ಸಂಗೀತೋತ್ಸವಕ್ಕೆ ಜನಸಾಗರ
ಚಿಂತಾಮಣಿ: ಪುರಾಣ ಪ್ರಸಿದ್ಧ ಕೈವಾರದ ಯೋಗಿನಾರೇಯಣ ಮಠದಲ್ಲಿ ನಡೆಯುತ್ತಿರುವ ಮೂರು ದಿನಗಳ ಸಂಗೀತೋತ್ಸವದ ಎರಡನೇ ದಿನ ಭಕ್ತಜನ ಸಾಗರವೇ ಹರಿದು ಬಂತು. ಸಂಗೀತೋತ್ಸವದಲ್ಲಿ ಭಾಗವಹಿಸಲು ದೂರದ ಊರುಗಳಿಂದ ತಂಡೋಪತಂಡವಾಗಿ ಭಕ್ತರು ಬರುತ್ತಿದ್ದಾರೆ. ವಿಜೃಂಭಣೆಯಿಂದ ಶ್ರದ್ಧೆ ಭಕ್ತಿಗಳಿಂದ ಆಚರಿಸುತ್ತಿರುವ ಗುರುಪೂಜಾ ಸಂಗೀತೋತ್ಸವದಲ್ಲಿ ಸಂಗೀತದ ರಸದೌತಣವನ್ನು ಸಂಗೀತ ಪ್ರೇಮಿಗಳು ಸವಿಯುತ್ತಿದ್ದಾರೆ.
ಬೆಳಗಿನಿಂದಲೇ ನಾದಸ್ವರ ವಾದನ, ತವಿಲ್ ವಾದ್ಯಗಳಿಂದ ಎರಡನೇ ದಿನದ ಕಾರ್ಯಕ್ರಮಗಳು ಪ್ರಾರಂಭವಾದವು. ಎ. ವಿಶ್ವನಾಥ್ ಹಾರ್ಮೋನಿಯಂ ಸೋಲೋ, ಚೆನ್ನೈ ಎನ್. ವಿಶ್ವೇಶ್ವರ್ ಕೊಳಲು ವಾದನ, ಬೆಂಗಳೂರಿನ ಮನೋಜ್, ಶಿವಮೊಗ್ಗ ಅನನ್ಯ ಭಾರ್ಗವ, ವರ್ಷಾಕೃಷ್ಣ ಗಾಯನ, ಮೀರಾ ವಿಜಯ ಕುಮಾ ರ್ ವೀಣಾವಾದನ, ಕಾಕಿನಾಡ ಆಕೊಂಡಿ ಶ್ರೀನಿವಾಸರಾಜಾರಾವ್, ಆರ್.ಎಸ್. ಅಕ್ಷತಾ, ಪವನ್ ದೀಪ್, ರೇಖಾ ಹರಿನಾಥ್ ಅವರಿಂದ ಗಾಯನ ಮೂಡಿಬಂದವು.
ಸಂಜೆ ವಿಶೇಷ ಕಾರ್ಯಕ್ರಮದಲ್ಲಿ ಪ್ರಿಯಾ ಸಿಸ್ಟರ್ ಗಾಯನ, ಬಾಲಸಾಯಿ ಚೆನ್ನೈ ಕೊಳಲು, ಯು.ಪಿ. ರಾಜು ಮ್ಯಾಂಡೊಲಿನ್ ವಾದನ, ಚೆನ್ನೈ ಸುಧಾ ರಘುನಾಥನ್ ಗಾಯನ, ಡಾ.ಕದ್ರಿ ಗೋಪಾಲನಾಥನ್ ಸಾಕ್ಸೋಪೋನ್ ವಾದನ ಕೇಳುಗರ ಮನಸೆಳೆಯಿತು. ಇವರಿಗೆ ಪಕ್ಕವಾದ್ಯದಲ್ಲಿ ನೈವೇಲಿ ಸ್ಕಂದ ಸುಬ್ರಮಣ್ಯಂ, ಎಂ.ಎ. ಕೃಷ್ಣಸ್ವಾಮಿ, ಬಿ. ಹರಿಕುಮಾರ್, ಬಿ. ರಾಜಶೇಖರ್ ಸಹಕರಿಸಿದರು.
