ಕೋಲಾರ

ವೈನ್ ಶಾಪ್‌ನಲ್ಲಿ 2 ಲಕ್ಷ ದರೋಡೆ

Published On :

ಬಂಗಾರಪೇಟೆ: ವೈನ್ ಅಂಗಡಿಯ ಕಾವಲುಗಾರನ ಕಣ್ಣಿಗೆ ಕಾರದ ಪುಡಿ ಎರಚಿ 2 ಲಕ್ಷ ನಗದನ್ನು ಕಸಿದುಕೊಂಡು ಹೋಗಿರುವ ಘಟನೆ ಭಾನುವಾರ ಮುಂಜಾನೆ 3 ಗಂಟೆಯಲ್ಲಿ ನಡೆದಿದೆ. ತಾಲೂಕಿನ ತಮಿಳುನಾಡು ಗಡಿಭಾಗದಲ್ಲಿರುವ ಕನುಮನಹಳ್ಳಿ ಗ್ರಾಮದ ಬಳಿಯಿರುವ ಜೈ ಮಾರುತಿ ವೈನ್ ಅಂಗಡಿಯಲ್ಲಿ ದರೋಡೆ ಪ್ರಕರಣ ನಡೆದಿರುವುದು. ಮೂರು ಜನ ಅಪರಿಚಿತರು ಬೈಕ್‌ಗಳಲ್ಲಿ ಬಂದು ಅಂಗಡಿ ಬಾಗಿಲನ್ನು ಮುರಿದು ಒಳ ನುಗ್ಗಿ ಒಳಗೆ ಮಲಗಿದ್ದ ಕಾವಲುಗಾರ ಪಾತರಾಮಗುಳ್ಳು ಗ್ರಾಮದ ಗೋವಿಂದಸ್ವಾಮಿ ಕಣ್ಣಿಗೆ ಖಾರದ ಪುಡಿ ಎರಚಿ, ಸುಮಾರು 2 ಲಕ್ಷ ನಗದನ್ನು ಎತ್ತಿಕೊಂಡು ಕತ್ತಲಲ್ಲಿ ಪರಾರಿಯಾಗಿದ್ದಾರೆಂದು ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಂದರ್ ಬಾಹರ್
8 ಮಂದಿ ಬಂಧನ
ಶಿಡ್ಲಘಟ್ಟ: ಪಟ್ಟಣದ ದಿಬ್ಬೂರಹಳ್ಳಿ ರಸ್ತೆಯಲ್ಲಿನ ಚರ್ಚ್ ಹಿಂಭಾಗದಲ್ಲಿರುವ ಸಂತೋಷ್ ನಗರದಲ್ಲಿ ಖಾಲಿ ನಿವೇಶನಗಳಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪುರಠಾಣೆ ಪೋಲಿಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. 8 ಮಂದಿ ಆರೋಪಿಗಳನ್ನು ಬಂಧಿಸಿ 3,500 ರು. ನಗದು ಮತ್ತು ಒಂದು ಮೊಬೈಲ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಚಾಂದ್ ಪಾಷಾ, ಸಲ್ಮಾನ್ ಬೇಗ್, ಅಯಾಜ್, ಅಶ್ರದ್ ಪಾಷಾ, ಅಸ್ಲಮ್, ವೆಂಕಟೇಶ್, ಗೌತಮ್, ಮಂಜುನಾಥ್ 8 ಜನ ಆರೋಪಿಗಳಾಗಿದ್ದು ಪುರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯನ್ನು ನಡೆಸಲಾಗುತ್ತಿದೆ.
ಅಕ್ರಮ ಮದ್ಯ ವಶ
ಸಕಲೇಶಪುರ:  ತಾಲೂಕಿನ ಪ್ರತ್ಯೇಕ ಪ್ರಕರಣದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯ ವಶಪಡಿಸಿಕೊಂಡಿರುವ ಘಟನೆ ಶನಿವಾರ ನಡೆದಿದೆ. ತಾಲೂಕಿನ ಕಸಬಾ ಹೋಬಳಿ, ಸುಂಡಕೆರೆ ಗ್ರಾಮದ ಹರೀಶ ಅವರ ತಮ್ಮ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದಾಗ ಮಾರಾಟ ಮಾಡುತ್ತಿದ್ದ ಹರೀಶ ಓಡಿಹೋಗಿದ್ದಾರೆ. ಮದ್ಯ ಮಾರಾಟಕ್ಕಿಟ್ಟಿದ್ದ 1329 ಬೆಲೆಯ 180 ಎಂಎಲ್‌ನ ಓರಿಜಿನಲ್ ಚಾಯ್ಸ್ 30 ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ಕಸಬಾ ಹೋಬಳಿ, ಸುಂಡಕೆರೆ ಗ್ರಾಮದ ಶಿವಕುಮಾರ ಅವರು ತಮ್ಮ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಾಗ ಶಿವಕುಮಾರ್ ಓಡಿ ಹೋಗಿನೆ. ಮದ್ಯ ಮಾರಾಟಕ್ಕಿಟ್ಟಿದ್ದ 1550 ಬೆಲೆಯ 180 ಎಂಎಲ್‌ನ ಓರಿಜಿನಲ್ ಚಾಯ್ಸ್ 35 ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕೃಷಿಕ ಸಮಾಜದಿಂದ ಉತ್ತಮ ಕೆಲಸ: ಶಾಸಕ ಮಂಜುನಾಥ್

ಮಾಲೂರು: ರೈತರ ಶ್ರೇಯೋಭಿವೃದ್ಧಿಗೆ ಕೃಷಿಕ ಸಮಾಜ ಉತ್ತಮ ಕೆಲಸ ಮಾಡುತ್ತಿದೆ ಎಂದು ಶಾಸಕ  ಕೆ.ಎಸ್. ಮಂಜುನಾಥ್ ಗೌಡ ಹೇಳಿದರು.
ಅವರು ಸ್ಥಳೀಯ ಕೃಷಿಕ ಸಮಾಜ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತ ಕೃಷಿಕರಿಗಾಗಿ, ಕೃಷಿ ಅಬಿವೃದ್ಧಿಗಾಗಿ ಶ್ರಮಿಸುತ್ತಿರುವ ಕೃಷಿ ಸಮಾಜದ ಸದಸ್ಯರುಗಳು ರೈತರಿಗೆ ಕೈಗೊಳ್ಳುವ ಎಲ್ಲ ಸೌಲಭ್ಯಗಳಿಗೆ ಸಹಕಾರ ನೀಡಲಾಗುವುದು ಎಂದರು.
ಕೃಷಿ ಸಮಾಜದ ಅಧ್ಯಕ್ಷ ಆನೇಪುರ ಹನುಮಂತಪ್ಪ, ನಂಜೇಗೌಡ ಮಾತನಾಡಿದರು.
ಉಪಾಧ್ಯಕ್ಷ ಪಾಪಣ್ಣ, ಕಾರ್ಯದರ್ಶಿ ಗೋಪಾಲ್, ಪುರಸಭೆ ಸದಸ್ಯರಾದ ಅಲೂಮಂಜು, ಜಾಕೀರ್‌ಖಾನ್, ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಗೌಡ, ಜಿ.ಪಂ ಮಾಜಿ ಉಪಾಧ್ಯಕ್ಷ ಪಿ.ನಾರಾಯಣಸ್ವಾಮಿ,ಬಿ.ಕೆ.ಮುನಿಶಾಮಿ ಗೌಡ, ಲಕ್ಕೂರು ಸುರೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.