ನಡಪ್ರಭ ವಾರ್ತೆ  ಯಾದಗಿರಿ  ಮಾ.26
ಆಧಾರ್ ಕಾರ್ಡ್ ಕುರಿತು ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಭ್ರಷ್ಟಾಚಾರದ ವಿರುದ್ಧ ಯುವಜನತೆ ಸಂಘಟನೆಯು ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಗಳಿಗೆ ಬುಧವಾರ ಮನವಿ ಸಲ್ಲಿಸಿತು.
  ಸಂಘಟನೆಯ ರಾಜ್ಯ ಕಾರ್ಯಕಾರಣಿ ಸದಸ್ಯ ವೀರಭಧ್ರ ಕಿರದಳ್ಳಿ ಮಾತನಾಡಿ ಆಧಾರ್‌ಕಾರ್ಡ್ ಅನ್ನು ಅಕ್ರಮವಾಗಿ ವಿದೇಶಿಯರಿಗೂ ಅಂದರೆ ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ ಮತ್ತು ಅನೇಕ ದೇಶಗಳಿಗೆ ಸೇರಿದ ವಲಸಿಗರಿಗೆ ನೀಡಿರುವ ಬಗ್ಗೆ ದೇಶದ ಪತ್ರಿಕೆಗಳಲ್ಲಿ, ಟಿ.ವಿ.ಗಳಲ್ಲಿ ವಿಪರೀತವಾಗಿ ಸುದ್ದಿಯಾಗುತ್ತಿದೆ.
 ಆಧಾರ್ ಕಾರ್ಡ್‌ನ ನಂಬರ್ ಪಡೆಯಲು ಬಯೋವುಟ್ರಿಕ್ ಮಾಹಿತಿಯನ್ನೂ ನೀಡದೆ ಯಾರದೋ ಕೈ ಬೆರಳಿನ ಬೆರಳಚ್ಚನ್ನು ಇನ್ನಾರಿಗೋ ನೀಡಿ, ಯಾರದೋ ಕಣ್ಣಿನ ಮಾಹಿತಿಯನ್ನು ಇನ್ನಾರಿಗೋ ನೀಡಿ, ಆಧಾರ್ ಕಾರ್ಡ್ ನಂಬರ್ ನೀಡಲಾಗಿದೆ. ಇದರಿಂದ ಭಾರತದ ಸುರಕ್ಷತೆಗೆ ಭಾರಿ ದೊಡ್ಡ ಸವಾಲೆ ಎದುರಾಗಿದೆ ಎಂದರು.
ಪ್ರಾಧಿಕಾರದ ವಿರುದ್ಧ ಕ್ರಮಕ್ಕೆ ಆಗ್ರಹ: ರಾಷ್ಟ್ರಪತಿಗಳು ಕೇಂದ್ರ ಸರ್ಕಾರ ಮತ್ತು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಂಘಟನೆ ಒತ್ತಾಯಿಸಿದೆ.
  ಸುಪ್ರೀಂಕೋರ್ಟ್ ಆದೇಶದಂತೆ ಆಧಾರ್ ಗುರುತಿನ ಚೀಟಿಯನ್ನು ಕಡ್ಡಾಯವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು. ಈ ವಿಷಯದಲ್ಲಿ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಬೇಕು. ಈ ಯೋಜನೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಹಾಗೂ ಸಾರ್ವಜನಿಕರ 8,000 ಕೋಟಿ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ಹಿಂತಿರುಗಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಭ್ರಷ್ಟಾಚಾರದ ವಿರುದ್ಧ ಯುವಜನತೆ ಆಗ್ರಹಿಸಿದೆ.
  ಈ ಸಂದರ್ಭದಲ್ಲಿ ಬಸವಂತರೆಡ್ಡಿ, ಕಿರಣ್ ಬೆಲ್ಲದ, ಸಚಿನ್, ನರಸಿಂಹ, ರಘು ಚವಾಣ, ಬಸವರಾಜ, ಮಹಾದೇವರೆಡ್ಡಿ ಇತರರು ಉಪಸ್ಥಿತರಿದ್ದರು.

ಕಸಾಪ ವಲಯ ಪದಾಧಿಕಾರಿ ನೇಮಕ
ಶಹಾಪುರ: ತಾಲೂಕಾ ಕಸಾಪ ವತಿಯಿಂದ ಭೀಮರಾಯನ ಗುಡಿ ವಲಯ ಪದಾಧಿಕಾರಿಗಳನ್ನು ಈಚೆಗೆ ಆಯ್ಕೆ ಮಾಡಲಾಯಿತು. ಖಾಸಿಂ ಅಲಿ ಹಜರತಿ-ಅಧ್ಯಕ್ಷ, ಭೀಮು ಶಹಾಪುರ-ಕೋಶಾಧ್ಯಕ್ಷ, ಹಣಮಂತ್ರಾಯ ಚನ್ನೂರ-ಕಾರ್ಯದರ್ಶಿ, ಹುಸೇನಬಾಷ ಗೋಗಿ-ಖಜಾಂಚಿ, ಶಕುಂತಲಾ ಹಡಗಲಿ, ಕವಿತಾ ಹಳ್ಳಿ- ಮಹಿಳಾ ಪ್ರತಿನಿಧಿ, ರಾಜಗೋಪಾಲ ವಿಭೂತಿ-ಪಜಾ. ಪಪಂ ಪ್ರತಿನಿಧಿ, ಸಿದ್ದು ಹಯ್ಯಾಳಕರ್ ಸಂಘ ಸಂಸ್ಥೆ ಪ್ರತಿನಿಧಿ, ಸದಾಶಿವ ಎಂ.ಪೂಜಾರಿ, ರೇಖು ಚವಾಣ, ಸಿ.ಎನ್.ಹಿರೇಮಠ, ಬಸವರಾಜ, ಶಾರದಾ, ಶಕುಂತಲಾ, ಬಸವರಾಜ ಗುರುಗುಂಟಾ, ಪರಶುರಾಮ, ಹುಸೇನಬಾಷ, ಅಂಬ್ರೇಶ-ಗೌರವ ಸದಸ್ಯರು ಕಸಾಪ ಸಂ.ಕಾರ್ಯದರ್ಶಿ ರಾಘವೇಂದ್ರ ಹಾರಣಗೇರಾ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.