ಕೋಲಾರ

ಅಪೌಷ್ಟಿಕತೆ ಜಾಗೃತಿ ಜಾಥಾ

Published On :

ಗೌರಿಬಿದನೂರು: ಅಸೆಡ ಸ್ವಯಂ ಸೇವಾ ಸಂಸ್ಥೆ ಗೌರಿಬಿದನೂರು ಹಾಗೂ ದಿ ಹಂಗರ್ ಪ್ರಾಜೆಕ್ಟ್ ಸಂಯುಕ್ತ ಆಶ್ರಯದಲ್ಲಿ ಇದೇ ತಾಲೂಕಿನ ಕುರೂಡಿ ಗ್ರಾಮದಲ್ಲಿ ಅಪೌಷ್ಟಿಕತೆ ತಡೆಗಟ್ಟಲು ಅರಿವು ಮೂಡಿಸುವ ಜಾಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲಾ ಮಕ್ಕಳು, ಸ್ವ ಸಹಾಯಸಂಘದ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ನೇತೃತ್ವವನ್ನು ಕುರೂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಣಮ್ಮ, ಸದಸ್ಯರಾದ ಶಾಂತಮ್ಮ ವಹಿಸಿದ್ದರು. ಮುಖ್ಯೋಪಾಧ್ಯಾಯ ನವೀನ್‌ಕುಮಾರ್ ಹಾಗೂ ಶಿಕ್ಷಕ, ಶಿಕ್ಷಕಿಯರು ಸಹಕಾರ ನೀಡುವುದರ ಮೂಲಕ ಸಾರ್ವಜನಿಕರಲ್ಲಿ ಅಪೌಷ್ಟಿಕತೆ ತಡೆಗಟ್ಟಲು ಅರಿವು ಮೂಡಿಸುವಲ್ಲಿ  ಭಾಗಿಯಾಗಿದ್ದರು. ಸಂಸ್ಥೆಯ ಸಂಯೋಜಕರಾದ ಸೌಭಾಗ್ಯ ಅಪೌಷ್ಟಿಕತೆ ತಡೆಗಟ್ಟಲು ಸ್ಥಳೀಯವಾಗಿ ಸಿಗುವ ಪಪ್ಪಾಯಿ ಸೊಪ್ಪು, ಕರಿಬೇವು, ನುಗ್ಗೆ ಸೊಪ್ಪು, ಕಾಳುಗಳನ್ನು ಮೊಳಕೆ ಮಾಡಿ ಸೇವಿಸುವುದರ ಮೂಲಕ ತಡೆಯಬಹುದೆಂದು ತಿಳಿಸಿದರು.
ಶೌಚಾಲಯಗಳನ್ನು ಪ್ರತಿ ಮನೆಯಲ್ಲಿ ನಿರ್ಮಿಸಿಕೊಳ್ಳುವಂತೆ, ಗ್ರಾಮ ಪಂಚಾಯಿತಿ ವತಿಯಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.