ಕನ್ನಡದ್ರೋಹ ಸಹಿಸಲ್ಲ: ಬೇಗ್
ಚಿಂತಾಮಣಿ: ಕರ್ನಾಟಕ ಗಡಿಭಾಗದಲ್ಲಿ ವಿನಾಕಾರಣ ಶಿವಸೇನೆ, ಎಂಇಎಸ್ ಮುಖಂಡರು ಗಡಿ ವಿವಾದ ಸೃಷ್ಟಿಸಿ ಕನ್ನಡದ್ರೋಹ ಮಾಡಲು ಯತ್ನಿಸಿದರೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರೋಷನ್ ಬೇಗ ಎಚ್ಚರಿಸಿದರು. ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “OÚ«ÚsÚ ಭಾಷೆ, ನೆಲ, ಜಲಗಳು ಸೇರಿದಂತೆ ಅನ್ಯ ಭಾಷಿಕುರ ಗಡಿ ಪ್ರದೇಶಗಳಲ್ಲಿ ವಿನಾಕಾರಣ ಕನ್ನಡಿಗರಿಗೆ ಕಿರಿ ಕಿರಿ ಉಂಟು ಮಾಡಿದರೆ ಕನ್ನಡಿಗರು ಸುಮ್ಮನೆ ಕೂರುವುದಿಲ್ಲ. ಕನ್ನಡಕ್ಕೆ ಧಕ್ಕೆ ಬಂದಾಗ ರಾಜಕೀಯ ಪಕ್ಷಗಳು ಭೇದ ಮರೆತು ನಾವೆಲ್ಲಾ ಕನ್ನಡಿಗರು ಎಂಬ ಒಗ್ಗಟ್ಟಿನಿಂದ ಹೋರಾಟ ಮಾಡಲು ಮುಂದಾಗಬೇಕೆಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಗಡಿಭಾಗಗಳ ತಾಲೂಕಿನ ಜನರು ಹೆಚ್ಚು ಹೆಚ್ಚು ಅಭಿಮಾನ ಬೆಳೆಸಿಕೊಂಡು ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು. ಕಾಂಗ್ರೆಸ್ಸಿನ ಜಿಲ್ಲಾ ಉಸ್ತುವಾರಿ ಮಂತ್ರಿ ಬಾಯಿ ತಪ್ಪಿನಿಂದ ಬಿಜೆಪಿಯವರು ಗಡಿಭಾಗದಲ್ಲಿ ರಾಜಕೀಯ ಸೃಷ್ಟಿ ಮಾಡುತ್ತಿರುವುದಾಗಿ ಹೇಳಿದರುವುದು ಸರಿಯಿಲ್ಲವೆಂದು ಸಭೆಯಲ್ಲಿಯೇ ತಿರುಗೇಟು ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

