ಕೋಲಾರ

ಸಾಯಿಬಾಬಾ ಪಲ್ಲಕ್ಕಿ ಉತ್ಸವ

Published On :

ಶಿಡ್ಲಘಟ್ಟ: ತಾಲೂಕಿನ ಎಚ್.ಕ್ರಾಸ್ನ ಚಿಂತಾಮಣಿ ರಸ್ತೆಯಲ್ಲಿರುವ ಸಪ್ಪಲಮ್ಮದೇವಿ ದೇವಸ್ಥಾನದಲ್ಲಿ ಸಾಯಿಬಾಬಾ ಪಲ್ಲಕ್ಕಿ ಉತ್ಸವ ಹಾಗೂ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಾಲೂಕಿನ ಮಳ್ಳೂರು ಬಳಿಯ ಸಾಯಿನಾಥಾ ಜ್ಞಾನಮಂದಿರದಿಂದ ಆಗಮಿಸಿದ್ದ ಸಾಯಿಬಾಬಾ ಉತ್ಸವ ಮೂರ್ತಿಯನ್ನು ಎಚ್.ಕ್ರಾಸ್ ಗ್ರಾಮಸ್ಥರು ಸ್ವಾಗತಿಸಿ ಮೆರವಣಿಗೆ ನಡೆಸಿದರು.
ಸಪ್ಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಏರ್ಪಡಿಸಿ, ಸಾಯಿಬಾಬಾ ಭಜನೆ, ಕೋಲಾಟ ಹಾಗೂ ಪ್ರಸಾದ ವಿನಿಯೋಗಿಸಲಾಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ಹಲವಾರು ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಳ್ಳೂರು ಬಳಿಯ ಸಾಯಿನಾಥಾ ಜ್ಞಾನ ಮಂದಿರದಲ್ಲಿ ಜು.22ರಂದು ಗುರುಪೂರ್ಣಿಮ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅದಕ್ಕೆ ಮುಂಚಿತವಾಗಿ ಭಕ್ತರು ಬಯಸುವ ಒಂಬತ್ತು ಗ್ರಾಮಗಳಿಗೆ ಪ್ರತಿ ದಿನ ಸಾಯಿಬಾಬಾ ಉತ್ಸವ ಮೂರ್ತಿಯೊಂದಿಗೆ ಹೋಗಿ ಮೆರವಣಿಗೆ, ಸಾಯಿಬಾಬಾ ಭಜನೆ ಮತ್ತು ಕೋಲಾಟ ನಡೆಸಲಾಗುವುದು. ಭಕ್ತರು ತಮ್ಮ ಇಷ್ಟದ ಹಳ್ಳಿಗಳಿಗೆ ಮೆರವಣಿಗೆ ನಡೆಸುವ ಸಂಪ್ರದಾಯವನ್ನು ಎಂಟು ವರ್ಷಗಳಿಂದ ನಡೆಸುತ್ತಾ ಬಂದಿದ್ದಾರೆ ಎಂದು ಸಂಘಟಕರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.