ಕೋಲಾರ

10 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Published On :


ಚಿಂತಾಮಣಿ:  ನಗರದ ಮದುವೆ ಮನೆಯೊಂದರಲ್ಲಿ 10 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳನ್ನು ಅಪಹರಿಸಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ರಾಮಕುಂಟೆ ರಸ್ತೆಯ ವರ್ತಕ ಶಬರೀಶ್ ಎಂಬಾತನ ಮದುವೆ ನಗರದ ಕೆಎಂಡಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿತ್ತು. ಮದುವೆಗೆ ಸಂಬಂಧಿಕರಾದ ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಅಮರಾಪುರ ನಗರದ ಎಂ.ಎಸ್. ಬಾಲಸುಬ್ರಮಣ್ಯಂ ಅಲಿಯಾಜ್ ಬಾಲು ಎಂಬುವರು ಕುಟುಂಬ ಸಮೇತ ಬುಧವಾರ ರಾತ್ರಿ ಆರಕ್ಷತೆ ಕಾರ್ಯಕ್ರಮಕ್ಕೆ ಕಾರಿನಲ್ಲಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾತ್ರಿ 11 ಗಂಟೆ ವೇಳೆಯಲ್ಲಿ ಕಲ್ಯಾಣ ಮಂಟಪ ಪಕ್ಕದ ವುಡ್‌ಲ್ಯಾಂಡ್ ವಸತಿ ನಿಲಯದಲ್ಲಿ ತಂಗಿದ್ದರು. ಲಗೇಜ್ ರೂಮಿನಲ್ಲಿಟ್ಟು ರಾತ್ರಿ ಅಲ್ಲೆ ಇದ್ದು, ಗುರುವಾರ ಬೆಳಿಗ್ಗೆ ಮುಹೂರ್ತಕ್ಕೆ ಸರಿಯಾಗಿ ಆಭರಣಗಳೊಂದಿಗೆ ಹಾಜರಾಗಿದ್ದರು.
ಮದುವೆ ಮುಗಿಸಿಕೊಂಡು ಕಲ್ಲಿನ ಹರಳಿನ ಹಾರ, ಬಂಗಾರದ ನೆಕ್ಲೇಸ್, ಪ್ಲಾಟಿನಂ ಕಾಸಿನ ಸರ, 6 ಉಂಗುರಗಳು ಸೇರಿದಂತೆ 310 ಗ್ರಾಂ ಬಂಗಾರದ ಒಡವೆಗಳು ಸೇರಿ ಒಟ್ಟು 10 ಲಕ್ಷಕ್ಕೂ ಮೇಲ್ಪಟ್ಟ ಆಭರಣಗಳಿದ್ದ ಲಗೇಜನ್ನು ಎಂ.ಎಸ್. ಬಾಲಸುಬ್ರಮಣ್ಯಂ ಅವರ ಪತ್ನಿ ವಿದ್ಯಾ ಅವರು ಇಂಡಿಗೋ ಕಾರಿನಲ್ಲಿ ಇಟ್ಟಿದ್ದರು. ಇದೇ ಸಂದರ್ಭ ಮೈ ಮೇಲಿದ್ದ ಒಡವೆಗಳನ್ನು ಅದರಲ್ಲಿಟ್ಟು ಲಾಕ್ ಮಾಡಿ ಮದುವೆ ಮನೆಗೆ ಬಂದು ಅರಿಶಿನ ಕುಂಕುಮ ಪಡೆದರು.
ಹಿಂದಿರುಗಿ ಬಂದು ನೋಡಿದಾಗ ಲಕ್ಷಾಂತರ ರು. ಮೌಲ್ಯದ ಒಡವೆಗಳ ಬ್ಯಾಗ್ ಕಾಣೆಯಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರು.
ಶ್ವಾನದಳ:  ಪೊಲೀಸ್ ಐಪಿಎಸ್ ಅಧಿಕಾರಿ ರಮೇಶ್ ಬನೂತ್ ಸ್ಥಳ ಪರಿಶೀಲಿಸಿದರು. ಕೋಲಾರ-ಚಿಕ್ಕಬಳ್ಳಾಪುರದಿಂದ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಕರೆಸಿ ಶೋಧಕಾರ್ಯ ನಡೆಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.