ಕೋಲಾರ

ಎಸ್‌ಡಿಎಂಸಿ ಪದಾಧಿಕಾರಿಗಳು

Published On :

ಶ್ರೀನಿವಾಸಪುರ:  ತಾಲೂಕಿನ ಚಲ್ದಿಗಾನಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ಶಿವಪುರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ.) ಇಲಾಖೆ ಹೊಸ ಆದೇಶದ ನಿಯಮಾನುಸಾರವಾಗಿ 13 ಜನರ ಆಯ್ಕೆ ಮಾಡಲಾಗಿದೆ. ಪ್ರಪ್ರಥಮವಾಗಿ ವೈ.ವೆಂಕಟೇಶ್ ಅವಿರೋಧವಾಗಿ ಆಯ್ಕೆ ಮಾಡಿರುವ ಎಸ್‌ಡಿಎಂಸಿ ಸದಸ್ಯರಾದ ಜಿ. ವೆಂಕಟೇಶ್, ಚಿಕ್ಕವೆಂಕಟೇಶ್, ಮುನಿಶಾಮಿ, ಶ್ರೀನಿವಾಸಪ್ಪ, ಆರ್.ವೆಂಕಟಶಾಮಿ, ರವಣಮ್ಮ, ರಾಧಮ್ಮ, ರತ್ನಮ್ಮ, ವೆಂಕಟಲಕ್ಷ್ಮೀ, ಲಕ್ಷ್ಮೀದೇವಿ, ಮಂಜುಳಮ್ಮ, ಮುನಿರತ್ನಮ್ಮ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭ ಮುಖ್ಯಶಿಕ್ಷಕ ಗೋವಿಂದರೆಡ್ಡಿ, ಸಹ ಶಿಕ್ಷಕ ಶ್ರೀನಾಥರೆಡ್ಡಿ, ಗ್ರಾಮಸ್ಥರು ಹಾಜರಿದ್ದರು.
ಬಂದ್ ಬೆಂಬಲಿಸಿ ಪ್ರತಿಭಟನೆ
ಶಿಡ್ಲಘಟ್ಟ: ಬೆಲೆ ಏರಿಕೆ ವಿರುದ್ಧ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಬಂದ್‌ಗೆ  ಕರೆ ನೀಡಲಾಗಿದ್ದ ಎರಡನೇ ದಿನವಾದ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಲಕ್ಷೀ ದೇವಮ್ಮರವರ ನೇತೃತ್ವದಲ್ಲಿ ಜೂನಿಯರ್ ಕಾಲೇಜು ಆವರಣದಿಂದ ನೂರಾರು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಎಸ್‌ಎಫ್‌ಐ ಜಿಲ್ಲಾ ಸಂಚಾಲಕ ಕುಂದಲಗುರ್ಕಿ ಮುನೀಂದ್ರ, ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಸುದರ್ಶನ್, ಪಾಪಣ್ಣ, ಅಶ್ವತಮ್ಮ ಪಾಲ್ಗೊಂಡಿದ್ದರು.
ಪುರಸಭೆಗೆ 6 ಮಂದಿ ನಾಮಪತ್ರ
ಶಿಡ್ಲಘಟ್ಟ: ಪುರಸಭಾ ಚುನಾವಣೆಗೆ ಗುರುವಾರ ನಾಲ್ಕು ಮಂದಿ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.  3ನೇ ವಾರ್ಡಿನ ಸಾಮಾನ್ಯ ಕ್ಷೇತ್ರದಿಂದ ಎಸ್.ವಿ ನಾಗರಾಜರಾವ್ (ಕಾಂಗ್ರೆಸ್), 16ನೇ ವಾರ್ಡಿನ ಸಾಮಾನ್ಯ ಕ್ಷೇತ್ರದಿಂದ ಸೈಯದ್ ಗೌಸ್ (ಜೆಡಿಎಸ್), 17ನೇ ವಾರ್ಡಿನ ಮೀಸಲು ಕ್ಷೇತ್ರದಿಂದ ನಗೀನ್ ತಾಜ್ (ಜೆಡಿಎಸ್), 22ನೇ ವಾರ್ಡಿನ ಸಾಮಾನ್ಯ ಕ್ಷೇತ್ರದಿಂದ ರಾಮಕೃಷ್ಣಪ್ಪ (ಪಕ್ಷೇತರ ಅಭ್ಯರ್ಥಿ) ಸಲ್ಲಿಸಿದ್ದು, ಈ ವರೆಗೂ 27ನೇ ವಾರ್ಡ್‌ಗಳಿಗೆ 6 ಮಂದಿ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ.
ಶಂಕುಸ್ಥಾಪನೆ
ಶಿಡ್ಲಘಟ್ಟ: ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕಿನ ಆವರಣದಲ್ಲಿ ಅಂಗಡಿ ಮಳಿಗೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಎ. ರಾಮಚಂದ್ರ, 15 ಲಕ್ಷ ವೆಚ್ಚದಲ್ಲಿ 6 ಅಂಗಡಿಗಳನ್ನು ನಿರ್ಮಿಸಲಾಗುವುದು. ಇದರಿಂದ ಪ್ರತಿ ತಿಂಗಳು ಸುಮಾರು 15 ಸಾವಿರ ಆದಾಯವನ್ನು ನಿರೀಕ್ಷಿಸಲಾಗಿದ್ದು, ಇದರಿಂದ ಬ್ಯಾಂಕಿನ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ ಎಂದರು. ಬ್ಯಾಂಕಿನ ಉಪಾಧ್ಯಕ್ಷ ಚೀಮನಹಳ್ಳಿ ಗೋಪಾಲ್, ಮಾಜಿ ಅಧ್ಯಕ್ಷ ಅಶ್ವತ್ಥನಾರಾಯಣ ರೆಡ್ಡಿ, ಕಾರ್ಯದರ್ಶಿಗಳಾದ ಮುನಿಯಪ್ಪ, ಶಿವಪ್ರಸಾದ್ ಮತ್ತಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.