1.60 ಲಕ್ಷ ನಗದು, ಆಭರಣ ಕಳವು
ಬಂಗಾರಪೇಟೆ: ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಬೀರುವಿನಲ್ಲಿಟ್ಟಿದ್ದ ಸುಮಾರು 1.60 ಲಕ್ಷ ರು.ಗಳಷ್ಟು ಹಣ ಹಾಗೂ ಒಡವೆ ಕದ್ದು ಪರಾರಿಯಾಗಿರುವ ಘಟನೆ ಸಂಭವಿಸಿದೆ. ತಾಲೂಕಿನ ಬಾವರಹಳ್ಳಿ ಗ್ರಾಮದ ನಿವಾಸಿ ಅಮರೇಶ್ ಎಂಬುವವರ ಮನೆಯಲ್ಲಿ ಬೀಗ ಹಾಕಿ ಬಚ್ಚಲು ಮನೆಯಲ್ಲಿ ಇಟ್ಟಿದ್ದ ಬೀಗದ ಕೈಯಿಂದ ಬೀಗವನ್ನು ಯಾರೋ ನೋಡಿಕೊಂಡಿದ್ದು, ಮನೆಯವರು ಇಲ್ಲದೆ ಸಮಯವನ್ನು ನೋಡಿಕೊಂಡು ಮನೆಯೊಳಗೆ ಅಪರಿಚಿತರು ಪ್ರವೇಶ ಮಾಡಿ ಬೀರುವಿನ ಬೀಗವನ್ನು ಹೊಡೆದು ಬೀರುವಿನಲ್ಲಿಟ್ಟಿದ್ದ ಬಂಗಾರದ ಒಡವೆಗಳು ಒಟ್ಟು ಸುಮಾರು 60 ಗ್ರಾಂ ಹಾಗೂ ನಗದು ಹಣ 3,800. ರು. ಸೇರಿ ಸುಮಾರು ಒಟ್ಟು 1,53,800. ರು. ಬೆಳೆ ಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಬಂಗಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ನೇಣಿಗೆ ಶರಣಾದ ನೌಕರ
ಮಾಲೂರು: ಉದ್ಯೋಗ ಕಾಯಂಗೊಳಿಸದೆ ಬೇಸತ್ತ ರೇಷ್ಮೆ ಇಲಾಖೆ ದಿನಗೂಲಿ ನೌಕರ ರೇಷ್ಮೆ ಕಚೇರಿಯಲ್ಲೇ ನೇಣಿಗೆ ಶರಣಾಗಿರುವ ಘಟನೆ ಪಟ್ಟಣದ ಗೋಲ್ಡ್ ರಂಗಪ್ಪ ಬೀದಿಯ ಸರ್ಕಾರಿ ರೇಷ್ಮೆ ಇಲಾಖೆ ಕಚೇರಿಯಲ್ಲಿ ನಡೆದಿದೆ. ಬಸವರಾಜು(49) ಅತ್ಮಹತ್ಯೆ ಮಾಡಿಕೊಂಡ ಡಿ.ಗ್ರೋಪ್ ನೌಕರ. ಪತಿಯ ಅತ್ಮಹತ್ಯೆ ಬಗ್ಗೆ ದೂರು ನೀಡಿರುವ ಮೃತನ ಪತ್ನಿ ಪದ್ಮ ತನ್ನ ಪತಿ ಅತ್ಮಹತ್ಯೆಗೆ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೇಷ್ಮೆ ಇಲಾಖೆ ಉಪನಿದೇರ್ಶಕ ಕುಮಾರ್ ಘಟನೆ ಸ್ಥಳಕ್ಕೆ ಭೇಟಿ ನೀಡಿ ಮೃತನ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಅತ್ತೆ, ಪತಿ ವರದಕ್ಷಿಣೆ ಕಿರುಕುಳ
ಚಿಂತಾಮಣಿ: ವರದಕ್ಷಿಣೆ ಕಿರುಕುಳ ನೀಡುತ್ತಿರುವ ಪತಿ ಮತ್ತು ಅತ್ತೆ ವಿರುದ್ಧ ಗೃಹಿಣಿ ದೂರು ನೀಡಿದ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಗರಾಜಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಬಟ್ಲಹಳ್ಳಿ ಠಾಣೆ ವ್ಯಾಪ್ತಿಯ ನಾಗರಾಜ ಹೊಸಹಳ್ಳಿ ಗ್ರಾಮದ ಮಮತಾ(25) ಪತಿ ಆನಂದ್ ಹಾಗೂ ಅತ್ತೆ ಚನ್ನಮ್ಮ ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವು
ಗೌರಿಬಿದನೂರು: ಮಂಚೇನಹಳ್ಳಿ ಹೋಬಳಿ ವ್ಯಾಪ್ತಿಯ ಬಿಸಲಹಳ್ಳಿ ಗ್ರಾಮದ ಶ್ರೀನಿವಾಸ ಮೂರ್ತಿ ಮೃತ ದುರ್ದೈವಿ. ಬೆಳಿಗ್ಗೆ ಸಮಯದಲ್ಲಿ ರೈತ ತನ್ನ ತೋಟದ ಸೂಜಿಮಲ್ಲಿಗೆ ಹೂ ಬಿಡಿಸಿ, ಮರಳುವಾಗ ತಮ್ಮ ಪಂಪ್ಸೆಟ್ ಆನ್ ಮಾಡಲು ತೆರಳಿದ ಸಂದರ್ಭದಲ್ಲಿ ಘಟನೆ ನಡೆದಿದೆ. ಗುಂಡಿ ಒತ್ತುವ ಸಂದರ್ಭದಲ್ಲಿ ವಿದ್ಯುತ್ ತ್ರೀ ಪೇಸ್ ವಿದ್ಯುತ್ ವೈರ್ಗಳಿಗೆ ಆಕಸ್ಮಿಕವಾಗಿ ಕೈ ತಗುಲಿ ವಿದ್ಯುತ್ ಶಾಕ್ನಿಂದಾಗಿ ವ್ಯಕ್ತಿ ಮೃತಪಟ್ಟನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುತ್ತಾರೆ. ಮೃತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಮೃತ ರೈತನಿಗೆ ಸರ್ಕಾರ ಪರಿಹಾರ ಧನ ನೀಡಬೇಕೆಂದು ಮಾಜಿ ಜಿಪಂ ಸದಸ್ಯ ಪಿ.ಎನ್. ಜಗನ್ನಾಥ್ ಹಾಗೂ ತಾಲೂಕು ಕೋಚೀಮೂಲ್ ಸದಸ್ಯ ಕಾಂತರಾಜು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

