ಕೋಲಾರ

ನೂತನ ತಹಸೀಲ್ದಾರ್ ನೇಮಕ

Published On :

ಗುಡಿಬಂಡೆ:  ತಾಲೂಕಿನ ನೂತನ ತಹಸೀಲ್ದಾರರಾಗಿ ನಂಜಪ್ಪ ನೇಮಕಗೊಡಿದ್ದಾರೆ. ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಕು. ಶೈಲಜಾ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಸರ್ಕಾರ ನಂಜಪ್ಪರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ತಾಲೂಕಿನ ಕಾರ್ಯ ಯಶಸ್ವಿಯಾಗಿ ಕೈಗೊಳ್ಳಲು ಕೋರಲಾಗಿದೆ.



'ಸಮಾಜದ ಸ್ವಾಸ್ಥ್ಯ ಕಾಪಾಡಿ'
ಕೋಲಾರ/ಶ್ರೀನಿವಾಸಪುರ: ಸಾಮಾಜಿಕ ದೈಹಿಕ ಮಾನಸಿಕ ಭೌದಿಕ ಭಾವನಾತ್ಮಕ ಪರಿಸರ ಸದೃಢವಾಗಿರುವವರು ಆರೋಗ್ಯವಂತರು ಎಂದು ಡಾ.ಬಿ.ವಿ. ವೆಂಕಟಚಲಪತಿ ಹೇಳಿದರು.  ಪಟ್ಟಣದ ಕೊಳ್ಳೂರು ರಸ್ತೆಯ ಸಾಯಿವಿಜಯ ಪದವಿ ಪೂರ್ವ ಕಾಲೇಜಿನಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಮತ್ತು ಶ್ರೀವೆಂಕಟೇಶ್ವರ ಗ್ರಾಮೀಣ ಆರೋಗ್ಯ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಕೆಲವರು ದೇಹಕ್ಕೆ ಇನ್ನು ಕೆಲವರು ಮನಸಿಗೆ ಮಾತ್ರ ವ್ಯಾಯಾಮ ಮಾಡುತ್ತಾರೆ. ಚಂಚಲತೆಯ ಮನಸು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಯೋಗಾಭ್ಯಾಸ ಮತ್ತು ಪ್ರಾಣಾಯಾಮ ಅತ್ಯವಶ್ಯಕವಾಗಿದೆ ಎಂದರು. ವಲಯ ಸಂಯೋಜಕ ಎಸ್. ವೆಂಕಟೇಶ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಡಾ. ವೆಂಕಟೇಶ್, ಸಿದ್ದಾರೆಡ್ಡಿ, ಮದ್ವೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.