ಭರತನಾಟ್ಯ ಮೆರಗು: ಸಂಗೀತೋತ್ಸವದಲ್ಲಿ ವಿವಿಧ ವಿದ್ವಾಂಸರ ಸಂಗೀತದೊಂದಿಗೆ ಹರಿಕಥೆ, ಬುರ್ರಕಥೆ, ನಾದಸ್ವರ, ತವಿಲ್, ವೀಣೆ ವಾದನದೊಂದಿಗೆ ಗುರುಪೂಜಾ ಸಂಗೀತೋತ್ಸವಕ್ಕೆ ಭರತನಾಟ್ಯವು ಮೆರಗು ನೀಡಿತು. ತುಮಕೂರು ಬಸಾಗರ್ ತಂಡ, ಚಿಂತಾಮಣಿಯ ಶ್ರೀಮಯೂರಿ ನಾಟ್ಯ ಕಲಾಸಂಸ್ಥೆ ಮತ್ತು ಸಾಯಿ ಕಲಾನಿಕೇತನ್, ನೂಪುರ ಫೈನ್ ಆರ್ಟ್ಸ್ ಅಕಾಡೆಮಿ ರೂಪ ರಾಜೇಶ್ ನಡೆಸಿಕೊಟ್ಟ ಭರತನಾಟ್ಯ ನೋಡುಗರನ್ನು ಮನಸೆಳೆಯಿತು.
ಗುರುಪೂಜೆ ಇಂದು: ಗುರು ಪೌರ್ಣಿಮೆಯಾದ ಶನಿವಾರ ಬೆಳಿಗ್ಗೆ ಬೇತಮಂಗಲ ಗಂಗಾಧರ ಸ್ಮಾರಕ ಸಂಗೀತ ಶಾಲೆಯ ವಿ. ರಮೇಶ್ ನೇತೃತ್ವದಲ್ಲಿ ನಾದಸ್ವರ, ನಂತರ ಗೋಷ್ಠಿ ಗಾಯನ ನಡೆಯುತ್ತದೆ. ಸದ್ಗುರು ತಾತಯ್ಯನವರ ಗುರುಪೂಜೆ ಸೇವೆ, ವಿಶೇಷ ಅಭಿಷೇಕ, ರಾಜೋಪಚಾರ, ಶೋಡಶೋಪಚಾರ, ಅಷ್ಟಾವಧಾನ ಸೇವೆಗಳು ನಡೆಯುತ್ತದೆ. ನಂತರ ಧರ್ಮಾಧಿಕಾರಿಗಳಿಂದ ಸಂದೇಶ ಕಾರ್ಯಕ್ರಮವಿರುತ್ತದೆ.
ಸಂಗೀತೋತ್ಸವದಲ್ಲಿ ಇಂದು: ಬಿ.ಕೆ. ಚಂದ್ರಮೌಳಿ ನೇತೃತ್ವದಲ್ಲಿ ತಾಳವಾದ್ಯ ಕಚೇರಿ, ಡಾ. ಸುಮಾ ಸುಧೀಂದ್ರ ಅವರಿಂದ ವೀಣಾವಾದನ, ವಿವೇಕ್ ಸದಾಶಿವಂ, ವಾನರಾಶಿ ಬಾಲಕೃಷ್ಣ ಭಾಗವತರ್, ತಿರುಪತಿ ಬಿ. ರಘುನಾಥ್, ಮೈಸೂರು ಚಂದನ್ ಕುಮಾರ್, ಎಂ.ಎಸ್. ವಿದ್ಯಾ, ವಿನಯ್ ಶಿರ್ವ, ಪಿ. ರಮಾ ಗಾಯನ ಕಾರ್ಯಕ್ರಮಗಳು ಇರುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

