ಕೋಲಾರ

ರಸ್ತೆ ಅಗಲೀಕರಣ ಶೀಘ್ರ

Published On :

ಗೌರಿಬಿದನೂರು: ಪಟ್ಟಣದ ಬಿಎಚ್ ರಸ್ತೆ ಮತ್ತು ಎಂಜಿ ರಸ್ತೆಗಳ ಅಗಲೀಕರಣದ ಪ್ರಕ್ರಿಯೆ ಒಂದು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾ ಯೋಜನಾ ನಿರ್ದೇಶಕ ನಾಗರಾಜಶೆಟ್ಟಿ ತಿಳಿಸಿದರು. ಪಟ್ಟಣದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಯಂತರರ ಕಚೇರಿಗೆ ಭೇಟಿ ನೀಡಿ ಬಿಎಚ್ ರಸ್ತೆ ಮತ್ತು ಎಂಜಿ ರಸ್ತೆಗಳ ನಕಾಶೆಯನ್ನು ಪರಿಶೀಲಿಸಿದ ನಂತರ ಮಾತನಾಡಿ, ರಸ್ತೆಗಳನ್ನು ಮಧ್ಯಭಾಗದಿಂದ 50 ಅಡಿಗಳಷ್ಟು ಅಗಲ ನಿರ್ಮಿಸಲು ನಕಾಶೆಯಲ್ಲಿ ಅವಕಾಶವಿದೆ. ಅದರಂತೆ ಎರಡೂ ಕಡೆ ರಸ್ತೆಯನ್ನು ನಿರ್ಮಿಸಿ, ಮಧ್ಯೆ ರಸ್ತೆ ವಿಭಜಕ ಮತ್ತು ವಿದ್ಯುತ್ ದೀಪಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು. ಲೋಕೋಪಯೋಗಿ ಇಲಾಖೆಯ ಎಇಇ ಬಿ. ರಾಜಣ್ಣ, ಸಿಒ ಎಚ್.ಸಿ. ಹನುಮಂತೇಗೌಡ ಇದ್ದರು.
ಜಗ ಮೆಚ್ಚುವ ಕವಿತೆ ಬರಲಿ
ಕೋಲಾರ: ಕವಿತೆಗಳು ಮನಸ್ಸಿನ್ನಾಳದ ಅತೃಪ್ತ ಭಯಕೆಗಳನ್ನು ಹೊರಹಾಕುವ ವಿಮರ್ಶೆಗಳಾಗಬೇಕು. ಹಾಗಾಗಿ ಜಗ ಮೆಚ್ಚುವ ಕವಿತೆಗಳು ರಚನೆಯಾಗಬೇಕಿದೆ ಎಂದು ಬೆಂ.ವಿ.ವಿ ಪ್ರಾಧ್ಯಾಪಕ ಡಾ.ವಿ. ನಾಗರಾಜ್ ಅಭಿಪ್ರಾಯಪಟ್ಟರು. ನಗರದ ಕಾರಂಜಿಕಟ್ಟೆಯ ಕವಿ ಗಾಂಡ್ಲಹಳ್ಳಿ ರಮೇಶ್ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಮನೆಗೊಂದು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ.ಕೆ.ಎಂ.ಜೆ. ಮೌನಿ ಕಾರ್ಯಕ್ರಮ ಉದ್ಘಾಟಿಸಿದರು. ಡಿ. ಶಿವಕುಮಾರ್, ಕವಿ ಟಿ. ಸುಬ್ಬರಾಮಯ್ಯ ಮಾತನಾಡಿದರು. ಡಾ.ಕೆ.ಎಂ.ಜೆ ಮೌನಿ, ವಿ. ಲಕ್ಷ್ಮಯ್ಯ, ಸಿ. ರವೀಂದ್ರ ಸಿಂಗ್, ಬಿ.ಆರ್. ಲಕ್ಷ್ಮಣ್, ರಮೇಶ್ ಬಾಬುರನ್ನು ಸನ್ಮಾನಿಸಲಾಯಿತು. ಜಿ.ಟಿ. ರಾಮಚಂದ್ರಪ್ಪ, ವಿ. ಲಕ್ಷ್ಮಯ್ಯ, ಸೀಕಲ್ ನರಸಿಂಹಪ್ಪ, ಡ್ಯಾನಿಡಾ ಕೃಷ್ಣಮೂರ್ತಿ, ಪೋಸ್ಟ್ ನಾರಾಯಣಸ್ವಾಮಿ, ಹಣಬೇನ ಪಾಪೇಗೌಡ, ರವೀಂದ್ರ ಸಿಂಗ್, ರಮೇಶ್ ಬಾಬು, ದೇವರಾಜ್ ಅರಸ್, ಪಾಪಣ್ಣ, ಕೆ. ಮಂಜುಳ, ಲಕ್ಷ್ಮೀದೇವಮ್ಮ, ಟಿ. ಸುಬ್ಬರಾಮಯ್ಯ, ಡಿ. ಶಿವಕುಮಾರ್, ಶರಣಪ್ಪ ಗಬ್ಬೂರು ಕವಿತೆಗಳನ್ನು ವಾಚಿಸಿದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.