ಇಂದು ಜಾಥಾ
ಮಾಲೂರು: ಕೋಲಾರದ ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತರ ಕೇಂದ್ರ, ಬೆಂಗಳೂರಿನ ಕೆವಿಕೆ ಸಂಘಟನೆಯ ಸಹಕಾರದಲ್ಲಿ ಸ್ಥಳೀಯ ವಿಶ್ವಮಾನವ ವಿದ್ಯಾರ್ಥಿ ಯುವ ವೇದಿಕೆ ಹಾಗೂ ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಪಟ್ಟಣದ ವಿವೇಕಾನಂದ ಬೆಸ್ಟ್ ಕಾನ್ವೆಂಟ್ನಲ್ಲಿ ಜು.8ರಂದು ಮಾಲೂರು ವಿಧಾನಸಭಾ ಕ್ಷೇತ್ರದ ರಕ್ತದಾನಿಗಳಿಗೆ ವಂದನೆ ಹಾಗೂ ರಕ್ತದಾನ ಜಾಗೃತಿ ಜಾಥಾ, ಅರಿವು ಕಾರ್ಯಕ್ರಮ ಹಮ್ಮಿಕೊಂಡಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಸುಬ್ರಮಣ್ಯಂ ಉದ್ಘಾಟಿಸಲಿರುವ ಕಾರ್ಯಕ್ರಮದಲ್ಲಿ ಆರಕ್ಷಕ ವೃತ್ತ ನೀರಿಕ್ಷಕ ವೆಂಕಟೇಶ್,ದೇವಿ ಕಲರ್ ಲ್ಯಾಬ್ನ ನಟೇಶ್, ತಾಲೂಕು ಸಮಾಜ ಕಲ್ಯಾಣಧಿಕಾರಿ ರಾಮಸ್ವಾಮಿ, ಎಸ್.ಎಸ್.ಡಿ. ಅಧ್ಯಕ್ಷ ಗೋವಿಂದಸ್ವಾಮಿ, ಪುರಸಭೆ ಸದಸ್ಯ ಎಂ.ರಾಮಸ್ವಾಮಿ, ಲಕ್ಕೂರು ಪಂಚಾಯ್ತಿಯ ಮಾಜಿ ಅಧ್ಯಕ್ಷ ಎಂ.ನಾಗರಾಜ್ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಸುಧಾ ಶರ್ಮ ವಹಿಸಿಕೊಳ್ಳಲಿದ್ದಾರೆ ಎಂದು ಸಂಘಟನೆ ಜಿಲ್ಲಾಧ್ಯಕ್ಷ, ಕವಿ ಲಕ್ಕೂರು ನಾಗರಾಜ್ ತಿಳಿಸಿದ್ದಾರೆ.
ಸಿಕ್ಕಿಬಿದ್ದ ಬೈಕ್ ಕಳ್ಳ
ಕೆಜಿಎಫ್: ದ್ವಿಚಕ್ರ ವಾಹನ ಕಳವು ಮಾಡಿದ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ನವೀದ್ ಪಾಷಾ ಎಂಬವನು ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ. ನವೀದ್ ರಾತ್ರಿ 12.30ರ ವೇಳೆ ಉರಿಗಾಂ ರೇಲ್ವೆ ನಿಲ್ದಾಣದ ಹಿಂಭಾಗ ಬಜಾಜ್ ಡಿಸ್ಕವರಿ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಬರುತ್ತಿದ್ದ. ಆಗ ರಾತ್ರಿ ಗಸ್ತು ತಿರುಗುತ್ತಿದ್ದ ಉರಿಗಾಂ ಪೊಲೀಸರು ನವೀದ್ ಪಾಷಾನನ್ನು ತಡೆದು ವಿಚಾರಿಸಿದರು. ಆಗ ವಾಹನದ ಬಗ್ಗೆ ಸರಿಯಾದ ಉತ್ತರ ನೀಡದ ಕಾರಣ ಆತನನ್ನು ಬಂಧಿಸಿ ಸುಮಾರು 40000 ಬೆಲೆ ಬಾಳುವ ಬೈಕ್ ವಶಪಡಿಸಿಕೊಳ್ಳಲಾಗಿದೆ. ಉರಿಗಾಂ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ರೈತರ ಪರ ಯಾವುದೇ ಕಾನೂನು ಇಲ್ಲ: ಜಿವಿಎಸ್
