ಕೃಷಿಯಲ್ಲಿ ತಂತ್ರಜ್ಞಾನ ಅಗತ್ಯ
ಗೌರಿಬಿದನೂರು: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಬೆಂಗಳೂರು, ಪ್ರಗತಿ ಗ್ರಾಮೀಣ ಬ್ಯಾಂಕ್ ಮಂಚೇನಹಳ್ಳಿ ಶಾಖೆ ಹಾಗೂ ರೈತ ಕೂಟ ಪ್ರವರ್ಧನಾ ಸಂಸ್ಥೆಯಾದ ವಿಕಾಸ ಸೇವಾ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಮಂಚೇನಹಳ್ಳಿ ಆಶ್ರಯದಲ್ಲಿ ಜೈಕಿಸಾನ್ ರೈತ ಕೂಟ ಗುಯ್ಯಲಹಳ್ಳಿಯಲ್ಲಿ ಮಾಸಿಕ ಸಭೆ ವಿಕಾಸ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಪ್ರಗತಿ ಗ್ರಾಮೀಣ ಬ್ಯಾಂಕ್ ಶಾಖೆಯ ಹಿರಿಯ ವ್ಯವಸ್ಥಾಪಕ ಶಿವಕುಮಾರ್ ಮಾತನಾಡಿ, ರೈತ ಕೂಟಗಳು ಗ್ರಾಮಗಳಿಗೆ ಸಾಂಘಿಕ ಸಾಲಗಳು ಹರಿದು ಬರುವುದನ್ನು ಉತ್ತಮಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಿವೆ. ಕೃಷಿ ತಂತ್ರಜ್ಞಾನ ರೈತರಿಗೆ ವರ್ಗಾವಣೆಯಾಗಲು ಸಾಧನವಾಗಿದೆ. ಕೃಷಿ ಉತ್ಪನ್ನ ಹಾಗೂ ಉತ್ಪಾದಕತೆ ಹೆಚ್ಚಾಗಲು ಕಾರಣವಾಗಿದೆ ಎಂದರು.
ಭಾರತೀಯ ಕೃಷಿ ಸಂದಿಗ್ಧ ಸ್ಥಿತಿಯಲ್ಲಿದೆ. ಸಮಗ್ರ ಬೆಳವಣಿಗೆ ಅವಶ್ಯವಿದ್ದು, ಈ ವಲಯಕ್ಕೆ ತಂತ್ರಜ್ಞಾನ ಮತ್ತು ಶಾಸ್ತ್ರೀಯ ವ್ಯವಸಾಯ ಅಳವಡಿಸಿಕೊಂಡು ಉತ್ಪಾದಕತೆ ಹಾಗೂ ಖರ್ಚು ಕಡಿಮೆ ಮಾಡಬೇಕಾದ ಅವಶ್ಯಕತೆ ಇದೆ. ಕೃಷಿ ಉತ್ಪನ್ನಕ್ಕೆ ಮೌಲ್ಯವರ್ಧನೆ ಮತ್ತು ಸಾರ್ವಜನಿಕ ಸಂಘ- ಸಂಸ್ಥೆಗಳ, ತಂತ್ರಜ್ಞಾನ ಬಳಕೆದಾರರು ಹಾಗೂ ಸಮುದಾಯ ಕ್ಷೇತ್ರಗಳೊಂದಿಗೆ ಹೊಸ ಸಹಭಾಗಿತ್ವ ಬೆಸುಗೆ, ಕೊಯ್ಲು ನಂತರ ನಿರ್ವಹಣೆ, ಅಧಿಕ ಬೆಲೆ ಪಡೆಯಲು, ದೇಶ ವಿದೇಶೀಯ ಮಾರುಕಟ್ಟೆಗಳಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಪಡೆಯಲು ರೈತ ಕೂಟ ತಯಾರಿ ನಡೆಸಬೇಕಿದೆ ಎಂದರು.
ವಿಕಾಸ ಸೇವಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಗೌರಿಶಂಕರ್ ಮಾತನಾಡಿ, ಗ್ರಾಮದಲ್ಲಿ ಸುಸ್ತಿದಾರರಿಲ್ಲದ ಹಾಗೆ ಮಾಡಬೇಕು. ಬ್ಯಾಂಕುಗಳಲ್ಲಿ ಲಭ್ಯವಿರುವ ಸೌಲಭ್ಯಗಳಾದ ಬೆಳೆ ಸಾಲ, ಹೈನುಗಾರಿಕೆ ಸಾಲ, ಕೃಷಿಯೇತರ ಚಟುವಟಕೆಗಳ ಸಾಲ, ರಕ್ಷಿತ ಕಪಾಟುಗಳು, ಅಪಘಾತ ವಿಮೆ, ಠೇವಣಿಗಳು, ಕೆಸಿಸಿ ನಿರ್ವಹಣೆ ಮತ್ತು ಲಾಭಗಳು ಸರ್ಕಾರದಿಂದ ನೀಡಲಾಗುವ ಬಡ್ಡಿ, ಸಹಾಯಧನ ಸೌಲಭ್ಯಗಳ ಬಗ್ಗೆ ರೈತರಿಗೆ ತಿಳಿಸಬೇಕು. ಪಶು ಚಿಕಿತ್ಸೆ, ಮಣ್ಣು ಪರೀಕ್ಷೆ ತರಬೇತಿ ಇತ್ಯಾದಿಗಳನ್ನು ಕೈಗೊಳ್ಳಬಹುದೆಂದರು.
ರೈತ ಕೂಟದ ಮುಖ್ಯ ಸಂಯೋಜಕ ಸ್ವಾಗತಿಸಿದರು. ಜಿ.ಸಿ ಲಕ್ಷ್ಮೀಪತಿ ವಂದಿಸಿದರು. ಸಹಾಯಕ ಮುಖ್ಯ ಸಂಯೋಜನಾಧಿಕಾರಿ ಜಿ.ಎಂ. ನರಸಿಂಹಮೂರ್ತಿ ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

