ಕೋಲಾರ

ವಿಕಲಚೇತನರ ತೀವ್ರ ಆಕ್ರೋಶ

Published On :

ಚಿಕ್ಕಬಳ್ಳಾಪುರ:  ಬಾಗೇಪಲ್ಲಿಯಲ್ಲಿ ಅಂಧ ಮಹಿಳೆ ಶಿವಮ್ಮ ಅವರನ್ನು ವಂಚಿಸಿ, ಗರ್ಭಿಣಿಯನ್ನಾಗಿಸಿ ಬಾವಿಗೆ ತಳ್ಳಿದ ದುಷ್ಕೃತ್ಯ ಖಂಡಿಸಿ ಕರ್ನಾಟಕ ವಿಕಲಚೇತನರ ಸಂಘಟನೆ ಗುರುವಾರ ಪ್ರತಿಭಟನೆ ನಡೆಸಿತು.
ನಗರದ ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿದ ಸಂಘಟನೆ ಸದಸ್ಯರು, ಆರೋಪಿಯನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಮಾನವೀಯ ದೃಷ್ಟಿಯಿಂದ ನಿಜವಾಗಲೂ ಶಿವಮ್ಮಳ ನೆರವಿಗೆ ಬರಬೇಕಾಗಿದೆ. ಅಂಗವಿಕಲರ ದೌರ್ಬಲ್ಯವನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವಂಥ ಪ್ರಕರಣಗಳು ಹೆಚ್ಚಾಗುತ್ತಿದವೆ. ಕೆಲವು ಬೆಳಕಿಗೆ ಬರುತ್ತಿವೆ. ಮತ್ತೆ ಕೆಲವು ಪ್ರಭಾವಕ್ಕೊಳಗಾಗಿ, ಬೆಳಕಿಗೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಗವಿಕಲರ ಹಿತರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಇಂತಹ ಘಟನೆಗಳು ನಡೆಯಲು ಅವಕಾಶ ನೀಡಬಾರದು. ಆದೆಪ್ಪನಿಂದ ಮೋಸ ಹೋದ ಶಿವಳಮ್ಮಳಿಗೆ ಅಗತ್ಯ ಚಿಕಿತ್ಸೆಯನ್ನು ಕೊಡಿಸಿ, ಪ್ರಾಮಾಣಿಕವಾಗಿ ಆಕೆಗೆ ನೆರವು ನೀಡಲು ಮುಂದಾಗಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ವಿಕಲಚೇತನರ ಸಂಘಟನೆ ಅಧ್ಯಕ್ಷ ಉಷಾ ಕಿರಣ್, ಕಾರ್ಯದರ್ಶಿ ಸುಬ್ರಮಣಿ, ಮಂಜುನಾಥ್, ಶ್ರೀರಾಮಪ್ಪ, ತಿರುಮಲಪ್ಪ, ಸುಶೀಲ, ಶಿವಣ್ಣ, ಕುಶಕುಮಾರ್, ಮಮತಾ, ನರಸಮ್ಮ, ಸುರೇಶ್, ರಂಗನಾಥ್ ಮುಂತಾದವರು ಭಾಗವಹಿಸಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.