ಗುಡಿಬಂಡೆ: ಇಡೀ ದೇಶದ ಜೀವನಾಡಿಯಂತಿರುವ ರೈತರ ಪರ ಯಾವುದೇ ಕಾನೂನು ಇಲ್ಲ, ಬದಲಿಗೆ ವ್ಯಾಪಾರಿಗಳಿಗೆ ಉದ್ಯಮಿಗಳಿಗೆ ಮಾತ್ರ ಕಾನೂನುಗಳಿವೆಯೆಂದು ಸಿಪಿಎಂ ಪಕ್ಷದ ಜಿ.ವಿ. ಶ್ರೀರಾಮರೆಡ್ಡಿ ತಿಳಿಸಿದರು. ಪಟ್ಟಣದ ಗಜನಾಣ್ಯ ಪಟ್ಟುಸಾಲೆಯಲ್ಲಿ ಏರ್ಪಡಿಸಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಾದ ಸಂಗತಿಯಾಗಿದೆ ಎಂದರು. ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಹೆಚ್.ಪಿ. ಲಕ್ಷ್ಮೀನಾರಾಯಣ ಸಂಘದ ಕರಡು ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಚೆನ್ನರಾಯಪ್ಪ, ತಾ.ಪಂ. ಉಪಾಧ್ಯಕ್ಷ ಆದಿನಾರಾಯಣರೆಡ್ಡಿ, ಸದಸ್ಯ ಮುನಿರೆಡ್ಡಿ, ರೈತ ಮುಖಂಡರಾದ ಬೈರಪ್ಪ, ಹನುಮಂತರೆಡ್ಡಿ, ಅಶ್ವತ್ಥರೆಡ್ಡಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಅಶ್ವತ್ಥರೆಡ್ಡಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಭೆ
ಚಿಕ್ಕಬಳ್ಳಾಪುರ: ಸರ್ಕಾರಿ ಸೌಲಭ್ಯವನ್ನು ಪಡೆಯುವ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿರುವುದರ ಬಗ್ಗೆ ಮಾಹಿತಿಯನ್ನು ತಮಗೆ ಕಳುಹಿಸಬೇಕು. ಈ ಮೂಲಕ ತ್ವರಿತವಾಗಿ ಫಲಾನುಭವಿಗಳಿಗೆ ಸೌಲಭ್ಯ ಸಿಗುವಂತೆ ಮಾಡಬೇಕೆಂದು ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಬಿ.ಎಸ್. ಶೇಖರಪ್ಪ ಅಧಿಕಾರಿಗಳಿಗೆ ಸೂಚಿಸಿದರು. ಅವರು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಈ ಸೂಚನೆಯನ್ನು ನೀಡಿದರು. ಈ ತಿಂಗಳ 15 ರೊಳಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಯ ಸಭೆಯನ್ನು ನಡೆಸಬೇಕು. ಇಲ್ಲಿ ಫಲಾನುಭವಿಗಳ ಪಟ್ಟಿ ತಯಾರಿಸಿ ಹಾಗೆಯೇ ಸಣ್ಣ, ಅತಿ ಸಣ್ಣ ರೈತರಿಗೆ ಸಿಗುವ ಸವಲತ್ತುಗಳು, ವಿವಿಧ ಯೋಜನೆಗಳಾದ ಗಂಗಾ ಕಲ್ಯಾಣ ದೇವರಾಜ್ ಅರಸ್ ಅಭಿವೃದ್ಧಿ ಸಂಸ್ಥೆಯ ಯೋಜನೆಗಳು ಪರಿಶಿಷ್ಟ ಜಾತಿ ವರ್ಗ ಗಳಿಗೆ ಸಿಗುವ ವಿವಿಧ ಸೌಲಭ್ಯದ ಪಟ್ಟಿಯನ್ನು ಶಾಸಕರ ಸಮ್ಮುಖದಲ್ಲಿ ತಾಲೂಕು ಪಂಚಾಯ್ತಿಯಲ್ಲಿ ಚರ್ಚಿಸಿ ಅಂತಿಮ ಪಟ್ಟಿ ಕಳುಹಿಸಬೇಕೆಂದು ಅವರು ತಿಳಿಸಿದರು. ಜಿ.ಪಂ ಉಪ ಕಾರ್ಯದರ್ಶಿ ಚಂದ್ರಪ್ಪ, ಯೋಜನಾ ಅಧಿಕಾರಿ ವಿಜಯೇಂದ್ರ ಇದ್ದರು.
