ಭರವಸೆ ಮೂಡಿಸಿದ ಸೋನೆ ಮಳೆ
ಮುಳಬಾಗಲು: ಈ ದಿವಸವೂ ಸೇರಿದಂತೆ ಕಳೆದ ಮೂರು ದಿವಸಗಳಿಂದ ಸುರಿಯುತ್ತಿರುವ ಧಾರಾಕಾರವಾದ ಸೊನೆ ಮಳೆ ರೈತಾಪಿಗಳಲ್ಲಿ ಅದರಲ್ಲೂ ಮುಖ್ಯವಾಗಿ ನೆಲಗಡಲೆ ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿಸಿದೆ. ನೆಲಗಡಲೆ ರೈತರ ಪಾಲಿಗೆ ಹಣದ ಕಣಜವೆನ್ನಬಹುದು. ತಕ್ಷಣಕ್ಕೆ ಸರಿಯಾದ ಬೆಲೆ ಸಿಗದಿದ್ದಲ್ಲಿ ಸ್ವಲ್ಪಕಾಲ ದಾಸ್ತಾನು ಮಾಡಬಹುದಾಗಿದೆ. ಉಳುಮೆಯ ನಂತರ ನಾಲ್ಕು ಬಾರಿ ಕಾಲಕಾಲಕ್ಕೆ ಮಳೆ ಸುರಿದರೆ ಫಸಲು ಗ್ಯಾರಂಟಿ. ಈಗ ಬಿದ್ದ ಮಳೆ ಕನಿಷ್ಟ ಇಪ್ಪತ್ತು ದಿವಸಗಳವರೆವಿಗೂ ತೇವಾಂಶವನ್ನು ಕಾಪಾಡಿಕೊಂಡು ಹೋಗಲು ನೆರವಾಗುತ್ತದೆ ಎನ್ನುತ್ತಾರೆ ದೊಡ್ಜಬಂಡಹಳ್ಳಿ ಗ್ರಾಮದ ರೈತ ಹೊಸಪ್ಪ.
ಇನ್ನೆರಡು ತಡಿ ಮಳೆ ಬಿದ್ದರೇ ಸಾಕು ಫಸಲು ಕೈಗೆ ಸಿಗುತ್ತದೆ ಎಂಬುದು ಅವರ ಮಾತು. ತಾಲೂಕಿನಲ್ಲಿ ಒಟ್ಟು 26075 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡಲಾಗುತ್ತದೆ. ಅದರಲ್ಲಿ 8 ಸಾವಿರ ಹೆಕ್ಟೆರ್ಗೂ ಹೆಚ್ಚಿನ ಪ್ರದೇಶದಲ್ಲಿ ನೆಲಗಡಲೆ ಬೆಳೆಯುತ್ತಾರೆ. ನೆಲಗಡಲೆ ನಂತರ ರಾಗಿ ಬೆಳೆಯುತ್ತಾರೆ. ರಾಗಿ ಪರಿಸ್ಥಿತಿ ಸಹ ಮಳೆಯ ಕಾರಣದಿಂದ ಆಶಾದಾಯಕವಾಗಿದೆ. ಇದರೊಂದಿಗೆ ಸೌತೆಕಾಯಿ ಕಳೆದ ವಾರದಿಂದ ಕೆಜಿಗೆ ರು. 22ನಂತೆ ಮಾರಾಟವಾಗಿ ರೈತರ ಕಿಸೆ ತುಂಬಿಸಿದೆ. ಶುಕ್ರವಾರ ಸೌತೆಕಾಯಿ ಅವಕ ಹೆಚ್ಚಾದ ಕಾರಣವಾಗಿ ರು. 12ಕ್ಕೆ ಇಳಿದಿದೆ. ಈ ಬೆಲೆ ಸಹ ತೆಗೆದುಹಾಕುವಂತಾಹುದೇನೂ ಅಲ್ಲ ಎನ್ನುತ್ತಾರೆ ದೊಡ್ಡಬಂಡಹಳ್ಳಿ ಗ್ರಾಮದ ರೈತ ನಾರಾಯಣಪ್ಪ. ಆದರೆ ಇದು ಕಿಲೋಗೆ ರು. 5ಕ್ಕೆ ಇಳಿದರೆ ಮಾತ್ರ ನಷ್ಟ ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

