ಕೋಲಾರ

ಹಸು ಸಾವು

Published On :

ಬಂಗಾರಪೇಟೆ: ಮೇಯಲು ಹೋಗಿ ಆಕಸ್ಮಿಕವಾಗಿ ಹಸುವೊಂದು ಬಾವಿಯಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಶುಕ್ರವಾರ ತಾಲೂಕಿನ ಸಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮೀನಾಕ್ಷಮ್ಮ ರಮೇಶ್ ಎಂಬವರ ಸುಮಾರು 80 ಸಾವಿರ ಬೆಲೆ ಬಾಳುವ ಸೀಮೆ ಹಸು ಗ್ರಾಮದ ಹೊರವಲಯದ ಸುತ್ತಮುತ್ತ ಮೇಯಲು ಹೋಗಿದ್ದಾಗ ಹಳೇ ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದೆ. ಶತಮಾನದಷ್ಟು ಹಳೆಯದಾದಿ ಈ ಬಾವಿಯ ಬತ್ತಿ ಹೋಗಿದೆ. ಹೀಗಾಗಿ ಇದನ್ನು ಮುಚ್ಚುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.


ನೋಂದಣಿ ಕಡ್ಡಾಯ
ಮುಳಬಾಗಲು: ವಿವಾಹ ನೋಂದಣೆ ಕಡ್ಡಾಯ ಎಂದು ಜಿಎಂಎಫ್ಸಿ ಪ್ರಧಾನ ಸಿವಿಲಲ್ನ್ಯಾಯಾಧೀಶ ಕೆ.ಎಂ.ಓಂಕಾರಮುರ್ತಿ ನುಡಿದರು. ಪಟ್ಟಣದ ವಿಠಲೇಶಪಾಳ್ಯದ ಸಮುದಾಯ ಭವನದಲ್ಲಿ ತಾಲ್ಲೂಕು ಆಡಳಿತ, ಕಾನೂನು ಸೇವಾ ಸಮಿತಿ, ವಕೀಲರ ಸಂಘ ಆಶ್ರಯದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಪಾಟಿಸಿ, ಕಾನೂನು ನೆರವು ಕಾರ್ಯಕ್ರಮದ ಪ್ರಯೋಜನ ಪಡೆಯಲು ಕರೆ ನೀಡಿದರು. ಅಪೌಷ್ಟಿಕತೆ ನಿರ್ಮೂಲನೆಗೆ ಸರ್ಕಾರದ ಜತೆ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ಕೈಜೋಡಿಸಬೇಕು ಎಂದು ಹಿರಿಯ ಶ್ರೇಣೆ ಸಿವಿಲ್ ನ್ಯಾಯಾಧೀಶ ಎಸ್.ಶ್ರೀಧರ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.