ಕೋಲಾರ

ಮೌಲ್ಯಯುತ ನೀತಿ ಶಿಕ್ಷಣ ಅಗತ್ಯ

Published On :

ಚಿಂತಾಮಣಿ: ಸಮಾಜದೊಂದಿಗೆ ಸಹಬಾಳ್ವೆ ಮತ್ತು ಸೌಹಾರ್ದಯುತ ಜೀವನ ನಡೆಸಲು ವಿದ್ಯಾರ್ಥಿಗಳಿಗೆ ಮೌಲ್ಯಯುತ ನೀತಿ ಶಿಕ್ಷಣದ ಅಗತ್ಯತೆ ಇದೆ ಎಂದು ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ಅಭಿಪ್ರಾಯಪಟ್ಟರು.
ತಾಲೂಕಿನ ಕೈವಾರದ ಯೋಗಿ ನಾರೇಯಣ ಮಠದಲ್ಲಿ ಮುಳಬಾಗಿಲಿನ ಶಾರದಾ ಶಿಕ್ಷಣ ಮಹಾಸಂಸ್ಥೆ ಏರ್ಪಡಿಸಿದ್ದ ಶಿಬಿರದಲ್ಲಿ ಮೌಲ್ಯಧಾರಿತ ಶಿಕ್ಷಣ ವಿಷಯವಾಗಿ ಉಪನ್ಯಾಸ ನೀಡಿದರು.
ನೈತಿಕ ಶಿಕ್ಷಣದ ಕೊರತೆಯಿಂದ ಇಂದು ವಿದ್ಯಾರ್ಥಿಗಳು ನಾನಾ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ವಾಮಮಾರ್ಗಗಳನ್ನು ಹಿಡಿಯುತ್ತಿದ್ದಾರೆ. ಸಾಮಾಜಿಕ ಕಳಕಳಿ, ಪರಿಸರ ಪ್ರಜ್ಞೆ ಮುಂತಾದ ವಿಷಯಗಳಲ್ಲಿ ಅರಿವು ಮೂಡಿಸುವ ಕೆಲಸ ಶಿಕ್ಷಕರಿಂದ ಇನ್ನೂ ಹೆಚ್ಚಾಗಿ ಆಗಬೇಕಾಗಿದೆ ಎಂದರು.
ರಾಧಾಕೃಷ್ಣನ್ ನೆನಪು: ಉಪನ್ಯಾಸದಲ್ಲಿ ಡಾ.ರಾಧಾಕೃಷ್ಣನ್ ಅವರ ಜೀವನದ ಘಟನೆಯನ್ನು ನೆನಪಿಸಿಕೊಂಡರು. ಡಾ.ರಾಧಾಕೃಷ್ಣನ್  ಮೈಸೂರಿನಿಂದ ವರ್ಗಾವಣೆಗೊಂಡ ಸಂದರ್ಭದಲ್ಲಿ ಅವರನ್ನು ರೈಲ್ವೆನಿಲ್ದಾಣಕ್ಕೆ ಕರೆದುಕೊಂಡು ಹೋಗಲು ಸಿಂಗರಿಸಿದ್ದ ಸಾರೋಟ ಬಂದಿತ್ತು. ಮನೆಯ ಮುಂದೆ ವಿದ್ಯಾರ್ಥಿ ವೃಂದ ದುಃಖಿತರಾಗಿ ನಿಂತಿದ್ದರು. ಸಾರೋಟಿಗೆ ಕಟ್ಟಿರುವ ಕುದುರೆಗಳನ್ನು ಬಿಚ್ಚಿ, ರೈಲ್ವೆ ನಿಲ್ದಾಣದವರೆಗೆ ಸ್ವತಃ ವಿದ್ಯಾರ್ಥಿ ವೃಂದ ಕಣ್ಣೀರು ಸುರಿಸುತ್ತಾ ತಮ್ಮ ನೆಚ್ಚಿನ ಪ್ರಾಧ್ಯಾಪಕರನ್ನು ಅದರಲ್ಲಿ ಕುಳ್ಳರಿಸಿ ಸಾರೋಟನ್ನು ಎಳೆದುಕೊಂಡು ಹೋದರು. ಬಹುಶಃ ಅಂದು ಮೈಸೂರಿನಿಂದ ಹೊರಟ ಡಾ. ರಾಧಾಕೃಷ್ಣನ್ ಅವರಿಗೆ ದೊರೆತ ಬೀಳ್ಕೊಡುಗೆ, ಯಾವ ಚಕ್ರವರ್ತಿಗೂ ದೊರೆತಿರಲಾರದು. ಇದು ಶಿಕ್ಷಕನಿಗೆ ಮಾತ್ರ ಸಿಗುವಂತಹ ಗೌರವ ಎಂದರು.
ಪ್ರಾಂಶುಪಾಲ ಮಹದೇವಸ್ವಾಮಿ, ಶಿಬಿರಾಧಿಕಾರಿ ರೋಷನ್ ತಬಸುಮ್,ಅಧ್ಯಾಪಕರಾದ ಕಿರಣ್ ಕುಮಾರ್, ಬಿ.ಎಂ. ಶ್ರೀನಿವಾಸ್, ಎಸ್. ರಘು, ಪ್ರಸನ್ನ ಕುಮಾರ್ ಮತ್ತು ಶಿಬಿರಾರ್ಥಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.