ಕೋಲಾರ

ಅಪಘಾತದಲ್ಲಿ ವ್ಯಕ್ತಿ ಸಾವು

Published On :

ಕೆಜಿಎಫ್: ಲಾರಿ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗಂಭೀರ ಗಾಯವಾಗಿ ಕೋಲಾರದ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೇತಮಂಗಲ ಠಾಣಾ ವ್ಯಾಪ್ತಿಯ ಅಜ್ಜಪ್ಪನಹಳ್ಳಿ ಕೆರೆ ತಿರುವಿನಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಹೊನ್ನೇನಹಳ್ಳಿ ಗ್ರಾಮದ ರಾಜೇಶ್(23) ಸ್ಥಳದಲ್ಲೇ ಮೃತಪಟ್ಟಿದ್ದು ಆತನ ಸ್ನೇಹಿತ ಮಂಜು ಗಾಯಗೊಂಡಿದ್ದಾರೆ. ಬೇತಮಂಗಲ ಪಿಎಸ್‌ಐ ಗೋವಿಂದಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಲಾರಿ ಚಾಲಕನ್ನು ಬಂಧಿಸಿ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಜೂಜು: 6 ಮಂದಿ ಸೆರೆ
ಕೆಜಿಎಫ್: ಜೂಜು ಅಡ್ಡೆ ಮೇಲೆ ದಾಳಿ ನಡೆಸಿ ಐವರನ್ನು ಬಂಧಿಸಿರುವ ಘಟನೆ ಬೇತಮಂಗಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಳವಾಯಿ ಹೊಸಹಳ್ಳಿ ಗ್ರಾಮದ ರಾಮಚಂದ್ರಪ್ಪ ಎಂಬುವರ ಅಂಗಡಿ ಜೂಜಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಬೇತಮಂಗಳ ಪೊಲೀಸರು ದಾಳಿ ನಡೆಸಿ ವೆಂಕಟೇಶ್, ಸೆಲ್ವರಾಜ್, ಚೆನ್ನರಾಯಪ್ಪ, ಶ್ರೀನಿವಾಸ್ ಹಾಗೂ ರಾಮಚಂದ್ರಪ್ಪ ಎಂಬುವರನ್ನು ಬಂಧಿಸಿ 3,100 ನಗದು, 52 ಇಸ್ಪೀಟ್ ಎಲೆ, ಚಾಪೆ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜೂಜು: ಬಂಧನ: ಜೂಜಾಡುತ್ತಿದ್ದವರನ್ನು ಬಂಧಿಸಿ ನಗದು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ಆಂಡ್ರಸನ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಡಿವಾಳ ಗ್ರಾಮದಿಂದ ತೂಕಲ್‌ಗೆ ಹೋಗುವ ಮುಖ್ಯ ರಸ್ತೆಯ ಬಳಿ ಜೂಜಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ವರದಾಚಲಮೂರ್ತಿ, ಪ್ರಕಾಶ್ ಮತ್ತಿತರರನ್ನು ಬಂಧಿಸಿ ಪಣಕ್ಕಿಟ್ಟಿದ್ದ 500 ನಗದು, 52 ಇಸ್ಪೀಟ್ ಎಲೆ, ಬೈಕ್ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೋಳಿ ಪಂದ್ಯ: ಬಂಧನ
ಕೆಜಿಎಫ್: ಕೋಳಿ ಪಂದ್ಯ ಆಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಪಣವಾಗಿಟ್ಟಿದ್ದ ನಗದು ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ಆಂಡ್ರಸನ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಜಪೇಟೆ ಮುಖ್ಯ ರಸ್ತೆಯ ಕೆ.ಸಿ.ರೆಡ್ಡಿ ಗಾಂಡ್ಲಹಳ್ಳಿ ತಿರುವಿನಲ್ಲಿ ಕೋಳಿ ಪಂದ್ಯ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಕೋಳಿ ಪಂದ್ಯದಲ್ಲಿ ತೊಡಗಿದ್ದ ವೆಂಕಟರಾಮಪ್ಪ, ಸಂಪತ್, ವೆಂಕಟಕೃಷ್ಣ, ವೆಂಕಟೇಶ್ ಹಾಗೂ ಇತರರನ್ನು ಬಂಧಿಸಿ ಆಟಕ್ಕೆ ಇಟ್ಟಿದ್ದ ಒಂದು ಕೋಳಿ, ನಗದು, ಒಂದು ಬೈಕ್ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಗುಜರಿ ಅಂಗಡಿಯಲ್ಲಿ ತನಿಖೆ
ಚಿಂತಾಮಣಿ: ಬೋರ್‌ವೆಲ್ ಕೇಬಲ್ ಕಳವು ಮಾಡಿ ಮಾರಾಟ ಮಾಡಿದ ಆರೋಪದ ಮೇಲೆ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಠಾಣೆ ಪೊಲೀಸರು ನಗರದ ಗುಜರಿ ಅಂಗಡಿಯಲ್ಲಿ ತನಿಖೆ ನಡೆಸಿದರು. ನಗರದ ಗಜಾನನ ವೃತ್ತದ ಬಳಿ ಇರುವ ವೆಂಕಟಲಕ್ಷ್ಮಮ್ಮ ಎಂಬುವರ ಗುಜರಿ ಅಂಗಡಿಗೆ ಚಂದ್ರ ಹಾಗೂ ಶಿವು ಎಂಬ ಆರೋಪಿಗಳು ಸುಮಾರು 20 ಸಾವಿರ ರುಪಾಯಿ ಬೆಲೆ ಬಾಳುವ ಬೋರ್‌ವೆಲ್ ಕೇಬಲ್ ಮಾರಾಟ ಮಾಡಿದ ಆರೋಪದ ಮೇಲೆ ಪಾತಪಾಳ್ಯ ಠಾಣೆ ಸಬ್‌ಇನ್ಸ್‌ಪೆಕ್ಟರ್ ಕೆ.ಸಿ. ವಿಜಯ್‌ಕುಮಾರ್ ಹಾಗೂ ಸಿಬ್ಬಂದಿ ತನಿಖೆ ನಡೆಸಿತು. ಕಳೆದ ಹಲವು ದಿನಗಳ ಹಿಂದೆ ಪಾತಪಾಳ್ಯ ಸುತ್ತಮುತ್ತಲಿನ ಬೋರ್‌ವೆಲ್‌ಗಳಿಗೆ ಅಳವಡಿಸಿರುವ ಬೆಲೆ ಬಾಳುವ ಕೇಬಲ್ ಕಳವು ಮಾಡಿದ್ದು, ಇಬ್ಬರು ಯುವಕರನ್ನು ಪಾತಪಾಳ್ಯ ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.