ಕೋಲಾರ

ಅಂತಾರಾಜ್ಯ ಡಕಾಯಿತರ ಸೆರೆ

Published On :

ಗೌರಿಬಿದನೂರು: ಡಕಾಯಿತರ ಬಂಧನಕ್ಕೆ ಹೋದ ಪೊಲೀಸರ ಮೇಲೆ ದರೋಡೆಕೋರರು ಮಾರಕಾಸ್ತ್ರಗಳಿಂದ ದಾಳಿ ನೆಡೆಸಿದ ಪರಿಣಾಮ ಮೂರು ಮಂದಿ ಪೊಲೀಸರು ಗಾಯಗೊಂಡಿದ್ದಾರೆ.
ತಾಲೂಕಿನ ಮುದುಗಾನಕುಂಟೆ ಬಳಿಯ ಫಾರಂ ಹೌಸ್ ಮೇಲೆ ದರೋಡೆ ಕೋರರ ದಾಳಿಯಾಗಿದೆ ಎಂಬ ಮಾಹಿತಿ ಮೇಲೆ ಬುಧವಾರ ಮಧ್ಯರಾತ್ರಿ ಪೊಲೀಸರು ಸ್ಥಳಕ್ಕೆ ಬಂದಿದ್ದು, ಡಕಾಯಿತರನ್ನು ಬಂಧಿಸಲು ಮುಂದಾದಾಗ ಘಟನೆ ನಡೆದಿದೆ. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಇಬ್ಬರು ಡಕಾಯಿತರನ್ನು ಬಂಧಿಸಿದ್ದಾರೆ. ಬಂಧಿತರನ್ನು ಯರ್ರಗುಂಡ ಮಧು ಮತ್ತು ರಾಮಾಂಜಿ ಎಂದು ಗುರ್ತಿಸಲಾಗಿದೆ. ಪ್ರಮುಖ ಆರೋಪಿಯನ್ನು ಬಂಧಿಸಲು ಪೊಲೀಸರು ಆಂಧ್ರದ ಹಿಂದೂಪುರಕ್ಕೆ ತೆರಳಿ ಅಂತಾರಾಜ್ಯ ಡಕಾಯಿತರ ತಂಡದ ಮುಖ್ಯಸ್ಥ ದುರ್ಗಾಪ್ರಸಾದ್ ಅಲಿಯಾಸ್ ಎರುಕಲ ಕಾವಡಿ ದುರ್ಗನನ್ನೂ ಆಂಧ್ರ ಪೊಲೀಸರು ಬಂಧಿಸಿದ್ದಾರೆ.
ಡಕಾಯಿತರ ದಾಳಿಯಲ್ಲಿ ಗಾಯಗೊಂಡ ಪೊಲೀಸ್ ಪೇದೆ ಲಿಂಗಪ್ಪ ಸ್ಥಳೀಯ ಮಾನಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಗೋಪೀನಾಥ್ ಅವರು ಭೇಟಿ ನೀಡಿ ಧೈರ್ಯ ತುಂಬಿ ಘಟನೆ ಬಗ್ಗೆ ವಿವರ ಪಡೆದರು. ದಾಳಿ ಸಮಯದಲ್ಲಿ ಪುರ ಠಾಣೆ ಪಿಎಸ್‌ಐ ಬೈರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪೀನಾಥ್,  ಪುರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿಯ ತಂಡಗಳು ದಾಳಿ ನಡೆಸಿ 3 ಜನ ಡಕಾಯಿತರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳಾದ ಐಜಿಪಿ ಸೈಯದ್ ಉಲ್ಫತ್ ಹುಸೇನ್, ವೃತ್ತ ನಿರೀಕ್ಷಕ ಕೆ. ನಾಗರಾಜು ಸ್ಥಳಪರಿಶೀಲನೆ ನಡೆಸಿದರು.
ಡಕಾಯಿತಿ ಕಾವಡಿ ದುರ್ಗ ಹಿನ್ನಲೆ: ಅಂತಾರಾಜ್ಯ ದರೋಡೆ ಕೋರನಾದ ದುರ್ಗಾಪ್ರಸಾದ್ ತಂಡಗಳನ್ನು ಕಟ್ಟಿಕೊಂಡು ದೊಡ್ಡ ಮನೆ, ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಬೈಕಿನಲ್ಲಿಯೆ ದರೋಡೆ ಮಾಡುವುದರಲ್ಲಿ ನಿಸ್ಸೀಮನಾಗಿದ್ದಾನೆ. ಈತ ಹೆಚ್ಚಾಗಿ ಕರ್ನಾಟಕದಲ್ಲಿ ದರೋಡೆ ನಡೆಸಿ ಆಂಧ್ರದಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದಾನೆ. ಈತನಿಗೆ ಇಬ್ಬರು ಹೆಂಡತಿಯರಿದ್ದು,  ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ಆಂಧ್ರ ಪೊಲೀಸರಿಗೆ ಕೆಜಿಗಟ್ಟಲೆ ಬೆಳ್ಳಿ ಬಂಗಾರ ನೀಡುವ ಆಸಾಮಿ ಎನ್ನಲಾಗಿದೆ. ಈತನ ವಿರುದ್ಧ ಆಂಧ್ರ ಮತ್ತು ಕರ್ನಾಟಕದಲ್ಲಿ ನೂರಾರು ದರೋಡೆ ಪ್ರಕರಣಗಳಿವೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.