ನಾಯಿಗಳ ದಾಳಿ: 10 ಕುರಿ ಸಾವು

Updated on: 

ಚಿಂತಾಮಣಿ: ನಾಯಿಗಳು ಕುರಿಗಳ ಹಿಂಡಿನ ಮೇಲೆ ದಾಳಿ ಮಾಡಿ 10 ಕುರಿಗಳನ್ನು ಕೊಂದು 5 ಕುರಿಗಳನ್ನು ಗಾಯಗೊಳಿಸಿರುವ ಘಟನೆ ಚಿಂತಾಮಣಿ ತಾಲೂಕಿನ ಕುರುಬೂರು ಗ್ರಾಮದಿಂದ ವರದಿಯಾಗಿದೆ.
ಶುಕ್ರವಾರ ಎಂದಿನಂತೆ ಕುರಿಗಳನ್ನು ಹಿಂಡಿಯಲ್ಲಿ ಭದ್ರಪಡಿಸಿ ಮಲಗಿದ್ದ ವೇಳೆ ನಾಯಿಗಳು ಕಿಂಡಿನೊಳಗೆ ಪ್ರವೇಶಿಸಿ 10 ಕುರಿಗಳನ್ನು ಕೊಂದು ತಿಂದಿದ್ದು, 5 ಕುರಿಗಳನ್ನು ಗಾಯಗೊಳಿಸಿವೆ.
ಶನಿವಾರ ಬೆಳಿಗ್ಗೆ ಮಾಲೀಕ ರಾಮಚಂದ್ರ ಕುರಿಗಳು ಸತ್ತಿರುವುದನ್ನು ಕಂಡು ಸುತ್ತಮತ್ತಲಿನವರನ್ನು ಕೂಗಿಕೊಂಡ ತಕ್ಷಣ ನಾಯಿಗಳು ಕಾಲ್ಕಿತ್ತವೆಂದು ವಿವರಿಸಿದ್ದಾರೆ. ರೈತನ ಕುಟುಂಬಕ್ಕೆ ಜೀವನಾಧಾರವಾಗಿದ್ದ ಕುರಿಗಳ ಸಾವಿನಿಂದ ಸುಮಾರು 50 ಸಾವಿರ ರೂ.ಗಳ ನಷ್ಟವುಂಟಾಗಿದ್ದು ರೈತನ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ. ಈ ನಿಟ್ಟಿನಲ್ಲಿ  ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ರೈತನಿಗೆ ಸೂಕ್ತ ಪರಿಹಾರ ದೊರಕಿಸುವುದರ ಜೊತೆಗೆ ಇಂತಹ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಬೀದಿ ನಾಯಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com