ತುಕ್ಕು ಹಿಡಿದ ರೋಡ್ ರೋಲರ್
ಮಾಲೂರು: ವಿವಿಧ ರೀತಿಯ ರೋಡ್ ರೋಲರ್ಸ್ ಕಾಣಬೇಕಾದರೆ ಇಲ್ಲಿನ ತಾಪಂ ಕಚೇರಿಗೆ ಭೇಟಿ ನೀಡಿದರೆ ಸಾಕು! 50 ವರ್ಷದ ಹಳೆಯ ರೋಡ್ ರೋಲರ್ಸ್ನಿಂದ ಹಿಡಿದು ಕಳೆದ ದಶಕದ ರೋಡ್ ರೋಲರ್ವರೆಗೂ ಕಾಣಬಹುದಾಗಿದೆ.
ಹಾಗಾದರೆ ರಾಜ್ಯ ಸರ್ಕಾರವು ತಾಲೂಕು ಮಟ್ಟದಲ್ಲಿ ಮ್ಯೂಸಿಯಮ್ ಸ್ಥಾಪನೆ ಮಾಡುತ್ತಿದೆಯೇ? ಅಥವಾ
ದಿ. ಶಂಕರ್ನಾಗ್ರವರ ಮಾಲ್ಗುಡಿ ಡೇಸ್ನಲ್ಲಿದ್ದ ರೋಡ್ ರೋಲರ್ಸ್ ಇದೇ ಇರಬಹುದಾ ಎಂಬ ಅನಿಸಿಕೆ ನಿಮ್ಮಲ್ಲಿ ಬಂದಿದ್ದರೆ ಅದು ತಪ್ಪು. ಇವು ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಕಳೆದ ಹಲವು ದಶಕಗಳಿಂದ ಕಚೇರಿ ಅವರಣದಲ್ಲಿ ಕೊಳೆಯುತ್ತ, ತುಕ್ಕು ಹಿಡಿದು ನಿಂತಿರುವ ರೋಡ್ ರೋಲರ್ಗಳು.
ಇಲಾಖೆಗಳಲ್ಲಿ ಮೂಲೆ ಸೇರಿದ ವಸ್ತುಗಳನ್ನು ಹರಾಜು ಹಾಕಿರುವ ಇಲ್ಲಿನ ಜಿಪಂ ರೋಲರ್ಸ್ಗಳನ್ನು ಹರಾಜು ಹಾಕಲು ಜಿಲ್ಲಾಧಿಕಾರಿಗಳ ಕಚೇರಿಗೆ ಅನುಮತಿ ಕೋರಿ ಕಳುಹಿಸಿದ್ದ ಫೈಲು ಎರಡು ವರ್ಷದಿಂದ ಅಲ್ಲೇ ಕೊಳೆಯುತ್ತಿ ಬಿದ್ದಿದೆ. ಈ ಬಗ್ಗೆ ಹಲವು ಬಾರಿ ಪತ್ರ ವ್ಯವಹಾರ ನಡೆಸಿದ್ದರೂ ಪ್ರಯೋಜನವಾಗಿಲ್ಲ ಎನ್ನುವ ಇಲ್ಲಿನ ಎಇಇ ಬದ್ರಿನಾಥ್, ರೋಡ್ ರೋಲರ್ಸ್ ಜಿಲ್ಲಾ ಮಟ್ಟದಲ್ಲೇ ಹರಾಜು ಮಾಡಬೇಕಾಗಿರುವುದರಿಂದ ಇಲ್ಲಿ ಹಾಳಾಗಿ ಮೂಲೆ ಸೇರಿರುವ ಬೃಹತ್ ರೋಡ್ ರೋಲರ್ಸ್ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ. ಆದರೆ ಇದುವರೆಗೂ ಅಲ್ಲಿಂದ ಉತ್ತರ ಸಿಕ್ಕಿಲ್ಲ ಎನ್ನುತ್ತಾರೆ.
ರಸ್ತೆಗಿಳಿದು ನಿರಂತರ ಸೇವೆ ಸಲ್ಲಿಸಿ ಈಗ ಮೂಲೆ ಸೇರಿ ನಿಂತಿರುವ ರೋಲರ್ಸ್ಗೆ ಮುಕ್ತಿ ನೀಡದೆ ನಿರ್ಲಕ್ಷ ತೋರುವ ಜಿಲ್ಲಾಡಳಿತ ಹರಾಜು ಪ್ರಕ್ರಿಯೆ ಅನುಮತಿಯ ಫೈಲನ್ನು ಕ್ಲಿಯರ್ ಮಾಡಬೇಕಾಗಿದೆ. ಸರ್ಕಾರದ ಆಸ್ತಿ ಈ ರೀತಿಯಲ್ಲಿ ತುಕ್ಕು ಹಿಡಿದು ಸಂಪೂರ್ಣ ಹಾಳಾಗುವುದರೊಳಗೆ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

