ಕೋಲಾರ

ಆವಿಷ್ಕಾರ, ಅನ್ವೇಷಣೆ ಅನಾವರಣ

Published On :

ಚಿಕ್ಕಬಳ್ಳಾಪುರ: ನೂತನ ತಂತ್ರಜ್ಞಾನವನ್ನು ಬಳಸಿಕೊಂಡ ವಿದ್ಯಾರ್ಥಿಗಳು ತಮ್ಮ ನೈಪುಣ್ಯತೆಯಿಂದ ಆಧುನಿಕ ಉಪಕರಣಗಳ ಅವಿಷ್ಕಾರದ ಮೂಲಕ ಗಮನ ಸೆಳೆದರು.
ನಗರದ ಹೊರ ವಲಯದಲ್ಲಿ ಎಸ್ಜೆಸಿಟಿ ಕಾಲೇಜಿನಲ್ಲಿ ಆಯೋಜಿಸಿದ್ದ ವೈಜ್ಞಾನಿಕ ವಸ್ತು ಪ್ರದರ್ಶನದಲ್ಲಿ ನಾನಾ ರೀತಿಯ ಉಪಕರಣಗಳನ್ನು ವಿದ್ಯಾರ್ಥಿಗಳೇ ತಯಾರಿಸಿ ಅವುಗಳ ಕಾರ್ಯ ನಿರ್ವಹಣೆ, ಪ್ರಯೋಜನವನ್ನು ವಿವರಿಸಿದರು. ತಮ್ಮ ವೈಜ್ಞಾನಿಕ ಚಿಂತನೆಗಳನ್ನು ಮಂಡಿಸಿದರು.
ಪ್ರಾಯೋಗಿಕ ವಸ್ತು ಪ್ರದರ್ಶನದಲ್ಲಿ ಎಂಜಿನಿಯರಿಂಗ್ ಕಾಲೇಜಿನ 6 ವಿಭಾಗಗಳಿಂದ 30 ತಂಡಗಳು ಭಾಗವಹಿಸಿದ್ದವು. ಕಳೆದ ವರ್ಷದಂತೆ ನಡೆದ ಪ್ರದರ್ಶನದಲ್ಲಿ ಈ ಹಿಂದೆಗಿಂತಲೂ ಹೊಸ ಹೊಸ ಬದಲಾವಣೆಯ ಉಪಕರಣಗಳು ಕಂಡು ಬಂದವು.
ಬೆಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಸಮರ್ಪಕವಾಗಿ ಸಾಧ್ಯವಾಗದೇ ರಾಜ್ಯ ಸರ್ಕಾರ ತತ್ತರಿಸುತ್ತಿದೆ. ಎಲ್ಲೆಂದರಲ್ಲಿ ಸಂಗ್ರಹವಾಗಿರುವ ತ್ಯಾಜ್ಯದಿಂದ ಗಬ್ಬು ವಾಸನೆ ಹಬ್ಬುತ್ತಿರುವುದಲ್ಲದೇ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಕಾಡುತ್ತಿದೆ. ತ್ಯಾಜ್ಯವನ್ನು ತಂದು ಹಾಕಲು ಮುಂದಾದಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ತಡೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯ ನಡುವೆ ತ್ಯಾಜ್ಯವನ್ನು ಸದ್ಬಳಕೆ ಮಾಡಿಕೊಳ್ಳುವುದು, ನಗರ, ಪಟ್ಟಣ ಪ್ರದೇಶಗಳಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿ ಮೂಲಕ ಸ್ವಚ್ಛತೆ ಕಾಪಾಡುವ ಸಲುವಾಗಿ ತ್ಯಾಜ್ಯ ಚಾಲಕರಿಲ್ಲದ ಸಮಯ ಪ್ರಜ್ಞೆಯುಳ್ಳ ವಾಹನಗಳು ಮತ್ತು ಸ್ವಯಂ ನಿರ್ವಹಣೆಯ ಯಂತ್ರಗಳನ್ನು ಅವಿಷ್ಕರಿಸಿದ್ದನ್ನು ವಿದ್ಯಾರ್ಥಿಗಳು ಮುಂದಿಟ್ಟರು.
ಅಲ್ಲದೇ ಮೊಬೈಲ್ ರಿಜಾರ್ಜ್ ಮಾಡಲು ವಿದ್ಯುತ್  ಬೇಕು. ಮೊದಲೇ ವಿದ್ಯುತ್  ಸಮಸ್ಯೆ ಕಾಡುತ್ತಿದೆ. ಆದರೆ, ವಿದ್ಯುತ್  ಇಲ್ಲದಿದ್ದರೂ ಬೇರೆ ಶಕ್ತಿ ಮೂಲ(ಇಂಧನ)ವನ್ನು ಬಳಸಿಕೊಂಡು ಮೊಬೈಲ್ ರಿಜಾರ್ಜ್ ಮಾಡುವಂತಹ ಪ್ರಯೋಗವನ್ನು ತೋರಿಸಲಾಯಿತು. ಹಾಗೆಯೇ ಗುಡ್ಡಗಾಡು ಪ್ರದೇಶದಲ್ಲಿ ಕೊಳಚೆ ನೀರನ್ನು ಬಳಸಿ ವಿದ್ಯುತ್  ತಯಾರಿಕೆ, ನಗರಪ್ರದೇಶಗಳಲ್ಲಿ ಸೌರಶಕ್ತಿ ಬಳಕೆಯಿಂದ ಜಮೀನುಗಳಲ್ಲಿ ಹುಳುಮೆ ಮಾಡುವುದು ಹಾಗೂ ಕಳೆ ತೆಗೆಯುವುದು, ವಿಮಾನ ಹಾರಿದಾಗ ಹಿಂದೆ ರಭಸದಿಂದ ಅಯಾತಕಾರ ಕಿಂಡಿಯಲ್ಲಿ ಬರುವ ಬೆಂಕಿ ತಾಪದಿಂದ ವಿಮಾನ ಬರುವ ದೂರ ಮತ್ತು ಗಮ್ಯವನ್ನು ತಿಳಿಯುವುದು, ಕಂಪ್ಯೂಟರ್ನಲ್ಲಿರುವ  ಡೇಟಾ ವರ್ಗಾವಣೆಯನ್ನು ವಿದ್ಯುತ್  ರೂಪದಲ್ಲಿ ಶೇಖರಿಸಿ ಇನ್ನೊಂದು ಕಂಪ್ಯೂಟರ್ನಲ್ಲಿ ಡೇಟಾದಲ್ಲಿ ಯಾವುದೇ ತರಹದ ನಷ್ಟವಿಲ್ಲದೇ ಬಳಸುವುದು ಸೇರಿದಂತೆ ಬಗೆಬಗೆಯ ಪ್ರಾಯೋಗಿಕ ವಸ್ತು ಪ್ರದರ್ಶನ ಆಕರ್ಷಕವಾಗಿತ್ತು.
ಅದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ, ಪ್ರಾಂಶುಪಾಲ ಡಾ. ಮುನಿಕೆಂಚೇಗೌಡ, ಪ್ರೊ. ಶಿವರಾಂ ಮುಂತಾದವರು ವಸ್ತು ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.