ತರಕಾರಿ ಮಾರ್ಕೆಟ್ ಅಂಗಡಿ ತೆರವು
ಬೆಳಿಗ್ಗೆ 6 ಗಂಟೆಗೆ ಕಾರ್ಯಾಚರಣೆ ಶುರು 20ಕ್ಕೂ ಹೆಚ್ಚು ಮಳಿಗೆಗಳ ತೆರವು
ಗೌರಿಬಿದನೂರು: ಪಟ್ಟಣದ ಹೃದಯ ಭಾಗದಲ್ಲಿದ್ದ ತಾಲೂಕು ಪಂಚಾಯಿತಿ ಜಾಗದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ತಾತ್ಕಾಲಿಕ ತರಕಾರಿ ಮಾರ್ಕೆಟ್ನಲ್ಲಿನ 7ಅಂಗಡಿಗಳನ್ನು ಬಿಟ್ಟು ಉಳಿದ ಅಂಗಡಿಗಳನ್ನು ತೆರವುಗೊಳಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾದರು.
ಮುಂಜಾನೆ 6 ಗಂಟೆಗೆ ಕಾರ್ಯಾಚರಣೆ ಪ್ರಾರಂಭಗೊಂಡು ಸುಮಾರು 20ಕ್ಕೂ ಹೆಚ್ಚು ಮಳಿಗೆಗಳನ್ನು ತೆರವು ಗೊಳಿಸಿದರು.
7ಮಳಿಗೆಗಳ ಮಾಲಿಕರಿಗೆ ಹೊಸದಾಗಿ ನಿರ್ಮಾಣ ಮಾಡಿರುವ ಮಳಿಗೆಗಳಲ್ಲಿ ಅವಕಾಶ ದೊರೆಯದ ಕಾರಣ ತಹಶೀಲ್ದಾರರಿಗೆ ಮನವಿ ಮಾಡಿಕೊಂಡಾಗ ಮಾನವತಾ ದೃಷ್ಟಿಯಿಂದ ತಹಶೀಲ್ದಾರರು ಸದರಿ ಮಳಿಗೆಗಳನ್ನು ಹಾಗೆಯೇ ಉಳಿಸಿ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿದ್ದರು.
ಪುರಸಭೆಯ ವತಿಯಿಂದ ಕಾರ್ಯಾಲಯದ ಪಕ್ಕದಲ್ಲಿ ಸುಮಾರಿ 1ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡ ಕೆಳಗಿನ ಅಂತಸ್ತಿನ 64ಮಳಿಗೆಗಳು ಹಿಂದೆ ಈ ಪ್ರದೇಶದಲ್ಲಿದ್ದ ತರಕಾರಿ ವ್ಯಾಪಾರಸ್ಥರಿಗೆ ಮೀಸಲಿಡಲಾಗಿತ್ತು. ಈ ಕಾರ್ಯಾಚರಣೆಯಿಂದ ಪಟ್ಟಣದ ನಾಗರಿಕರಿಗೆ ತರಕಾರಿ ಒಂದೇ ಕಡೆ ಲಭ್ಯವಾಗಲು ಅನುವಾಗುವಂತಾಗಿದೆ.
ಕಾರ್ಯಾಚರಣೆಯಲ್ಲಿ ತಹಶಿಲ್ದಾರ್ ಡಾ. ಭಾಸ್ಕರ್, ಟಿಪಿಎಸ್ ವಿಸ್ತರಣಾಧಿಕಾರಿ ರೆಡ್ಡೆಪ್ಪ, ಪುರಸಭೆಯ ಮುಖ್ಯಾಧಿಕಾರಿ ಖಾಜಾಮೊಯಿನುದ್ದೀನ್, ಪುಠಾಣೆಯ ಪಿಎಸೈ ಸೂರ್ಯಪ್ರಕಾಶ್ ತಮ್ಮ ಸಿಬ್ಬಂದಿಯೊಂದಿಗೆ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

