ಇಂದು ಪ್ರವಚನಕ್ಕೆ ಚಾಲನೆ
ಕೋಲಾರ: ನಗರದ ಚಿನ್ಮಯ ಮಿಷನ್ ವತಿಯಿಂದ ಜು.7 ರಿಂದ 13ರವರೆಗೆ ಗೀತಾ ಜ್ಞಾನಯಜ್ಞದ ಅಂಗವಾಗಿ ಹಮ್ಮಿಕೊಂಡಿರುವ ಶ್ರೀ ಮದ್ಭಗವದ್ಗೀತೆಯ 7ನೇ ಅಧ್ಯಾಯದ ಪ್ರವಚನಕ್ಕೆ ಕರ್ನಾಟಕ ಚಿನ್ಮಯ ಮಿಷನ್ ಮುಖ್ಯಸ್ಥರಾದ ಸ್ವಾಮಿ ಬ್ರಹ್ಮಾನಂದ ಚಾಲನೆ ನೀಡಲಿದ್ದಾರೆ. ಜು.7ರ ಭಾನುವಾರದಿಂದ ಜು.13 ಶನಿವಾರದವರೆಗೆ ನಗರದ ಚನ್ನಯ್ಯ ರಂಗಮಂದಿರದಲ್ಲಿ ಪ್ರತಿದಿನ ಸಂಜೆ 6.30ರಿಂದ 8 ಗಂಟೆವರೆಗೆ ಪ್ರವಚನ ನಡೆಯಲಿದೆ. ಕಾರ್ಯಕ್ರಮದ ನಂತರ ರಂಗಮಂದಿರದಿಂದ ಕೋಲಾರ ನಗರದ ವಿವಿಧ ಬಡಾವಣೆಗಳಿಗೆ ತೆರಳಲು ಕ.ರಾ.ರ.ಸಾ. ನಿಗಮದ ನಗರ ಸಾರಿಗೆ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.
ಇಂದು ವಿದ್ಯುತ್ ವ್ಯತ್ಯಯ
ಕೋಲಾರ: ತಾಲೂಕಿನ ವಿವಿಧ ಕಡೆ ವಿದ್ಯುತ್ ಸರಬರಾಜು ಅಭಿವೃದ್ಧಿ ಸಲುವಾಗಿ ಹಾಲಿ ಇರುವ ವಿದ್ಯುತ್ ಮಾರ್ಗಗಳನ್ನು ಉನ್ನತಿಗೇರಿಸಲು ಕಾಮಗಾರಿ ನಡೆಸುವುದರಿಂದ ಜು.7ರಂದು ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ನಗರ ಉಪ ವಿಭಾಗದ ಎಇಇ ತಿಳಿಸಿದ್ದಾರೆ. ಕೋಲಾರ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುತ್ತಿರುವ ಹೊನ್ನೇನಹಳ್ಳಿ, ಭಟ್ರಹಳ್ಳಿ, ಅಬ್ಬಣಿ, ಟಮಕ ಕೈಗಾರಿಕಾ ಪ್ರದೇಶ, ಗದ್ದೆಕಣ್ಣೂರು, ಕೋಡಿರಾಮಸಂದ್ರ, ಕೋಡಿಕಣ್ಣೂರು, ಬಾರಂಡಹಳ್ಳಿ, ಮೂರಂಡಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ನೇತ್ರ ಚಿಕಿತ್ಸಾ ಶಿಬಿರ
ಗೌರಿಬಿದನೂರು: ಪಟ್ಟಣದ ಎಂಎಸ್ಎಸ್ ಕಾನ್ವೆಂಟ್ನಲ್ಲಿ ಜು.7ರಂದು 42ನೇ ಬೃಹತ್ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ. ಬೆಳಗ್ಗೆ 8 ರಿಂದ 1 ಗಂಟೆವರೆಗೆ ಎಂ.ಎಸ್.ಎಸ್. ಕಾನ್ವೆಂಟ್, ಕನ್ನಡ ಸೇನೆ, ಅನ್ನಪೂರ್ಣೇಶ್ವರಿ ಚಾರಿಟೇಬಲ್ ಟ್ರಸ್ಟ್ ಹಾಗೂ ಬೆಂಗಳೂರಿನ ಶಂಕರ್ ಕಣ್ಣಿನ ಅಸ್ಪತ್ರೆ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಶಿಬಿರ ವ್ಯವಸ್ಥಾಪಕ ಪಠಾಣ್ ಸೈಫುಲ್ಲಾ ತಿಳಿಸಿದ್ದಾರೆ. ಅರ್ಹರು ಶಿಬಿರದ ಪ್ರಯೋಜನ ಪಡೆಯಬೇಕೆಂದು ಎಂ.ಎಸ್.ಎಸ್. ಕಾನ್ವೆಂಟಿನ ಕಾರ್ಯದರ್ಶಿ ಪಠಾಣ್ ಸೈಫುಲ್ಲಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

