ಕೋಲಾರ

ಊರೊಳಗೇ ಹಂದಿ ಸಾಕಣೆ!

Published On :


ಬಾಗೇಪಲ್ಲಿ: ಹಂದಿಗಳನ್ನು ಗ್ರಾಮದ ಹೊರ ವಲಯದಲ್ಲಿ ಸಾಕಬೇಕೆಂಬುದು ಸರ್ಕಾರದ ಆದೇಶ. ಆದರೆ, ಗ್ರಾಮದ ವಾಸದ ಮನೆಗಳ ಮುಂದೆಯೇ ಹಂದಿಗೂಡುಗಳನ್ನು ನಿರ್ಮಿಸಿ, ರಾಜಾರೋಷವಾಗಿ ಹಂದಿಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ.ಆದರೂ ಕ್ರಮ ಕೈಗೊಳ್ಳಬೇಕಾಗಿರುವ  ಗ್ರಾಪಂ ಅಧಿಕಾರಿಗಳು ನಮಗೂ ಇದಕ್ಕೂ ಯಾವುದೇ ರೀತಿಯ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಘಂಟಂವಾರಪಲ್ಲಿ ಗ್ರಾಮಸ್ಶರು ಆರೋಪಿಸಿದ್ದಾರೆ.
ಹಂದಿಗಳನ್ನು ಗ್ರಾಮದ ಮನೆಗಳ ಮಧ್ಯೆ ಸಾಕಾಣಿಕೆ ಮಾಡುತ್ತಿರುವುದರಿಂದ ಹಂದಿಗಳ ಗೂಡಿನಿಂದ ಬರುವ ದುರ್ವಾಸನೆಗೆ ಸದಾ ಮೂಗುಮುಚ್ಚಿಕೊಂಡು ಓಡಾಡಬೇಕಾಗಿರುವ ಪರಿಸ್ಥಿತಿ ಇದೆ.ಗ್ರಾಮದ ಹಣದಯ ಭಾಗದಲ್ಲಿಯೇ ಹಂದಿಗಳನ್ನು ಸಾಕುತ್ತಿರುವುದರಿಂದ ಹಂದಿಗಳು ಗ್ರಾಮದ ರಸ್ತೆಗಳಲ್ಲಿ ಓಡಾಡಿಕೊಂಡು ಇರುವುದರಿಂದ ಗ್ರಾಮಸ್ಥರಿಗೆ ಓಡಾಡಲು ಹಾಗೂ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಕಿರಿಕಿರಿಯಾಗಿದೆ.ಇನ್ನೂ ಹಂದಿಗಳನ್ನು ಗೂಡಿನಿಂದ  ಹೊರಗಡೆಗೆ ಬಿಟ್ಟಾಗ  ಚರಂಡಿ ಹಾಗೂ ಕೊಳಚೆ ನೀರಿನಲ್ಲಿ ಹೊರಳಾಡಿ ಆ ಗಲೀಜನ್ನು ಮನೆಗಳ ಗೋಡೆಗಳಿಗೆ ಉಜ್ಜಿ ಗೋಡೆಗಳ ಬಣ್ಣವನ್ನು ಹಾಳು ಮಾಡುವುದರ ಜೊತೆಗೆ ಮನೆಗಳಿಗೆ ಹಂದಿಗಳು ನುಗುತ್ತಿವೆ.ಇದರಿಂದ ಮನೆಗಳ ಸುತ್ತಮುತ್ತಲು ಇರಲು ಸಾಧ್ಯವಾಗುತ್ತಿಲ್ಲ,ಊಟ ಮಾಡಲು ಸಹ ಅಸಹ್ಯ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಚರಂಡಿ ಮತ್ತು ಕೊಳಚೆಯಲ್ಲಿನ ಈ ಹಂದಿಗಳು ಹೊರಳಾಡುವುದರಿಂದ ಇಲ್ಲಿ ಸ್ವಚ್ಛತೆ ಇರುವುದಿಲ್ಲವಾದರಿಂದ ಸೊಳ್ಳೆ ಹೆಚ್ಚಾಗಿ ಉತ್ಪತ್ತಿಯಾಗುತ್ತಿದೆ. ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ತಾಲೂಕಿನಲ್ಲಿ  ಮಲೇರಿಯಾ, ಡೆಂಘೀಯಂತಹ ಕಾಯಿಲೆಗಳು ಹರಡಿರುವುದರಿಂದ ಜನರು ಭಯ ಭೀತರಾಗುತ್ತಿದ್ದಾರೆ. ಈ ಸಂಬಂಧವಾಗಿ ಗ್ರಾ ಪಂ ಕಾರ್ಯದರ್ಶಿಯವರಿಗೆ ಅನೇಕ ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಿಲ್ಲದೆಂದು ಆರೋಪಿಸಿದ್ದಾರೆ.
ಘಂಟಂವಾರಪಲ್ಲಿ ಗ್ರಾಪಂ ಅಧಿಕಾರಿಗಳು ಸರ್ಕಾರದ ಕಾನೂನು ಮತ್ತು ಆದೇಶ ಗಾಳಿಗೆ ತೂರಿ ಹಂದಿ ಸಾಕಾಣಿಕೆದಾರರೊಂದಿಗೆ ಶಾಮೀಲಾಗಿರುವುದರಿಂದ ಸಾರ್ವಜನಿಕರ ದೂರುಗಳನ್ನು ಪರಿಗಣಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ
ಎಂದು ಆರೋಪಿಸಿದರು.
ಗ್ರಾಮದಲ್ಲಿ ವಾಸದ ಮನೆಗಳ ನಡುವೆ ಹಂದಿಗಳ ಓಡಾಟದಿಂದ  ಭಯಾನಕ ರೋಗಗಳು ಹರಡುವ ಸಾಧ್ಯತೆಯಿರುವ ಪರಿಣಾಮ  ಕೂಡಲೇ ಹಂದಿಗಳ ಸಾಕಾಣಿಕೆ ಗೂಡುಗಳನ್ನು ನಾಶಪಡಿಸಿ,ಗ್ರಾಮದ ಆಚೆ 2-3 ಕಿ.ಮೀ. ದೂರದಲ್ಲಿ ಇಡಬೇಕು. ಇಲ್ಲದಿದ್ದಲ್ಲಿ ಗ್ರಾಪಂ ಮುಂದೆ ಪ್ರತಿಭಟನೆ ಮಾಡಲಾಗುವುದೆಂದು ಗ್ರಾಮದ ಮುಖಂಡರಾದ ಮುನ್ನಾ,ಫರೀದಾ, ನಂಜಪ್ಪ, ಫಾತೀಮಾ ಶಿವಪ್ಪ ಎಚ್ಚರಿಕೆ ನೀಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.