ಕೋಲಾರ

ವೀರಶೈವ ಮಹಾಸಭಾಕ್ಕೆ ನೇಮಕ

Published On :

ಗೌರಿಬಿದನೂರು: ಅಖಿಲ ಕರ್ನಾಟಕ ವೀರಶೈವ ಮಹಾಸಭಾದ ಕೇಂದ್ರ ಯುವ ವಿಭಾಗ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಗೌರೀಶ್ ಎನ್.ವೀರಣ್ಣ ಅವರನ್ನು ನೇಮಕ ಮಾಡಲಾಗಿದೆ ಎಂದು ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಆದೇಶಹೊರಡಿಸಿದ್ದಾರೆ. ಸದಸ್ಯತ್ವದ ಅವಧಿ ಆದೇಶ ದಿನಾಂಕದಿಂದ 1ವರ್ಷದ ಅವಧಿಯಾಗಿದೆ. ಈ ಅವಧಿಯಲ್ಲಿ ಸಮಾಜದ ಸಂಘಟನೆಗೆ ಕ್ರಿಯಾಶೀಲರಾಗಿ ಶ್ರಮಿಸಿ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಸಂಘಟನೆಗೆ ಕಾರಣರಾಗಬೇಕೆಂದು ಹಾಗೂ ಸಮಾಜದ ಗುರಿ ಮತ್ತು ಧ್ಯೇಯೋದ್ದೇಶಗಳನ್ನು ಜಾರಿಗೊಳಿಸಬೇಕೆಂದು ಕೋರಿದ್ದಾರೆ.


ಕೃಷ್ಣಯ್ಯ ಶೆಟ್ಟಿ ಸೇತುವೆ ಅಗಲೀಕರಣ ರಾಜಕೀಯ


ಮಾಲೂರು: ಪಟ್ಟಣದ ರೈಲ್ವೆ ಸೇತುವೆ ಅಗಲೀಕರಣಕ್ಕೆ ಅವೈಜ್ಞಾನಿಕವಾಗಿ ಮಣ್ಣು ಸುರಿದು ಸೇತುವೆ ಅಗಲೀಕರಣಕ್ಕೆ ಸಹಕಾರ ನೀಡುತ್ತಿರುವುದಾಗಿ ಹೇಳುವ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರದು ಗಿಮಿಕ್ ಹೊರತು ಇದರಲ್ಲಿ ಯಾವುದೇ ಸಾರ್ವಜನಿಕ ಹಿತಾಶಕ್ತಿ ಇಲ್ಲ ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಚಂದ್ರಶೇಖರಗೌಡ ಆರೋಪಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 9 ವರ್ಷಗಳ ತಾಲೂಕಿನ ಶಾಸಕರಾಗಿ, ಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದ ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ ಅವರು ಎರಡು ದಶಕಗಳ ಕಾಲದಿಂದ ಸೇತುವೆ ಅಗಲೀಕರಣದ ಒತ್ತಾಯ ಇದ್ದರೂ ಸುಮ್ಮನಿದ್ದರು. ಅಧಿಕಾರವಾಧಿಯ 9 ವರ್ಷ ಕಾಲ ಸಮ್ಮನಿದ್ದವರಿಗೆ ಈಗ ಜ್ಞಾನೋದಯವಾಗಿದೆ. ಇಲಾಖೆ ಒಪ್ಪಿಗೆ ಪಡೆಯದೆ, ತಾಂತ್ರಿಕತೆ ಇಲ್ಲದೆ ತಮ್ಮ ನೂತನ ಬಡಾವಣೆಯ ವೇಸ್ಟ್ ಮಣ್ಣನ್ನು ತಂದು ಹಾಕಿದರೆ ಸೇತುವೆ ನಿರ್ಮಿಸಲು ಸಾಧ್ಯವಿಲ್ಲ ಎಂಬುಂದು ಮಾಜಿ ಸಚಿವರಿಗೆ ಗೋತ್ತಿಲ್ಲವೇ ಎಂದರು.
ಟನ್‌ಗಟ್ಟಲೆ ತೂಕದ ವಾಹನಗಳು ಸಂಚರಿಸುವ ಈ ಸೇತುವೆ ತಾಂತ್ರಿಕತೆಯಿಂದ ನಿರ್ಮಿಸಬೇಕಾದ ಈ ಸೇತುವೆ ಅಗಲೀಕರಣಕ್ಕೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು ಪರವಾನಗಿ ನೀಡಿದವರು ಯಾರು? ಯಾವೂದೇ ಕಾರಣಕ್ಕೂ ಇಲಾಖೆಯು ಮಾಜಿ ಶಾಸಕರ ಈ ಗಿಮಿಕ್‌ಗೆ ಒಪ್ಪಿಗೆ ನೀಡಬಾರೆದೆಂದು ಅಗ್ರಹಿಸಿದರು.
ಕೋಚಿಮುಲ್ ನಿರ್ದೇಶಕ ಕೆ.ವೈ.ನಂಜೇಗೌಡ ಮಾತನಾಡಿ, ರೈಲ್ವೆ ಮಂತ್ರಿ ಸದಾನಂದಗೌಡ ಅವರನ್ನು ಈಗಾಗಲೇ ಭೇಟಿ ಮಾಡಿರುವ ಶಾಸಕ ಮಂಜುನಾಥ್ ಗೌಡರು ಇಲ್ಲಿನ ರೈಲ್ವೆ ಸೇತುವೆಯ ಅಗಲೀಕರಣಕ್ಕೆ ಸ್ವಂದಿಸುವ ಭರವಸೆಯನ್ನು ಪಡೆದಿದ್ದಾರೆ. ವಿಷಯ ಈ ರೀತಿಯಲ್ಲಿರುವಾಗ ಜನರ ಹಾದಿ ತಪ್ಪಿಸಲು ಮಾಜಿ ಶಾಸಕರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದರು. ಪುರಸಭೆ ಸದಸ್ಯ ಅಲೂ ಮಂಜುನಾಥ್, ಮುಖಂಡ ರಾಮಚಂದ್ರ ಮಾತನಾಡಿದರು. ಪುರಸಭೆ ಸದಸ್ಯರಾದ ಜಾಕೀರ್ ಖಾನ್, ಪಚ್ಚಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.