ಕಾಮಕ್ಕೆ ಫುಲ್ಸ್ಟಾಪ್ ಯಾವಾಗ?
ಮಾಲೂರು: ಮಾನಸಿಕ ಅಸ್ವಸ್ಥ ಯುವತಿಯೂಬ್ಬಳನ್ನು ಯುವಕನೂಬ್ಬ ಮಾನಭಂಗ ಮಾಡಿದ ಘಟನೆ ಪಟ್ಟಣದ ಕುಂಬಾರ ಪೇಟೆಯ ಅಗ್ರಹಾರ ಬೀದಿಯಲ್ಲಿ ಗುರುವಾರ ನೆಡೆದಿದೆ. ಮನೆ ಮುಂದೆ ಕುಳಿತ್ತಿದ್ದ 21 ವರ್ಷ ವಯಸ್ಸಿನ ಮಾನಸಿಕ ಅಸ್ವಸ್ಥೆ ಮಂಗಳ(ಹೆಸರು ಬದಲಾಯಿಸಲಾಗಿದೆ)ಳನ್ನು ಪುಸಲಾಯಿಸಿದ ಆರೋಪಿ ನಾಗರಾಜ್(23) ಆಕೆಯನ್ನು ಮನೆ ಹಿಂದಿನ ಸಂದಿಗೆ ಕರೆದುಕೊಂಡು ಹೋಗಿ ಮಾನಭಂಗ ಮಾಡಿದ್ದಾನೆ. ಆಕೆ ಆಳುತ್ತ ಮನೆಗೆ ಬಂದಾಗ ಅದೇ ಪ್ರದೇಶದಲ್ಲಿ ವಾಸವಾಗಿರುವ ಆರೋಪಿ ನಾಗರಾಜ್ನ ಈ ಕೃತ್ಯ ಬೆಳಕಿಗೆ ಬಂದಿದೆ. ಕಾಂಕ್ರೀಟ್ ಹಾಕುವ ಕೆಲಸ ಮಾಡುತ್ತಿರುವ ನಾಗರಾಜ್ ಈ ಹಿಂದೆ ಹಲವು ಬಾರಿ ಇತರೆ ಮಹಿಳೆಯರನ್ನು ಬಲತ್ಕಾರಿಸುವ ಯತ್ನ ಮಾಡಿದ್ದ ಎಂದು ಸಂತ್ರಸ್ತೆಯ ಅಜ್ಜಿ ತಿಳಿಸಿದ್ದಾರೆ. ಯುವತಿಯ ತಂದೆ ಈ ಸಂಬಂಧ ದೂರು ನೀಡಿದ್ದಾರೆ. ಇನ್ಸ್ಪೆಕ್ಟರ್ ಶಿವುಕುಮಾರ್ ಹಾಗೂ ಎಸ್ಐ ದಯಾನಂದ್ ಆರೋಪಿ ನಾಗರಾಜ್ ನನ್ನು ಬಂಧಿಸಿದ್ದಾರೆ. ವೈದ್ಯಕೀಯ ಚಿಕಿತ್ಸೆಗಾಗಿ ಯುವತಿಯನ್ನು ಕೋಲಾರದ ಆಸ್ಪತ್ರೆಗೆ ಕಳುಹಿಸಲಾಗಿದೆ. ಘಟನಾ ಸ್ಧಳಕ್ಕೆ ಆಡಿಷನಲ್ ಎಸ್ಪಿ ಜಮೀಲ್ ಹಾಗೂ ಡಿವೈಎಸ್ಪಿ ಸಿದ್ದೇಶ್ವರ ಭೇಟಿ ನೀಡಿದ್ದರು.