ಸವಲತ್ತಿಗಾಗಿ ಕಂಬಳಿ ನೇಕಾರರ ಬೇಡಿಕೆ
ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಹಿಂದುಳಿದವರ್ಗದವರಿಗೆ ಆಶಾಕಿರಣವಾಗಿರುವ ಮತ್ತು 3000 ಸದಸ್ಯರನ್ನು ಹೊಂದಿರುವ ರೇವಣಸಿದ್ದೇಶ್ವರ ಕಂಬಳಿ ಸೊಸೈಟಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಸರ್ಕಾರದಿಂದ ಸಂಪನ್ಮೂಲ ನೀಡಿ ಪುನಶ್ಚೇತನಗೊಳಿಸಬೇಕೆಂದು ಪುರಸಭಾ ಸದಸ್ಯ, ಕಂಬಳಿ ಸೊಸೈಟಿ ನಿರ್ದೇಶಕರಲೊಬ್ಬರಾದ ಸಿ.ಡಿ.ಚಂದ್ರಶೇಖರ್ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ನೇಕಾರರ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ತಾಲೂಕಿನಲ್ಲಿ ಕಂಬಳಿ ನೇಕಾರರು ಬಹಳ ಸಂಕಷ್ಟದಲ್ಲಿದ್ದಾರೆ. ಕಂಬಳಿ ನೇಕಾರಿಕೆಯಿಂದ ಜೀವನ ನಡೆಸಲು ದುಸ್ತರವಾಗಿದೆ. ಜೊತೆಗೆ ಕಂಬಳಿ ನೇಕಾರಿಕೆಗೆ ಬೇಕಾಗವು ಕಚ್ಚಾ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಇದರಿಂದ ನೇಕಾರರು ತಮ್ಮ ವೃತ್ತಿಯನ್ನು ಕೈಬಿಡುವ ಮನಸ್ಥಿಯಲ್ಲಿದ್ದಾರೆ. ಈ ಭಾಗದಲ್ಲಿ ಯಾವುದೇ ಕೈಗಾರಿಕೆ ಮತ್ತು ನೀರಾವರಿ ಸೌಲಭ್ಯವಿಲ್ಲದ ಕಾರಣ ಬಡಜನತೆ ಜೀವನ ನಿರ್ವಹಣೆಗಾಗಿ ಬೆಂಗಳೂರಿನತ್ತ ವಲಸೆ ಹೋಗುತ್ತಿದ್ದಾರೆ. ಆದ್ದರಿಂದ ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ನೇಕಾರರಿಗೆ ಉದ್ಯೋಗ ಕಲ್ಪಿಸಲು ಸಂಘದಲ್ಲಿ ಉತ್ತಮ ತಂತ್ರಜ್ಞಾನದಿಂದ ಕೂಡಿರುವ ಯಂತ್ರೋಪಕರಣಗಳಾಗಲಿ, ಸುಸಜ್ಜಿತವಾದ ಕಟ್ಟಡವಾಗಲಿ ಇರುವುದಿಲ್ಲ. ಸಂಘದ ವಶದಲ್ಲಿ 7.18 ಎಕರೆ ಜಮೀನಿದ್ದು, ನೇಕಾರಿಕೆಗೆ ಅನುಕೂಲವಾಗುವ ಕಾರ್ಯಾಗಾರ ನಿರ್ಮಿಸಲು ಹಾಗು ಅತ್ಯಾಧುನಿಕ ಮಗ್ಗ ಅಳವಡಿಸಲು ಕಂಬಳಿಗಳನ್ನು ನೈಸ್ ಮಾಡಲು ಸರ್ಕಾರದಿಂದ ನಮ್ಮ ಸಂಘಕ್ಕೆ ಬಜೆಟ್ನಲ್ಲಿ ಸುಮಾರು 3 ಕೋಟಿಗಳಷ್ಟು ಹಣವನ್ನು ಮಂಜೂರು ಮಾಡಿಸಿ ಬಿಡುಗಡೆ ಮಾಡಿಕೊಟ್ಟರೆ ಬಡ ನೇಕಾರರ ಬದುಕು ಹಸನಾಗುತ್ತದೆ ಹಾಗೂ ಸಂಘದ ಬಲವರ್ಧನೆಗೂ ಸಹಕಾರಿಯಾಗುತ್ತದೆ ಎಂದು ಮನವಿಯಲ್ಲಿ ಅವರು ನಿವೇದಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

