ಕೋಲಾರ

ಅಂಕಿತಗೆ 5000 ನೆರವು

Published On :

ಕ.ಪ್ರ.ವಾರ್ತೆ, ಮಾಲೂರು, ಜು.7
ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ದೊಡ್ಡ ಕಡತೂರಿನ ಕಾಲೇಜು ವಿದ್ಯಾರ್ಥಿನಿ ಅಂಕಿತ ಮನೆಗೆ ಭಾನುವಾರ ಭೇಟಿ ನೀಡಿದ ಸ್ಥಳೀಯ ಕರ್ನಾಟಕ ದಲಿತ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ಜಿ.ಶ್ರೀನಿವಾಸಲು 5000 ಸಹಾಯ ಧನ ವಿತರಿಸಿದರು.
ಇಲ್ಲಿನ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಅಂಕಿತ ಅವರಿಗೆ ಕಳೆದ ವರ್ಷ ಮೂಳೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಬಲಗಾಲು ನಡೆಯಲು ಆಗದ ಸ್ಥಿತಿ ಉಂಟಾಗಿತ್ತು. ಈಗ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಇದಕ್ಕಾಗಿ ಅಂಕಿತಳ ತಂದೆ ನಾರಾಯಣಸ್ವಾಮಿ ತನ್ನ 4 ಗುಂಟೆ ಜಮೀನನಲ್ಲಿ 2 ಗುಂಟೆ ಜಮೀನನ್ನು 2.5 ಲಕ್ಷಗಳಿಗೆ ಮಾರಾಟ ಮಾಡಿದ್ದರೆ. ಆದರೆ, ಚಿಕಿತ್ಸೆ ಖರ್ಚು 4 ಲಕ್ಷಕ್ಕೂ ಹೆಚ್ಚಾಗಿದೆ. ಅಂಕಿತಳ ಪೋಷಕರು ಸಹಾಯದ ನೀರಿಕ್ಷೆಯಲ್ಲಿದ್ದರು.
ವಿಷಯ ತಿಳಿದ ಸಮಿತಿ ರಾಜ್ಯಾಧ್ಯಕ್ಷ ಜಿ.ಶ್ರೀನಿವಾಸಯ್ಯ ಅವರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಡಿ.ಎಂ.ತಿಮ್ಮರಾಯಪ್ಪ ಅವರ 73ನೇ ಜನ್ಮ ದಿನಾಚರಣೆ ಅಂಗವಾಗಿ ಅಂಕಿತಳ ಮನೆಗೆ ಭೇಟಿ ನೀಡಿ ಸಹಾಯ ಧನ ವಿತರಿಸಿದರು.
ಅಂಕಿತ ಅವರ ತಂದೆ ನಾರಾಯಣಸ್ವಾಮಿ, ಸಂಘಟನೆಯ ಪ್ರಕಾಶ್, ಶ್ರೀನಿವಾಸ್, ಶ್ರೀನಾಥ್, ಬಸವಾರಾಧ್ಯ,ಅಶ್ವತ್ಥಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.