ಕೋಲಾರ

ದುಸ್ತರವಾದ ರೈಲು ಪ್ರಯಾಣ ಬೋಗಿ ಹೆಚ್ಚಿಸಲು ಆಗ್ರಹ

Published On :

ಟೇಕಲ್: ರೇಲ್ವೆ ನಿಲ್ದಾಣದಿಂದ ಪ್ರತಿದಿನ ಸುಮಾರು 20ರಿಂದ 25 ಪ್ಯಾಸೆಂಜರ್ ರೈಲು ಹಾಗೂ 10ರಿಂದ 15 ಎಕ್ಸ್‌ಪ್ರೆಸ್ ರೈಲುಗಳು ಓಡಾಡುತ್ತಿವೆ. ಟೇಕಲ್ ಸುತ್ತಮುತ್ತಲಿನಿಂದ ಜನಕ್ಕೆ ರೈಲಿನಲ್ಲಿ ಹೋಗಿಬರುವುದೇ ಕಷ್ಟಕರವಾಗಿದೆ. ಪ್ರತಿದಿನ 3ರಿಂದ 4 ಸಾವಿರ ಜನ ಉದ್ಯೋಗಕ್ಕಾಗಿ ಮಾಲೂರು, ದೇವನಗುಂದಿ, ವೈಟ್‌ಫೀಲ್ಡ್, ಕೆ.ಆರ್.ಪುರಂ, ಗೂಡ್ಸ್, ಹೂಡಿ ಹಾಗೂ ಬೆಂಗಳೂರು ಸಿಟಿ ರೈಲು ನಿಲ್ದಾಣದವರೆಗೂ ಹೋಗುತ್ತಾರೆ. ಮೊದಲೇ ಜನ ತುಂಬಿರುವ ರೈಲಿಗೆ ಟೇಕಲ್‌ನಿಂದ ರೈಲು ಹತ್ತಲು ಆಗದ ಸ್ಥಿತಿಯಲ್ಲಿ ಜನತೆ ಓಡಾಡಬೇಕಿದೆ. ಇನ್ನು ಬೋಗಿಯೊಳಗೆ ಸುಮಾರು 8 ಜನ ಕೂರುವ ಸ್ಥಳದಲ್ಲಿ 16ರಿಂದ 20 ಜನ, ಒಬ್ಬರು ಕೂರುವ ಸ್ಥಳದಲ್ಲಿ ಇಬ್ಬರಿಂದ ಮೂರು ಜನ ಕೂರುತ್ತಾರೆ. ರೇಲ್ವೆ ಬೋಗಿಯ ಕಿಟಕಿಯ ಕಂಬಿಗಳನ್ನು ಹಿಡಿದು ಪಡ್ಡೆ ಹುಡುಗರು ಪ್ರತಿದಿನ ಓಡಾಡುವುದು ರೇಲ್ವೆ ಪೊಲೀಸರಿಗೆ ಕಾಣಿಸುತ್ತಿಲ್ಲ. ಸ್ವರ್ಣ ಪ್ಯಾಸೆಂಜರ್, ಜೋಲಾರ್ ಪೇಟೆ ಇನ್ನಿತರ ರೈಲುಗಳಲ್ಲಿ ಜನ ತುಂಬಿ ಕೊನೆಗೆ ಶೌಚಾಲಯದಲ್ಲೂ ಕೂಡ 10ರಿಂದ 15 ಮಂದಿ ನಿಂತು ಪ್ರಯಾಣ ಮಾಡುತ್ತಾರೆ. ಇದೆಲ್ಲ ಸಮಸ್ಯೆಗೆ ಬೋಗಿಗಳನ್ನು ಹೆಚ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಜನತೆ ಆಗ್ರಹಿಸಿದ್ದಾರೆ.

ಕರವೇ ಪದಾಧಿಕಾರಿಗಳ ನೇಮಕ
ಚಿಂತಾಮಣಿ:
ಕರ್ನಾಟಕ ರಕ್ಷಣಾ ವೇದಿಕೆಯ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಎಂ.ಆರ್. ಲೋಕೇಶ್ ಅವರ ಆದೇಶದ ಮೇರೆಗೆ ಚಿಂತಾಮಣಿ ತಾಲೂಕು ಮತ್ತು ನಗರ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಕೋನಪ್ಪಲ್ಲಿ ಗ್ರಾಮ ಶಾಖಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಗೌರವಾಧ್ಯಕ್ಷರಾಗಿ ಕೆ.ಆರ್. ಕೃಷ್ಣಮೂರ್ತಿ, ಅಧ್ಯಕ್ಷ-ಕೆ.ಸಿ. ಮುರಳಿಮೋಹನ್, ಉಪಾಧ್ಯಕ್ಷ- ಆರ್.ವಿ. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಕೆಸ್.ಎಸ್. ಸತ್ಯನಾರಾಯಣ, ಕಾರ್ಯದರ್ಶಿ ನಾರಾಯಣಮೂರ್ತಿ, ಸಂಘಟನಾ ಕಾರ್ಯದರ್ಶಿ ಕೆ.ವಿ. ಅಶೋಕಕುಮಾರ್, ಖಜಾಂಚಿ ನಾಗಭೂಷಣ್, ಸಂಚಾಲಕ ಕೆ.ಎ.ಮಂಜುನಾಥರೆಡ್ಡಿ, ಸಹ ಸಂಚಾಲಕ ಅನಿಲಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಾ. ಅಧ್ಯಕ್ಷ ಎನ್.ಅಂಬರೀಷ್ ತಿಳಿಸಿದ್ದಾರೆ.

ತಲೆಗೆ ಪೆಟ್ಟು ಬಿದ್ದಿದ್ದ ವ್ಯಕ್ತಿ ಸಾವು
ಶಿಡ್ಲಘಟ್ಟ:
ಕುಡಿತದ ಮತ್ತಿನಲ್ಲಿ ಶಿಡ್ಲಘಟ್ಟ-ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಕಟ್ಟುತ್ತಿರುವ ಖಾಸಗಿ ಶಾಲೆಯಲ್ಲಿ ಅಪರಿಚಿತ ವ್ಯಕ್ತಿಯ ತಲೆಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆ ವ್ಯಕ್ತಿ ಮರಣ ಹೊಂದಿರುವ ಘಟನೆ ನಡೆದಿದೆ. ಶಿಡ್ಲಘಟ್ಟ-ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಕಟ್ಟುತ್ತಿರುವ ಖಾಸಗಿ ಶಾಲೆಯಲ್ಲಿ ಬೆಳ್ಳಿಗೆ ಕಿರುಚಾಟ ಕೇಳಿಬಂದಿದ್ದು ಒಳಗೆ ಹೋಗಿ ನೋಡಿದಾಗ ವ್ಯಕ್ತಿಯೊಬ್ಬ ತಲೆಗೆ ಪೆಟ್ಟು ಬಿದ್ದು ನರಳಾಡುತ್ತಿದ್ದು ತಕ್ಷಣ ವ್ಯಕ್ತಿಯನ್ನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಟ್ಟು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸೆಗೆ ಕರೆದುಕೊಂಡು ಹೋಗಿದ್ದು ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.