ಬಾಲಕಿ ಮೇಲೆ ಅತ್ಯಾಚಾರ
ಮುಳಬಾಗಲು: ತಾಲೂಕಿನ ಕೆಂಪಾಪುರ ಗ್ರಾಮದಲ್ಲಿ ಬಾಲಕಿಯ ಮೇಲೆ ಯುವಕನೊಬ್ಬ ಅತ್ಯಾಚಾರ ನಡೆದ ಘಟನೆ ನಡೆದಿದೆ. ಕೆಂಪಾಪುರ ಗ್ರಾಮದ ಆರೋಪಿ ನಾಗಾರ್ಜುನ್(19)ನನ್ನು ನಂಗಲಿ ಪೊಲೀಸರು ಬಂಧಿಸಿದ್ದಾರೆ. ತೀವ್ರ ರಕ್ತಸ್ರಾವಕ್ಕೊಳಗಾದ ಬಾಲಕಿಯನ್ನು ಮುಳಬಾಗಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಗೆ ಆಮೀಷವೊಡ್ಡಿ ಅತ್ಯಾಚಾರವೆಸಗಿದ್ದಾನೆ ಎಂದು ಪೋಷಕರು ಪೊಲೀಸರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕುರಿಗಾಹಿ ಯುವತಿಯ ಅತ್ಯಾಚಾರಕ್ಕೆ ಯತ್ನ
ಕೋಲಾರ: ಕುರಿಗಾಹಿ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದ್ದು, ಈ ಸಂಬಂಧ ಒಬ್ಬನನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರಕ್ಕೆ ಹೊಂದಿಕೊಂಡಿರುವ ಕೋಲಾರಮ್ಮ ಕೆರೆ ಪ್ರದೇಶದಲ್ಲಿ ಈ ಘಟನೆ ಗುರುವಾರ ಮಧ್ಯಾಹ್ನ ನಡೆದಿದ್ದು, ಇಲ್ಲಿನ ಅಂಬೇಡ್ಕರ್ ನಗರದ ನಿವಾಸಿ, ವಿವಾಹಿತ ಹಾಗೂ ಪೌರಕಾರ್ಮಿಕ ಮುನಿಯಪ್ಪ (30) ಆರೋಪಿಯಾಗಿದ್ದಾನೆ. ಮಾನಸಿಕ ಅಸ್ವಸ್ಥೆಯಾಗಿದ್ದ 19 ವರ್ಷದ ಹುಡುಗಿ ಅತ್ಯಾಚಾರ ಯತ್ನಕ್ಕೊಳಗಾದವಳು. ಸಂತ್ರಸ್ತೆ ಕೆರೆಯಂಗಳದಲ್ಲಿ ದಿನಾಲೂ ಕುರಿ ಮೇಯಿಸುತ್ತಿದ್ದಳು. ಆರೋಪಿಗೆ ಯುವತಿಗೆ ಅನೇಕ ಬಾರಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಯುವತಿ ಪೋಷಕರಿಗೆ ತಿಳಿಸಿದ್ದಳು. ಪೋಷಕರು ಕೂಡಾ ಆರೋಪಿಗೆ ಅನೇಕ ಬಾರಿ ಎಚ್ಚರಿಕೆ ನೀಡಿದ್ದರು. ಆದರೂ ಆತ ತನ್ನ ಚಾಳಿಯನ್ನು ಮುಂದುವರಿಸಿದ್ದ. ಅದರಂತೆ ಗುರುವಾರ ಬಲವಂತವಾಗಿ ಆಕೆಯ ಬಟ್ಟೆಯನ್ನು ಕಳಚಲು ಮುಂದಾಗಿದ್ದಾನೆ. ಆಗ ಆಕೆ ಕಿರುಚಿಕೊಂಡಿದ್ದಾಳೆ. ಆಗ ಗ್ರಾಮಸ್ಥರು ಅಲ್ಲಿಗೆ ಆಗಮಿಸಿ, ಆರೋಪಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಹುಡುಗಿ ಹಾಗೂ ಪೋಷಕರ ಹೇಳಿಕೆಯನ್ನು ದಾಖಲಿಸಿಕೊಂಡು ಪೊಲೀಸರು ವಿಚಾರಣೆಯನ್ನು ಮುಂದುವರಿಸಿದ್ದಾರೆ.
ರಾಜಿ ಪ್ರಯತ್ನ: ಹುಡುಗಿಗೆ ಲೈಂಗಿಕ ಕಿರುಕುಳ ಆರೋಪದಲ್ಲಿ ಸಿಕ್ಕಿ ಬಿದ್ದ ಯುವಕನ ಪರವಾಗಿ ಅನೇಕ ಮಂದಿ ಠಾಣೆ ಬಳಿ ಜಮಾಯಿಸಿ, ಹುಡುಗಿಯ ಪೋಷಕರನ್ನು ಮನಮೊಲಿಸಿ, ಆಗಿದ್ದಾಯಿತು ಹೆಣ್ಣು ಮಗುವಿನ ಭವಿಷ್ಯ ನೋಡಿ ಸುಮ್ಮನೆ ಟಿವಿ-ಪೇಪರ್ಗಳಲ್ಲಿ ಬಂದರೆ ಮಾನ ಹರಾಜಾಗುತ್ತದೆ. ಇದನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದು ಮನವೊಲಿಸಿ ರಾಜಿಗೆ ಒಪ್ಪಿಸುವ ಯತ್ನ ಮಾಡಿದ್ದಾರೆ. ಆದರೆ ಅದು ಫಲಕೊಟ್ಟಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

