ಕೋಲಾರ

ನೀರಿಗಾಗಿ ಜಾನುವಾರುಗಳ ಪರದಾಟ

Published On :

ಕ.ಪ್ರ.ವಾರ್ತೆ ,  ಕೋಲಾರ ,  ಜೂ. 29
ಮಳೆಯಿಲ್ಲದಿರುವುದರಿಂದ ಕುಡಿಯುವ ನೀರಿನ ಅಭಾವ ಕೇವಲ ಜನರಿಗೆ ಮಾತ್ರವೇ ಅಲ್ಲ ಇದರ ಪರಿಣಾಮ ಪಶು-ಪಕ್ಷಿಗಳಿಗೂ ತಟ್ಟಿದೆ.
ಜನ ಬೇಕಾದರೆ ದುಡ್‌ಡು ಕೊಟ್ಟು ಕುಡಿಯುವ ನೀರನ್ನು ಖರೀದಿ ಮಾಡಬಹುದು. ಆದರೆ ಮೂಖ ಪ್ರಾಣಿಗಳ ಪಾಡೇನು. ಜಿಲ್ಲೆಯಲ್ಲಿದ್ದ ಕುಂಟೆಗಳು, ಗೋಕುಂಟೆಗಳು, ಕೃಷಿ ಹೊಂಡಗಳು ಮಾಯವಾಗಿವೆ, ನೀರು ಸಂಗ್ರಹದ ಆಸರೆಯಾಗಿದ್ದ ತೊಟ್ಟಿಗಳು ಕಸ ತುಂಬುವ ಡಸ್ಟ್‌ಬಿನ್‌ಗಳಾಗಿವೆ.
ಇದರ ಪರಿಣಾಮ ಕುಡಿಯುವ ನೀರು ಸಿಗದೆ ಜಾನುವಾರುಗಳು ಬಾಯಾರಿ ಬಳಲಿ ಅಲೆದಾಡುವಂತಾಗಿದೆ. ಕಾಂಕ್ರಿಟ್ ಕಾಡಾಗಿರುವ ನಗರ ಪ್ರದೇಶದಲ್ಲಿ ಜಾನುವಾರುಗಳ ಪರಿಸ್ಥಿತಿ ಕೇಳುವವರು ಇಲ್ಲದಂತಾಗಿದೆ.
ಕುಡಿಯುವ ನೀರಿನ ಸೌಕರ್ಯವಿಲ್ಲದೆ ಗುಟುಕು ನೀರಿಗಾಗಿ ಅಲೆದಾಡುತ್ತಾ ರಸ್ತೆ ಬದಿಯ ಗುಂಡಿಗಳಲ್ಲಿ, ಹಳ್ಳ ಕೊಳ್ಳಗಳಲ್ಲಿ ಸಂಗ್ರಹವಾಗುವ ಮಳೆಯ ನೀರು ಇಲ್ಲವೆ ಸೊರಿಕೆಯಾದ ಕೊಳವೆ ನೀರನ್ನು ಕುಡಿದು ದಣಿವಾರಿಸಿಕೊಳ್ಳಬೇಕಾಗಿದೆ.
ಜಿಲ್ಲೆಯಲ್ಲಿ ಅನೇಕ ಕಡೆ ಮುಚ್ಚಿ ಹೋಗಿದ್ದ ಕಲ್ಯಾಣಿಗಳ ಪೈಕಿ ಶೇ. 50 ರಷ್ಟನ್ನು ಜಿಲ್ಲಾಧಿಕಾರಿ ಡಾ. ಡಿ.ಎಸ್. ವಿಶ್ವನಾಥ್ ಅವರು ಪುನಃಶ್ಚೇತನಗೊಳಿಸಿದ್ದಾರೆ. ಅದರಂತೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳ ಕುಡಿಯುವ ನೀರಿಗಾಗಿ ತೊಟ್ಟಿಗಳನ್ನು ನಿರ್ಮಿಸಿದಲ್ಲಿ ಜಾನುವಾರುಗಳಿಗೆ ಅನುಕೂಲವಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.