ಕೋಲಾರ

ಸಮಗ್ರ ವಿಷಯಗಳು ಚರ್ಚೆಯಾಗಲಿ

Published On :

ಮುಳಬಾಗಲು: ಸಾಹಿತ್ಯ ಸಮ್ಮೇಳನಗಳಲ್ಲಿ ಭಾಷೆ, ಸಾಹಿತ್ಯ, ಅಭಿವೃದ್ಧಿ ಬಗ್ಗೆ ಮಾತ್ರ ಚರ್ಚೆ ನಡೆಸದೇ ಈ ಭೂಮಿಯಲ್ಲಿ ಬದುಕುವ ಸಕಲ ಜೀವರಾಶಿಗಳ ಬಗ್ಗೆ ಚಿಂತನೆಯಾಗಬೇಕು ಎಂದು ವಿಮರ್ಶಕ ನಂಗಲಿ ಚಂದ್ರಶೇಖರ್ ಹೇಳಿದರು.
ಪಟ್ಟಣದ ಡಿವಿಜಿ ಗಡಿ ಭವನದಲ್ಲಿ ಬುಧವಾರ ರಾತ್ರಿ ಮುಕ್ತಾಯಗೊಂಡ ಮೂರನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, “®ÚÂÑÚÁÚ ಮತ್ತು ಸಕಲ ಜೀವರಾಶಿಗಳ ಬಗ್ಗೆ ಹೆಚ್ಚಿನ ರೀತಿಯಲ್ಲಿ ಅಧ್ಯಯನ ಮಾಡದೆ ಇರುವುದು ವಿಷಾದನಿಯ. ಮುಳಬಾಗಲು ಕನ್ನಡ ಸಾಹಿತ್ಯ ಪರಿಷತ್ ಸಂಘಟಕರು ಕೌಂಡಿನ್ಯ ನದಿ ವಲಯ ಉಳಿಸಿ ಮರಳು ಗಣಿಗಾರಿಕೆ ನಿಲ್ಲಿಸಿ ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ ಮಾತನಾಡಿ, ಪ್ರತಿಯೊಬ್ಬರು ನಾಡು ನುಡಿಯ ಮೇಲೆ ಅಭಿಮಾನಹೊಂದಿರಬೇಕು ಎಂದರು.  ಕನ್ನಡ ವಿಷಯದಲ್ಲಿ ಅತಿ ಅಂಕಪಡೆದ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಗೆ ಬಹುಮಾನ ವಿತರಿಸಲಾಯಿತು.
ಸಮ್ಮೇಳನಾಧ್ಯಕ್ಷ ವಿ.ವೆಂಕಟಮುನಿಯಪ್ಪ, ಕಸಾಪ ಪ್ರಧಾನ ಕಾರ್ಯದರ್ಶಿ ಎಂ.ವಿ.ಜನಾರ್ಧನ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಜಗದೀಶ್, ಮಾಜಿ ಅಧ್ಯಕ್ಷ ಸಿ.ಎನ್.ರಾಜಕುಮಾರ್, ಜೆಮಿನಿ ರಮೇಶ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಇ.ಶ್ರೀನಿವಾಸಗೌಡ, ಪ್ರಧಾನ ಕಾರ್ಯದರ್ಶಿ ಶಂಕರ್ಕೇಸರಿ, ಶಿವಣ್ಣ,ಚಲಪತಿ ಮುಂತಾದವರು ಭಾಗವಹಿಸಿದ್ದರು.
ಮಾಲೂರು ಸಮ್ಮೇಳನ: ಪೂರ್ವಭಾವಿ ಚರ್ಚೆ
ಮಾಲೂರು: ತಾಲೂಕಿನ ಚಿಕ್ಕತಿರುಪತಿಯಲ್ಲಿ ಈ ತಿಂಗಳ ಕೊನೆ ವಾರದಲ್ಲಿ ನಡೆಯಲಿರುವ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ತಾಲೂಕು ಕಸಾಪ ಪದಾಧಿಕಾರಿಗಳು ಬ್ರಾಹ್ಮಣರ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಂಡಿದ್ದರು.
ತಾಲೂಕು ಕಸಾಪ ಅಧ್ಯಕ್ಷ ಮಧುಸೂದನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮ್ಮೇಳನ ಯಶಸ್ವಿಗೆ ರೂಪರೇಷ ಸಿದ್ಧಪಡಿಸಲಾಯಿತು. ಪ್ರಚಾರ, ವೇದಿಕೆ ನಿರ್ವಹಣೆ ಸಮಿತಿ ಸೇರಿದಂತೆ ಅನೇಕ ಸಮಿತಿಗಳನ್ನು ರಚಿಸಲಾಯಿತು. ಕಾರ್ಯಕ್ರಮಕ್ಕೆ ತಗಲಬಹುದಾದ ಖರ್ಚಿನ ಬಗ್ಗೆ ಹಾಗೂ ಸಂಪನ್ಮೂಲ ಕ್ರೋಡಿಕರಣ ಬಗ್ಗೆ ಚರ್ಚಿಸಲಾಯಿತು.
 ಸಮ್ಮೇಳನದಲ್ಲಿ ಭಾಗವಹಿಸುವವರಿಗಾಗಿ ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ, ಕಾಫಿ-ಟೀ ನೀಡುವ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲು ತೀರ್ಮಾನಿಸಲಾಯಿತು. 500 ಪ್ರತಿನಿಧಿಗಳಿಗೆ ಬ್ಯಾಗ್ ಹಾಗೂ ಸ್ಮರಣ ಸಂಚಿಕೆ ನೀಡಲು ಸಭೆ ಒಪ್ಪಿಗೆ ಸೂಚಿಸಿತು.
ಸಾಹಿತಿಗಳಿಂದ ನಾಡಿನ ಸಾಹಿತ್ಯ, ಕಲೆ, ಸಂಸ್ಕೃತಿ, ಪರಂಪರೆ ಹಾಗೂ ತಾಲೂಕಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಉಪನ್ಯಾಸಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಸಮ್ಮೇಳನದ ಅಧ್ಯಕ್ಷೆರಾಗಿ ಆಯ್ಕೆಯಾಗಿರುವ ವೆಂಕಟಾಪು ಸತ್ಯಂ, ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, ತಾಪಂ ಮಾಜಿ ಅಧ್ಯಕ್ಷ ಸಂಪಂಗೆರೆ ಮುನಿರಾಜ್, ತಾಪಂ ಸದಸ್ಯೆ ಮಂಗಳಾ ರಮೇಶ್, ಜಿಲ್ಲಾ ಕಸಾಪ ಸಮಿತಿಯ ಎಸ್.ನಾರಾಯಣಸ್ವಾಮಿ, ಡಿ.ಎಂ.ವಿಜಯಕುಮಾರ್, ಶ್ರೀಧರ್, ಗ್ರಾಪಂ ಉಪಾಧ್ಯಕ್ಷ ವಿ.ನಾಗೇಶ್, ಸದಸ್ಯ ಕಲ್ಕೇರೆ ಕೃಷ್ಣಪ್ಪ, ವೆಂಕಟೇಶ್, ದೇವಾಲಯ ಸಮಿತಿ ಅಧ್ಯಕ್ಷ ಟಿ.ಆರ್.ವೆಂಕಟೇಶ್‌ಗೌಡ, ಪಿ.ಶ್ರೀನಾಥ್, ಟಿ.ವಿ.ಮುರಳಿ,ಧರಣಿ ಬಾಬು, ಹೋಬಳಿ ಘಟಕದ ಅಧ್ಯಕ್ಷ ವೆಂಕಟಪತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.